Advertisement

ಅಜ್ಞಾತ ಹೂವಿನ ಹಾಗೆ ಅರಳುವ ಬದುಕು

01:06 AM Mar 01, 2021 | Team Udayavani |

ಲಾವೊ ತ್ಸು ತಮ್ಮ ಶಿಷ್ಯರ ಜತೆಗೆ ಪ್ರಯಾಣ ಹೊರಟಿದ್ದರು. ದಾರಿಯ ನಡುವೆ ಒಂದು ಕಾಡು ಎದುರಾಯಿತು. ಅದರ ಬದಿಯಲ್ಲಾಗಿ ಯಾತ್ರೆ ಮುಂದುವರಿಯಿತು.

Advertisement

ಕಾಡಿನಲ್ಲಿ ಅನೇಕ ಕೆಲಸಗಾರರು ಮರಗಳನ್ನು ಕಡಿಯುತ್ತಿದ್ದರು. ಇನ್ನೊಂದು ಬದಿಯಲ್ಲಿ ಕಡಿದ ಮರ ಗಳನ್ನು ಸಿಗಿಯಲಾಗುತ್ತಿತ್ತು. ಒಂದು ಕಡೆ ಬಡಗಿಗಳಿಗಾಗಿ ದೊಡ್ಡ ಕುಟೀರವೇ ನಿರ್ಮಾಣವಾಗಿತ್ತು. ಅಲ್ಲಿ ಭಾರೀ ಕಂಬಗಳು, ಹಲಗೆಗಳು, ಪಕ್ಕಾಸು, ರೀಪು, ಪೀಠೊಪಕರಣ ಗಳು ಇತ್ಯಾದಿಗಳನ್ನೆಲ್ಲ ಸಿದ್ಧಪಡಿಸುವ ಕಾರ್ಯ ನಡೆಯುತ್ತಿತ್ತು.

ಶಿಷ್ಯರು ಕೆಲಸಗಾರರನ್ನು ಕೇಳಿದರು, “ಏನಿದು? ಎಲ್ಲಿಗೆ ಇದೆಲ್ಲ?’
ಊರಿನ ಪಾಳೇ ಗಾರನ ಅರಮನೆ ಹಳೆಯದಾಗಿದೆ ಯಂತೆ. ಹೊಸ ಅರಮನೆ ಕಟ್ಟುವುದಕ್ಕಾಗಿ ಮರಗಳನ್ನು ಕಡಿದು ಅಗತ್ಯ ವಸ್ತುಗಳನ್ನು ಸಿದ್ಧ ಪಡಿಸುವ ಕಾರ್ಯ ನಡೆಯುತ್ತಿದೆ ಯಂತೆ ಎಂದು ಗುರುಗಳಿಗೆ ವರ್ತಮಾನ ಕೊಟ್ಟರು ಶಿಷ್ಯರು.
ಕಾಡಿನ ಬದಿಯಲ್ಲಾಗಿಯೇ ಮತ್ತೂ ಮುಂದುವರಿದಾಗ ಒಂದು ವಿಶಾಲ ಮರ ಎದುರಾಯಿತು. ನೂರಿನ್ನೂರು ಮಂದಿ ಅದರಡಿ ಕುಳಿತು ವಿಶ್ರಮಿಸಿ ಕೊಳ್ಳಬಹುದಾದಷ್ಟು ಬೃಹತ್‌ ವೃಕ್ಷವದು. ರೆಂಬೆಕೊಂಬೆಗಳನ್ನು ಚಾಚಿ, ಹಸುರು ಎಲೆಗಳಿಂದ ಕಂಗೊಳಿಸುತ್ತಿತ್ತು. ಅರ್ಧಾಂಶ ಅರಣ್ಯವನ್ನೇ ಮೋಪಿಗಾಗಿ ಕಡಿದಿದ್ದರೂ ಕೆಲಸಗಾರರು ಆ ಮರವೊಂದನ್ನು ಮಾತ್ರ ಮುಟ್ಟಿರಲಿಲ್ಲ.

“ಕಾರಣ ಕೇಳಿ ಬನ್ನಿ’ ಎಂದು ಶಿಷ್ಯರನ್ನು ಅಟ್ಟಿದರು ಲಾವೊ ತ್ಸು. ಶಿಷ್ಯರು ಹೋಗಿ ಬಡಗಿಗಳನ್ನು ಕೇಳಿದರು.
“ಅದು ಯಾವುದಕ್ಕೂ ಪ್ರಯೋಜನ ಇಲ್ಲದ್ದು. ಮರವಿಡೀ ಗಂಟು, ಹಾಗಾಗಿ ಪೀಠೊಪಕರಣಗಳಿಗೆ ಉಪಯೋಗಿಸ ಲಾಗದು. ನೇರ ಬೆಳೆಯುವುದಿಲ್ಲ, ಹಾಗಾಗಿ ಹಲಗೆಗೆ ಆಗುವುದಿಲ್ಲ. ಸೌದೆ ಮಾಡೋಣ ಎಂದರೆ ಅದಕ್ಕೂ ಆಗುವು ದಿಲ್ಲ, ಉರಿಸಿದರೆ ವಿಪರೀತ ಹೊಗೆ’ ಎಂದರವರು.

ಶಿಷ್ಯರು ತಾವು ಕೇಳಿದ್ದನ್ನು ಗುರುಗಳಿಗೆ ತಿಳಿಸಿದರು. ಲಾವೊ ತ್ಸು ಅವರ ಮುಖದಲ್ಲಿ ನಗು ಅರಳಿತು.
“ನೀವು ಈ ಮರದ ಹಾಗೆ ಇರಬೇಕು. ಈ ಜಗತ್ತಿನಲ್ಲಿ ಉಳಿಯುವ ಗುಟ್ಟು ಇದು – ನಿಷ್ಪ್ರಯೋಜಕನಾಗಿರುವುದು! ಆಗ ಯಾರೂ ಹಾನಿ ಉಂಟು ಮಾಡು ವುದಿಲ್ಲ, ಯಾರೂ ನಿಮ್ಮನ್ನು ಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ನೀವು ನೇರವಾಗಿದ್ದರೆ ನಿಮ್ಮನ್ನು ತುಂಡರಿಸು ತ್ತಾರೆ; ಯಾರದೋ ಮನೆಯಲ್ಲಿ ಪೀಠೊಪಕರಣವಾಗು ತ್ತೀರಿ, ಛಾವಣಿಯ ಪಕ್ಕಾಸು ಆಗುತ್ತೀರಿ. ನೀವು ಸುಂದರವಾಗಿದ್ದರೆ ಯಾರೋ ನಿಮ್ಮನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ, ನೀವು ಖರೀದಿಯ ವಸ್ತು ವಾಗುತ್ತೀರಿ. ಯಾರಿಗೂ ಉಪಯೋಗಕ್ಕಿಲ್ಲದ ಈ ಮರದ ಹಾಗಿ ದ್ದರೆ ಯಾರೂ ನಿಮ್ಮ ಬಳಿ ಬರುವುದಿಲ್ಲ, ನಿಮಗೆ ತೊಂದರೆ ಕೊಡುವುದಿಲ್ಲ. ಆಗ ನಿಮಗೆ ವಿಶಾಲವಾಗಿ ಬೆಳೆದು ನಿಂತು ನೂರಾರು ಮಂದಿಗೆ ಆಶ್ರಯ, ನೆರಳು, ಹೂವು, ಹಣ್ಣು ಕೊಡುವುದಕ್ಕೆ ಸಾಧ್ಯ ವಾಗುತ್ತದೆ’ ಎಂದರು ಲಾವೊ ತ್ಸು.

Advertisement

“ನಿಮ್ಮ ಅಸ್ತಿತ್ವವೇ ಇಲ್ಲ ಎಂಬ ಹಾಗೆ ಈ ಜಗತ್ತಿನಲ್ಲಿರಿ. ಮೊದಲಿಗನಾಗಿರಲು ಪ್ರಯತ್ನಿಸಿದರೆ ಇನ್ನೊಬ್ಬರು ನಿಮ್ಮನ್ನು ಹಿಂದಿಕ್ಕುತ್ತಾರೆ. ಸ್ಪರ್ಧಾತ್ಮಕವಾಗಿದ್ದರೆ ಇನ್ನೊಬ್ಬರು ನಿಮ್ಮನ್ನು ಮೀರಿಸುತ್ತಾರೆ. ನಿಷ್ಪ್ರಯೋಜಕನಂತಿರಿ ಮತ್ತು ಬದುಕನ್ನು ಸಂಭ್ರಮಿಸಿ’ – ಇದು ಲಾವೊ ತ್ಸು ಹೇಳುವ ಮಾತು.

ಇದು ಪ್ರಾಯೋಗಿಕವಲ್ಲ ಎಂದು ಅನ್ನಿಸಬಹುದು. ಆದರೆ ಈ ಮಾತುಗಳ ಒಳಹೊಕ್ಕರೆ ಆಳದಲ್ಲಿ ಎಷ್ಟು ಅರ್ಥ ಪೂರ್ಣ ಅನ್ನಿಸದೆ ಇರಲಾರದು. ಬದುಕು ಇರುವುದು ಬದುಕಿ ಸಂತೋಷ ಪಡಲು ಮತ್ತು ಸಂಭ್ರಮಿಸಲು. ಅದು ಉಪಭೋಗಕ್ಕಿರುವ ವಸ್ತು ಅಲ್ಲ. ಬದುಕು ಕಾವ್ಯ, ನೃತ್ಯ, ಸಂಗೀತದ ಹಾಗೆ. ಕಾಲುಹಾದಿ ಬದಿಯಲ್ಲಿ ಅರಳಿ ತನ್ನಷ್ಟಕ್ಕೆ ತಾನು ಅರಳಿ ಸುಗಂಧ ಬೀರುವ ಹೂವಿ ನಂತೆ ಬದುಕು – ಅದು ಅರಳುವುದು ಯಾರಿಗಾಗಿಯೂ ಅಲ್ಲ; ಗಾಳಿಯಲ್ಲಿ ಕಂಪನ್ನು ಕಳುಹಿಸುವುದು ಯಾವುದೋ ಒಂದು ನಿರ್ದಿಷ್ಟ ವಿಳಾಸಕ್ಕೆ ಅಲ್ಲ. ಬದುಕು ಹಾಗಿರಲಿ.
– ಲಾವೊ ತ್ಸು ಹೇಳುವುದಿದು.
( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next