Advertisement

ಫೀಡರ್‌ ಸೇವೆ ಒದಗಿಸಿದ ಬಿಎಂಟಿಸಿ 

12:42 PM Jun 17, 2017 | Team Udayavani |

ಬೆಂಗಳೂರು: ನಾಗಸಂದ್ರ-ಯಲಚೇನಹಳ್ಳಿ ನಡುವಿನ ಮೆಟ್ರೋ ಸಾರ್ವಜನಿಕ ಸಂಚಾರ ಸೇವೆಗೆ ಪೂರಕವಾಗಿ ಜೂನ್‌ 19ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) “ಸಂಪರ್ಕ ಸೇವೆ’ಗಳನ್ನು ಆರಂಭಿಸಲಿದೆ. ಒಟ್ಟು 13 ವಿವಿಧ ಮಾರ್ಗಗಳಿಂದ 120 ಅನುಸೂಚಿ (ಶೆಡ್ಯುಲ್‌)ಗಳೊಂದಿಗೆ 1,918 ಏಕಮುಖ ಟ್ರಿಪ್‌ಗ್ಳನ್ನು ಪ್ರತಿ 10ರಿಂದ 15 ನಿಮಿಷಗಳ ಅಂತರದಲ್ಲಿ ನೀಡಲಾಗುತ್ತಿದೆ. 

Advertisement

ಎಲ್ಲಿಂದ ಎಲ್ಲಿ ಸೇವೆ?: ಶಾಂತಿನಗರ ಟಿಟಿಎಂಸಿಯಿಂದ ವಿಜಯನಗರ ಮೆಟ್ರೋ ನಿಲ್ದಾಣ ನಡುವೆ 13 ಶೆಡ್ಯುಲ್‌ಗ‌ಳು, ಗೊಟ್ಟಿಗೆರೆಯಿಂದ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ 15 ಶೆಡ್ಯುಲ್‌, ಜಯನಗರ ಬಸ್‌ ನಿಲ್ದಾಣದಿಂದ ನಾಯಂಡಹಳ್ಳಿ 11 ಶೆಡ್ಯುಲ್‌, ಹುಳಿಮಾವು-ಯಲಚೇನಹಳ್ಳಿ-ಜೆ.ಪಿ.ನಗರ-ಹುಳಿಮಾವು ನಡುವೆ ಎರಡು ಮಾರ್ಗಗಳಲ್ಲಿ ತಲಾ 7, ಜಯನಗರದಿಂದ ನಾರಾಯಣನಗರ 3ನೇ ಹಂತದ ನಡುವೆ 2, ಜಾಲಹಳ್ಳಿ-ವಿದ್ಯಾರಣ್ಯಪುರ 6, ನಾಗಸಂದ್ರ-ಚಿಕ್ಕಬಾಣಾವರ 5, ನಾಗಸಂದ್ರ-ಬ್ಯಾಡರಹಳ್ಳಿ 7, ಬೈಯಪ್ಪನಹಳ್ಳಿ-ಕೆಂಗೇರಿ 6, ನಾಗಸಂದ್ರ-ನಾಗಸಂದ್ರ ಮೆಟ್ರೋ ನಿಲ್ದಾಣ 9, ನಾಗಸಂದ್ರ-ಕಾಚೋಹಳ್ಳಿ 7 ಶೆಡ್ಯುಲ್‌ಗ‌ಳು ಸೇರಿದಂತೆ 101 ಶೆಡ್ಯುಲ್‌ಗ‌ಳು ಉದ್ದೇಶಿತ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. 

ಈ ಸೇವೆ ಆರಂಭಿಸುವ ಮುನ್ನ ಈ ಸಂಬಂಧ ಸಾರ್ವಜನಿಕರಿಂದ, ಸಾಮಾಜಿಕ ಜಾಲತಾಣ (ಟ್ವಿಟರ್‌, ಫೇಸ್‌ ಬುಕ್‌), ವೆಬ್‌ಸೈಟ್‌ ಹಾಗೂ ನೇರವಾಗಿ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಸಾರಿಗೆ ಪರಿಣಿತರೊಂದಿಗೆ ವಿಶ್ಲೇಷಿಸಿ ನಂತರ  ರೂಪಿಸಲಾಗಿದೆ. 

ಈಗಾಗಲೇ ಪೂರ್ವ-ಪಶ್ಚಿಮ ಮೆಟ್ರೋ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ರೈಲು ಮಾರ್ಗಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸೆಯಿಂದ 16 ಮಾರ್ಗಗಳಿಂದ 85 ಅನುಸೂಚಿಗಳೊಂದಿಗೆ 1,224 ಏಕಮುಖ ಸುತ್ತುವಳಿಗಳನ್ನು 10 ರಿಂದ 15 ನಿಮಿಷಗಳ ಅಂತರದಲ್ಲಿ ಸಂಪರ್ಕ ಸೇವೆಯನ್ನು ಒದಗಿಸಲಾಗುತ್ತಿದೆ. ಅಂದರೆ ಒಟ್ಟಾರೆ 42.3 ಕಿ.ಮೀ. ಮೆಟ್ರೋ ಮಾರ್ಗದಲ್ಲಿ 29 ಮಾರ್ಗಗಳಿಂದ 205 ಅನುಸೂಚಿಗಳೊಂದಿಗೆ 3,142 ಏಕಮುಖ ಸುತ್ತುವಳಿಗಳಿಂದ ಮೆಟ್ರೋ ಸಂಪರ್ಕ ಸೇವೆಯನ್ನು ಒದಗಿಸಿದಂತಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next