Advertisement

ಮೀಠಿ ನದಿ ಸುಂದರೀಕರಣಕ್ಕೆ ತಜ್ಞರ ಸಮಿತಿ ರಚನೆ; ಮುಂಬಯಿ ಮಹಾನಗರ ಪಾಲಿಕೆ

05:48 PM Aug 27, 2020 | mahesh |

ಮುಂಬಯಿ: ನಗರದ ಹೃದಯಭಾಗದಲ್ಲಿರುವ 15 ಕಿಲೋಮೀಟರ್‌ ಉದ್ದದ ಮೀಠಿ ನದಿಯ ಸುಂದರೀಕರಣಕ್ಕೆ ಮುಂಬಯಿ ಮಹಾನಗರ ಪಾಲಿಕೆಯ ವಿಸ್ತಾರವಾದ ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಕಸದ ಹೊದಿಕೆಯಿಂದ ಮುಚ್ಚಿಹೋಗಿರುವ ಮೀಠಿ ನದಿಯು ಪೊವಾಯಿಂದ ಪ್ರಾರಂಭವಾಗಿ ಮಹೀಮ್‌ ಸಮೀಪನ ಅರಬೀ ಸಮುದ್ರಕ್ಕೆ ಹೊಂದಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ.

Advertisement

ನದಿಯ ಸುತ್ತ ಮನರಂಜನಾ ದೋಣಿ ವಿಹಾರ ಸೌಲಭ್ಯಗಳು ಅಥವಾ ಅದರ ಹತ್ತಿರ ನಿರ್ಮಿಸಲಾದ ಕೃತಕ ಕೊಳಗಳು ಸೇರಿದಂತೆ ನದಿಯ ಸುತ್ತಲೂ ಪ್ರವಾಸೋದ್ಯಮ ಸೌಲಭ್ಯಗಳನ್ನು ರಚಿಸಲು ಬಿಎಂಸಿ ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಉದ್ಯಾನವನಗಳು ಮತ್ತು ಉದ್ಯಾನಗಳಂತಹ ಮನರಂಜನಾ ಸೌಲಭ್ಯಗಳನ್ನು ನಿರ್ಮಿಸುವುದು ಮತ್ತು ಜಲಮೂಲದಲ್ಲಿ ಜಲಚರಗಳನ್ನು ಉತ್ತೇಜಿಸುವುದು ಈ ಯೋಜನೆಯಲ್ಲಿ ಸೇರಿದೆ.

ಸಮಗ್ರ ಮಾಸ್ಟರ್‌ ಪ್ಲ್ಯಾನ್‌ ರಚನೆ
ಕಸ, ಕೊಳಚೆನೀರು, ಪ್ಲಾಸ್ಟಿಕ್‌ ಮತ್ತು ಮಾಲಿನ್ಯಕಾರಕಗಳಿಂದಾಗಿ ಕುರ್ಲಾ, ಸಾಕಿನಾಕಾ ಮತ್ತು ವಕೋಲಾ ಮೂಲಕ ಹಾದು ಹೋಗುವ ಈ ನದಿ ಸಾಮಾನ್ಯವಾಗಿ ನದಿಗಿಂತ ಧಿಕ ಕಲುಷಿತವಾಗಿದೆ. ಬಿಎಂಸಿಯ ಹೆಚ್ಚುವರಿ ಮುನ್ಸಿಪಲ್‌ ಕಮಿಷನರ್‌ ಪಿ. ವೆಲಾÅಸು ಅವರು ಈ ಬಗ್ಗೆ ಮಾಹಿತಿ ನೀಡಿ, ನಾವು ಹಿಡುವಳಿ ಕೊಳಗಳನ್ನು ರಚಿಸಲು ಮತ್ತು ನದಿಯ ಸುತ್ತ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಲಹೆಗಾರರನ್ನು ನೇಮಿಸಲಿದ್ದೇವೆ. ಈ ಯೋಜನೆಗೆ ನಾವು ಸಮಗ್ರ ಮಾಸ್ಟರ್‌ ಪ್ಲ್ಯಾನ್‌ ರಚಿಸುತ್ತಿದ್ದೇವೆ ಎಂದಿದ್ದಾರೆ. ಅಕ್ರಮವಾಗಿ ನದಿಗೆ ಹಾಕುವ ತ್ಯಾಜ್ಯವು ಒಂದು ಸವಾಲಾಗಿದೆ ಎಂದು ಒಪ್ಪಿಕೊಂಡ ಅವರು, ಕೊಳಚೆನೀರನ್ನು ಪುರಸಭೆಯ ಪಂಪಿಂಗ್‌ ಕೇಂದ್ರಗಳಿಗೆ ತಿರುಗಿಸಲು ಮತ್ತು ಸ್ವೀಡಿಷ್‌ ಸಲಹೆಗಾರರ ಸಲಹೆಗೆ ಅನುಗುಣವಾಗಿ ಮಾಲಿನ್ಯಕಾರಕಗಳು ನದಿಗೆ ಪ್ರವೇಶಿಸುವ ಸ್ಥಳವನ್ನು ತಡೆಯಲು ಯೋಜಿಸಲಾಗಿದೆ ಅವರು ಹೇಳಿದ್ದಾರೆ.

ಅತಿಕ್ರಮಣದ ವಿರುದ್ಧ ಕಠಿನ ಕ್ರಮ
ಕೊಲಾಬಾದ ಗೇಟ್‌ವೇ ಆಫ್‌ ಇಂಡಿಯಾದ ದೋಣಿ ಮಾಲೀಕ ಉಸ್ಮಾನ್‌ ಅವರು ಮಾತನಾಡಿ, ಇದು ಆದರ್ಶ ಯೋಜನೆಯಾಗಿದೆ. ಹಲವಾರು ದೇಶಗಳಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ನದಿಗಳು ಮತ್ತು ಸಮುದ್ರಗಳನ್ನು ಪರಸ್ಪರ ಜೋಡಿಸಲಾಗಿದೆ. ನದಿಯ ದಡದ ಅತಿಕ್ರಮಣಗಳನ್ನು ತೆಗೆದುಹಾಕಿ ಮತ್ತು ನಿರ್ದಾಕ್ಷಿಣ್ಯವಾಗಿ ತ್ಯಾಜ್ಯವನ್ನು ನದಿಗೆ ಎಸೆಯುವುದನ್ನು ತಡೆಯಲು ಏಕೀಕೃತ ಬಿಡ್‌ ಅನ್ನು ಅಳವಡಿಸದ ಹೊರತು ಏನನ್ನೂ ಮಾಡಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಈ ಮಧ್ಯೆ ಮುಂಬಯಿಯನ್ನು ಪ್ರವಾಹಕ್ಕೆ ತಳ್ಳಿದ ಬಳಿಕ ಒಂದು ದಶಕಕ್ಕೂ ಅಧಿಕ ಕಾಲ ನದಿಯನ್ನು ಪುನಃಸ್ಥಾಪಿಸಲು ರಾಜ್ಯ ಸರಕಾರ ಯಾವುದೇ ಪರಿಣಾಮಕಾರಿ ಕ್ರಮ ತೆಗೆದುಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ
ನದಿಯ ಪುನರುಜ್ಜೀವನಗೊಳಿಸುವಿಕೆಗಾಗಿ ಬಿಎಂಸಿ ಹಲವಾರು ಅಂಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದರಲ್ಲಿ ಜಲವಾಸಿಗಳನ್ನು ಪ್ರೋತ್ಸಾಹಿಸುವುದು, ಪೊವಾಯಿ ಮತ್ತು ಜೋಗೇಶ್ವರಿ ವಿಖ್ರೋಲಿ ಲಿಂಕ್‌ ರಸ್ತೆಯ ಸುತ್ತಮುತ್ತಲಿನ ದಡಗಳಲ್ಲಿ ಗ್ರೀನ್ ಬೆಲ್ಟ್ ಹೆಚ್ಚಿಸುವುದು, ನದಿ ತೀರಗಳ ಉದ್ದಕ್ಕೂ ವಾಣಿಜ್ಯ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ಹಾಗೂ ಬೋಟಿಂಗ್‌ ಸೌಲಭ್ಯಗಳಿಗೆ ನಗರ ಅಭಿವೃದ್ಧಿಯ ಸಾಧ್ಯತೆಗಳ ಬಗ್ಗೆ ಬಿಎಂಸಿ ಸಿದ್ಧಪಡಿಸಿದ ಬಿಡ್‌ ಡಾಕ್ಯುಮೆಂಟ್‌ ಉಲ್ಲೇಖೀಸಿದೆ. ಮುಂಬಯಿಯ ಪ್ರವಾಸೋದ್ಯಮವನ್ನು ಹೆಚ್ಚಿಸಲು ನಾಗರಿಕ ಸಂಸ್ಥೆ 183 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next