Advertisement

ಲಾಲುಗೆ ಹಿನ್ನಡೆ:ತೇಜ್‌ ಪ್ರತಾಪ್‌ ಪೆಟ್ರೋಲ್‌ ಪಂಪ್‌ ಲೈಸನ್ಸ್‌ ರದ್ದು

12:27 PM Jun 17, 2017 | Team Udayavani |

ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಬಿಹಾರ ಆರೋಗ್ಯ ಸಚಿವ, ತೇಜ್‌ ಪ್ರತಾಪ್‌ ಯಾದವ್‌ ಅವರು ತಪ್ಪು ಮಾಹಿತಿ ನೀಡಿ ಪಡೆದುಕೊಂಡಿದ್ದ ಪೆಟ್ರೋಲ್‌ ಪಂಪ್‌ ಅನ್ನು  ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ (ಬಿಪಿಸಿಎಲ್‌) ರದ್ದು ಮಾಡಿದೆ. 

Advertisement

ಲೈಸನ್ಸ್‌ ಪಡೆಯಲು ತಪ್ಪು ಮಾಹಿತಿ ನೀಡಿರುವುದಕ್ಕೆ ವಿವರಣೆ ಕೋರಿ ಕಳೆದ ಮೇ 31ರಂದು ಜಾರಿಗೊಳಿಸಲಾಗಿದ್ದ ನೊಟೀಸ್‌ಗೆ ತೃಪ್ತಿಕರ ಉತ್ತರವನ್ನು ನೀಡುವಲ್ಲಿ ತೇಜ್‌ ಪ್ರತಾಪ್‌ ವಿಫ‌ಲರಾಗಿರುವುದರಿಂದ ಅವರಿಗೆ ನೀಡಲಾಗಿದ್ದ  ಪೆಟ್ರೋಲ್‌ ಪಂಪ್‌ ಗುತ್ತಿಗೆಯನ್ನು ರದ್ದು ಮಾಡಲಾಗಿದೆ ಎಂದು ಬಿಪಿಸಿಎಲ್‌ ಹೇಳಿದೆ. 

“ನೀವು ಈ ಪೆಟ್ರೋಲ್‌ ಪಂಪ್‌ ಲೈಸನ್ಸ್‌ ಪಡೆದುಕೊಂಡದ್ದು ಹೇಗೆ ಎಂಬುದನ್ನು 15 ದಿನಗಳ ಒಳಗಾಗಿ ತಿಳಿಸಿ’ ಎಂದು ಬಿಪಿಸಿಎಲ್‌ ತೇಜ್‌ ಪ್ರತಾಪ್‌ಗೆ ಬಿಪಿಸಿಎಲ್‌ ನೊಟೀಸ್‌ ಜಾರಿ ಮಾಡಿತ್ತು. 

ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ತೇಜ್‌ ಪ್ರತಾಪ್‌ ಅವರ ಸಹೋದರರಾಗಿರುವ ತೇಜಸ್ವಿ ಯಾದವ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ನಾವು ಈ ಬಗ್ಗೆ ಸರಿಯಾದ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗಪಡಿಸಿ ಸರಿಯಾದ ವೇದಿಕೆಯಲ್ಲಿ  ಸತ್ಯವನ್ನು ತಿಳಿಸುತ್ತೇವೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next