ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳು ಮಾರಾಟಕ್ಕಿವೆ. ಒಂದು ಲಕ್ಷ ರೂಪಾಯಿಗೆ ಒಂದು ಬಸ್! ಹೌದು, 7 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹೆಚ್ಚುವರಿ ಬಸ್ ಗಳನ್ನು ಬಿಎಂಟಿಸಿಯು ಮಾರಾಟಕ್ಕಿಟ್ಟಿದೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆಗೆ ಕಣ ರೆಡಿ: ದ್ರೌಪದಿ ಮುರ್ಮು Vs ಯಶವಂತ್ ಸಿನ್ಹಾ
ಒಂದು ಬಸ್‌ಗೆ ಲಕ್ಷ ರೂ. ನಿಗದಿಪಡಿಸಿದೆ. ಆದರೆ, ಈ “ಆಫರ್’ ತನ್ನದೇ ಸಹೋದರ ಸಂಸ್ಥೆಯಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ ಡಬ್ಲ್ಯುಕೆಆರ್‌ಟಿಸಿ)ಕ್ಕೆ ಮಾತ್ರ ಅನ್ವಯ.
“ತನ್ನಲ್ಲಿರುವ ಹೆಚ್ಚುವರಿ ಬಸ್‌ಗಳನ್ನು ಬಿಎಂಟಿಸಿಯು ಎನ್‌ಡಬ್ಲ್ಯುಕೆಆರ್‌ಟಿಸಿಗೆ ನೀಡಲು ನಿರ್ಧರಿಸಿ, ಈ ಸಂಬಂಧ ನಿಗಮಕ್ಕೆ ಪ್ರಸ್ತಾವನೆ ನೀಡಿದೆ. ಹೀಗೆ ನೀಡುವ
ಹೆಚ್ಚುವರಿ ಬಸ್‌ಗಳಿಗೆ ಕನಿಷ್ಠ ಬೆಲೆ ಅಂದರೆ ಬಸ್‌ವೊಂದಕ್ಕೆ ಲಕ್ಷ ರೂ. ನಿಗದಿಪಡಿಸಿದೆ.
ಆದರೆ, ಇದು ಕೇವಲ ಎನ್‌ಡಬ್ಲ್ಯುಕೆಆರ್ ಟಿಸಿಗೆ ಸೀಮಿತವಾಗಿರಲಿದೆ. ಯಾಕೆಂದರೆ, ನಮ್ಮಲ್ಲಿ ಹೆಚ್ಚುವರಿಯಾಗಿ ಕಾರ್ಯಾಚರಣೆಯಾಗದೆ ನಿಂತ ಬಸ್‌ಗಳನ್ನು ನಮ್ಮದೇ ಸಹೋದರ ಸಂಸ್ಥೆಗೆ ಅನುಕೂಲ ಆಗಲಿ ಎಂಬ ಉದ್ದೇಶ ಇದರ ಹಿಂದಿದೆ’ ಎಂದು ಬಿಎಂಟಿಸಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. “ಆದರೆ, ಎನ್‌ಡಬ್ಲ್ಯುಕೆಆರ್ ಟಿಸಿಯಿಂದ ಇದಕ್ಕೆ ಈವರೆಗೆ ಪೂರಕ ಸ್ಪಂದನೆ ದೊರೆತಿಲ್ಲ. ಹಾಗಾಗಿ, ಪ್ರಸ್ತಾವನೆ ಆಧರಿಸಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಉಳಿದ ಸಾರಿಗೆ ಸಂಸ್ಥೆಗಳನ್ನೂ ಈ ಬಗ್ಗೆ ಕೇಳಿಲ್ಲ’ ಎಂದೂ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.