ಬುಲ್) ಭದ್ರಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
Advertisement
ಮತ್ತೋಡಿ ಅರಣ್ಯ ಪ್ರದೇಶದಲ್ಲಿ ಸಫಾರಿ ವೇಳೆ ಇದರ ದರ್ಶನವಾಗಿದ್ದು ಪ್ರವಾಸಿಗರು ಫೋಟೊ ಕ್ಲಿಕ್ಕಿಸಿದ್ದಾರಲ್ಲದೆ,ವಿಡಿಯೋ ಕೂಡ ಮಾಡಿದ್ದಾರೆ. ಸಫಾರಿಗೆ ತೆರಳಿದ್ದ ಪ್ರವಾಸಿಗರಿಂದಲೇ ಈ ಅಪರೂಪದ ಪ್ರಾಣಿ ಭದ್ರಾ ಅರಣ್ಯ
ವ್ಯಾಪ್ತಿಯಲ್ಲಿರುವುದು ಪತ್ತೆಯಾಗಿದೆ.
ಹಿಂದೆ ಈ ಪ್ರಾಣಿ ಕಣ್ಣಿಗೆ ಬಿದ್ದಿರಲಿಲ್ಲ. ಈ ಪ್ರಾಣಿ 1950ರಲ್ಲಿ ಒಮ್ಮೆ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬಗ್ಗೆ
ದಾಖಲೆ ಇದೆ. ನೀಲ್‌ಗಾಯ್ ಹುಲ್ಲುಗಾವಲು ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ
ಕಂಡುಬರುತ್ತದೆ. ಇದರ ಮೇಲೆ ಹುಲಿ, ಚಿರತೆಗಳ ದಾಳಿ ಹೆಚ್ಚು. ಭದ್ರಾ ಅರಣ್ಯದಲ್ಲಿರುವ ಈ ಪ್ರಾಣಿಯನ್ನು
ಕೂಡಲೆ ಪತ್ತೆ ಹಚ್ಚುವಂತೆ ಸಿಬ್ಬಂದಿಗೆ ಸೂಚಿಸುವುದಾಗಿ ತಿಳಿಸಿದರು. ಮಾಂಸಕ್ಕಾಗಿ ಈ ಪ್ರಾಣಿಯನ್ನು ಕದ್ದು ಇಲ್ಲಿಗೆ ತಂದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ
ಸೂಕ್ತ ತನಿಖೆ ನಡೆಸಬೇಕೆಂದು ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್ ಒತ್ತಾಯಿಸಿದ್ದಾರೆ.