Advertisement
ಈ ತೇಲುವ ಸೌರ ವಿದ್ಯುತ್ ಸ್ಥಾವರವು ರಾಷ್ಟ್ರೀಯ ಇಂಧನ ಭದ್ರತಾ ಕಾರ್ಯಕ್ರಮದಡಿ ಅಣೆಕಟ್ಟಿನ ಮೇಲೆ ಹೈಬ್ರಿಡ್ ಇಂಧನ ಸೌಲಭ್ಯಗಳ ಅಭಿವೃದ್ಧಿಯ ಭಾಗವಾಗಲಿದೆ. ಎಂಟು ವರ್ಷಗಳ ಹಿಂದೆ ಬಿಎಂಸಿ ಮಧ್ಯ ವೈತರಣಾ ಅಣೆಕಟ್ಟಿನ ಮೇಲೆ ಜಲವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಪ್ರಸ್ತಾವಿಸಿತ್ತು. ಬಳಿಕ ಈ ವರ್ಷ ಮತ್ತೂಮ್ಮೆ ಬಿಎಂಸಿ ತನ್ನ ಬಜೆಟ್‌ನಲ್ಲಿ ಇದನ್ನು ಉಲ್ಲೇಖೀಸಿದ್ದು, ತೇಲುವ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ನಿರ್ಧರಿಸಿದೆ.
Related Articles
Advertisement
ದೀರ್ಘಕಾಲ ಇರುವ ಜಲವಿದ್ಯುತ್ ಸ್ಥಾವರವು 20 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದರೆ, ತೇಲುವ ಸೌರ ವಿದ್ಯುತ್ ಸ್ಥಾವರವು 80 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಬಹುದು. ಯೋಜನೆ ಪೂರ್ಣಗೊಳ್ಳಲು 31 ತಿಂಗಳು ತೆಗೆದುಕೊಳ್ಳುತ್ತದೆ. ಒಟ್ಟು 100 ಮೆಗಾವ್ಯಾಟ್‌ಗಳಲ್ಲಿ ದ್ವೀಪ ನಗರ ಮತ್ತು ಅದರ ಸ್ವಂತ ಕಚೇರಿಗಳಲ್ಲಿ ಬೆಸ್ಟ್ ವಿದ್ಯುತ್ ಸರಬರಾಜನ್ನು ಹೆಚ್ಚಿಸಲು ಯೋಜಿಸಿದೆ.
25 ವರ್ಷಗಳ ನಿರ್ವಹಣೆಯ ಜವಾಬ್ದಾರಿ :
ಯೋಜನೆಗಾಗಿ ಅಂತಿಮಗೊಳಿಸಿದ ಏಜೆನ್ಸಿ 25 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವ ಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಪುರಸಭೆ ಹೈಬ್ರಿಡ್ ವಿದ್ಯುತ್ ಯೋಜನೆಯನ್ನು ಕಾರ್ಯಗತ ಗೊಳಿ ಸು ತ್ತಿರು ವುದು ಇದೇ ಮೊದಲು. ಜಗತ್ತು ನವೀಕರಿ ಸಬಹು ದಾದ ಶಕ್ತಿಯತ್ತ ಸಾಗುತ್ತಿದ್ದು, ಸೌರ ವಿದ್ಯುತ್ ಸ್ಥಾವರ ವನ್ನು ಸ್ಥಾಪಿಸುವ ಮೂಲಕ ಬಿಎಂಸಿ ಈಗಾಗಲೇ ಭಾಂಡೂಪ್ ವಾಟರ್ ಕಾಂಪ್ಲೆಕ್ಸ್‌ನಲ್ಲಿ ಶುದ್ಧ ಶಕ್ತಿಯನ್ನು ಬಳಸಲಾರಂಭಿಸಿದೆ. ಯೋಜನೆಗೆ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಡಬ್ಲ್ಯುಎಸ್‌ಪಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿ¨ªಾರೆ.
ಪ್ರತೀದಿನ 455 ಮಿಲಿಯನ್ ಲೀಟರ್ ನೀರು ಪೂರೈಕೆ :
ಕಳೆದ ವರ್ಷ ವಾರ್ಧಾ, ಬೆಬಾಲಾ, ಖಡಕ್ಪುರ ಮತ್ತು ಪೆಂಟಕ್ಲಿ ಅಣೆಕಟ್ಟುಗಳ ಹಿನ್ನೀರಿನಲ್ಲಿ ತೇಲುವ ಸೌರ ಫಲಕಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜಿಸಿತ್ತು. ಮಧ್ಯ ವೈತರಣಾ ಅಣೆಕಟ್ಟಿನ ನಿರ್ಮಾಣ 2012ರಲ್ಲಿ ಪೂರ್ಣಗೊಂಡಿದೆ. ಅಣೆಕಟ್ಟಿನ ಎತ್ತರ 102.4 ಮೀ. ಇದ್ದು, ಈ ಅಣೆಕಟ್ಟಿನಿಂದ ಮುಂಬಯಿಗೆ ಪ್ರತೀದಿನ 455 ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತಿದೆ. ಬಿಎಂಸಿ ಮೊದಲಿನಿಂದಲೂ ಜಲ ಯೋಜನೆ ಬಗ್ಗೆ ಉತ್ಸುಕವಾಗಿದ್ದರೂ ರಾಜ್ಯವು ಅನುಮತಿ ನೀಡಲು ನಿರಾಕರಿಸಿತ್ತು. 2017ರಲ್ಲಿ ಬಿಎಂಸಿ ಯೋಜನೆಯ ಕುರಿತು ವರದಿ ತಯಾರಿಸಲು ನೇಮಕಗೊಂಡ ಸಲಹೆಗಾರರ ಒಪ್ಪಂದವನ್ನು ರದ್ದುಗೊಳಿಸಿತು. ಕಳೆದ ವರ್ಷ ಮಹಾ ವಿಕಾಸ್ ಅಘಾಡಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಯಿತು. 2019ರ ಡಿಸೆಂಬರ್‌ನಲ್ಲಿ ಅಣೆಕಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಬಿಎಂಸಿ ಯೋಜನೆಯನ್ನು ಸಿಎಂ ಠಾಕ್ರೆ ಅನುಮೋದಿಸಿದರು.