ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಬಿಎಂಟಿಸಿಯ 3397 ಮಂದಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಬಿಎಂಟಿಸಿ ಆಡಳಿತ ಮಂಡಳಿ ಮುಂದಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ಹೇರಿದ್ದ ಸಂದರ್ಭ ಮೂರು ಪಾಳಿಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ನಿರ್ವಹಿಸಿದ ಒಟ್ಟು 3397 ಮಂದಿ ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ದಿನ ಒಂದಕ್ಕೆ 250 ರೂಪಾಯಿಗಳಂತೆ ಬೋನಸ್ ನೀಡಲು ಬಿಎಂಟಿಸಿ ನಿರ್ಧರಿಸಿದೆ.
ಈ ಕುರಿತು ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರಿಗೆ ಸಾರಿಗೆ ಸೌಲಭ್ಯವವನ್ನು ಒದಗಿಸಿತ್ತು.
3,397 ನೌಕರರು 38,370 ದಿನಗಳು ಕರ್ತವ್ಯ ನಿರ್ವಹಿಸಿದ್ದು ಪ್ರತಿ ಒಂದು ದಿನಕ್ಕೆ ರೂ.250ರಂತೆ ಒಟ್ಟು ರೂ.95,92,500 ವಿಶೇಷ ಭತ್ಯೆಯನ್ನು ಪಾವತಿಸಲು ಅನುಮೋದನೆ ನೀಡಿದೆ.