Advertisement

ಬಿಎಂಸಿ ಫಲಿತಾಂಶ; ಠಾಕ್ರೆಗೆ ಕೈಕೊಟ್ಟ ಅದೃಷ್ಟ, ಬಿಜೆಪಿ ಕಿಂಗ್ ಮೇಕರ್

02:04 PM Feb 23, 2017 | Team Udayavani |

ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಹಾಗೂ ಬಿಜೆಪಿ ಮತ್ತು ಶಿವಸೇನೆಗೆ ಪ್ರತಿಷ್ಠೆಯ ಕಣವಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದೆ ,  ಶಿವಸೇನೆ 84 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ 81 ಸ್ಥಾನಗಳಲ್ಲಿ ಗೆಲುವಿನ ನಗು ಬೀರುವ ಮೂಲಕ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ.

Advertisement

227 ಸದಸ್ಯ ಬಲ ಹೊಂದಿರುವ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 227ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದ್ದು, ಆ ಹಿನ್ನೆಲೆಯಲ್ಲಿ ಶಿವಸೇನೆ ಮೇಲುಗೈ ಸಾಧಿಸಿದಂತಾಗಿದ್ದರು ಕೂಡಾ ಬಿಎಂಸಿ ಅಧಿಕಾರದ ಗದ್ದುಗೆ ಹಿಡಿಯಲು ಬೇಕಾದ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

ಕಾಂಗ್ರೆಸ್ ಪಕ್ಷ 31 ಸ್ಥಾನ, ಎಂಎನ್ ಎಸ್ 7 ಸ್ಥಾನ, ಎನ್ ಸಿಪಿ 9 ಸ್ಥಾನಗಳಲ್ಲಿ ಜಯ ಗಳಿಸಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಎನ್ ಸಿಪಿ ಮುಖಭಂಗ ಅನುಭವಿಸಿದೆ.

ಬಿಜೆಪಿ ಜೊತೆ ಮೈತ್ರಿಯೊಂದಿಗೆ ಕಣಕ್ಕಿಳಿಯುವ ಮೂಲಕ ಶಿವಸೇನೆ ಕಳೆದ 20 ವರ್ಷಗಳಿಂದ ಮುಂಬೈ ಮಹಾನಗರ ಪಾಲಿಕೆಯನ್ನು ಆಳುತ್ತಿತ್ತು. ಆದರೆ ಈ ಬಾರಿ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಶಿವಸೇನೆ ಮೈತ್ರಿ ಬಿಟ್ಟು ಏಕಾಂಗಿಯಾಗಿ ಸ್ಪರ್ಧಿಸಿತ್ತು.

ಪುಣೆ, ನಾಗಪುರ್, ನಾಸಿಕ್ ಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ, ಬೃಹನ್ಮುಂಬೈ ಪ್ರದೇಶದಲ್ಲಿ ಶಿವಸೇನೆ ಮುಂಚೂಣಿಯಲ್ಲಿದ್ದರೆ, ಥಾಣೆಯಲ್ಲಿ ಎನ್ ಸಿಪಿ ಮುನ್ನಡೆ ಸಾಧಿಸಿದೆ.

Advertisement

ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತ ಮುಂಬೈ ಕಾಂಗ್ರೆಸ್ ವರಿಷ್ಠ ಸಂಜಯ್ ನಿರುಪಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2012ರಲ್ಲಿ ಶಿವಸೇನೆ 75 ಸ್ಥಾನ ಪಡೆದಿತ್ತು, 2017ರ ಚುನಾವಣೆಯಲ್ಲಿ ಶಿವಸೇನೆ 84 ಸ್ಥಾನ ಪಡೆದರು ಏಕಾಂಗಿ ಹೋರಾಟದಿಂದ ಅಧಿಕಾರದ ಗದ್ದುಗೆ ಏರುವ ಉದ್ಧವ್ ಠಾಕ್ರೆ ಕನಸು ನನಸಾಗಲಿಲ್ಲ.

2012ರಲ್ಲಿ ಬಿಜೆಪಿ 31 ಸ್ಥಾನಗಳಲ್ಲಿ ಜಯಗಳಿಸಿತ್ತು, ಆದರೆ ಈ ಬಾರಿ ಬಿಜೆಪಿ 81 ಸ್ಥಾನ ಪಡೆಯುವ ಮೂಲಕ ಮತ್ತಷ್ಟು ಬಲಿಷ್ಠವಾಗಿದೆ.

ಶಿವಸೇನೆಗೆ ಫಡ್ನವೀಸ್ ತಿರುಗೇಟು:

ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಎಲ್ಲಾ ವಾರ್ಡ್ ಗಳಲ್ಲಿಯೂ ಬಿಜೆಪಿ ಕಠಿಣ ಸವಾಲನ್ನು ನೀಡಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಶಿವಸೇನೆಗೆ ತಿರುಗೇಟು ನೀಡಿದ್ದಾರೆ.  ಹಾಗಾಗಿ ಈ ಚುನಾವಣೆಯಲ್ಲಿಯೂ ಬಿಜೆಪಿ ಅತ್ಯುತ್ತಮ ಫಲಿತಾಂಶ ಪಡೆದಿದೆ. ಮುಂಬೈ ಮತ್ತು ಥಾಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದ್ದು, ಉಳಿದ ಎಲ್ಲೆಡೆ ಬಿಜೆಪಿಗೆ ಭರ್ಜರಿ ಮತ ಬಿದ್ದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next