-ದಾನಿಯಿಂದ ಪಡೆದ ಒಂದು ಯುನಿಟ್ ರಕ್ತವನ್ನು ಮೂರು ವಿವಿಧ ಘಟಕಗಳಾಗಿ ವಿಂಗಡನೆ ಮಾಡಿ (ಕೆಂಪು ರಕ್ತ ಕಣ, ಪ್ಲೇಟಲೆಟ್, ಪ್ಲಾಸ್ಮಾ) ಅದನ್ನು ಮೂರು ಬೇರೆ ಬೇರೆ ರೋಗಿಗಳಿಗೆ ನೀಡಬಹುದು. ಇದರಿಂದ ರೋಗಿಗೆ ಅಗತ್ಯವಿರುವ ರಕ್ತದ ಘಟಕವನ್ನು ಮಾತ್ರ ನೀಡಿ, ಇತರ ಅಂಶಗಳ ಪೂರಣದಿಂದ ಆಗಬಹುದಾದ ಹಾನಿಯನ್ನು ಕಡಿಮೆ ಮಾಡಬಹುದು.
Advertisement
-ರಕ್ತದ ಘಟಕಗಳನ್ನು ವಿವೇಚನಾ ಶೀಲರಾಗಿ ಬಳಕೆ ಮಾಡಿದಲ್ಲಿ ಅದರ ಅನಗತ್ಯ ಪೂರಣವನ್ನು ಕಡಿಮೆ ಮಾಡಬಹುದು.
ಲ್ಯುಕೋಫಿಲೆóàಶನ್ ಎಂಬ ವಿಧಾನದಲ್ಲಿ ರಕ್ತ ಘಟಕಗಳಿಂದ ಬಿಳಿ ರಕ್ತಕಣಗಳನ್ನು ತೆಗೆದು ಹಾಕಲಾಗುತ್ತದೆ. ಬಿಳಿ ರಕ್ತ ಕಣಗಳನ್ನು ತೆಗೆದು ಹಾಕುವುದರಿಂದ, ಅಲೊಇಮ್ಯುನೈಸೇಶನ್, ರಕ್ತ ಪೂರಣದಿಂದ ಪ್ರಸಾರವಾಗುವ ಕೆಲವೊಂದು ಸೋಂಕು ರೋಗ (ಸಿ.ಎಂ.ವಿ. ವೈರಸ್) ಮತ್ತು ಜ್ವರದಂತಹ ಪ್ರತಿವರ್ತನೆಗಳ ಪ್ರಮಾಣ ಕಡಿಮೆ ಮಾಡಬಹುದು. ರಕ್ತ ಪೂರಣದಿಂದ ಅಥವಾ ಅಂಥ ಸಂದರ್ಭದಲ್ಲಿ ರೋಗಿಗೆ ಆಗಾಗ ಜ್ವರ ಮರುಕಳಿಸುತ್ತಿದ್ದರೆ, ಅಂತಹ ಪ್ರತಿವರ್ತನೆಯನ್ನು ತಡೆಯಲು ಬಿಳಿ ರಕ್ತ ಕಣ ರಹಿತ ರಕ್ತ ಘಟಕ ನೀಡಿಕೆಯನ್ನು ಶಿಫಾರಸು ಮಾಡಲಾಗುತ್ತದೆ. ದಿ ನ್ಯೂಕ್ಲಿಯರ್ ಆ್ಯಸಿಡ್ ಟೆಸ್ಟ್ (ಎನ್.ಎ.ಟಿ.)
ದಾನಿಯಿಂದ ಪಡೆದ ರಕ್ತದ ಘಟಕದಲ್ಲಿ ಎಚ್.ಐ.ವಿ. ಹೆಪಟೈಟಿಸ್ ಬಿ., ಸಿ. ವೈರಸ್‌ಗಳು ಇವೆಯೇ ಎಂಬುದನ್ನು ಪತ್ತೆ ಮಾಡಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಮೇಲೆ ಹೇಳಿದ ಟೆಸ್ಟ್ ಸೋಂಕನ್ನು ಅತಿ ಶೀಘ್ರ ಸಂಭಾವ್ಯ ಸಮಯದಲ್ಲಿ ಪತ್ತೆ ಮಾಡಬಲ್ಲುದು. ದಾನಿಯ ಶಕ್ತಿ ನೀಡುವ ಸಮಯದಲ್ಲಿ ಈ ಸೋಂಕು ರೋಗಗಳ “ವಿಂಡೊ ಪಿರೇಡ್’ನಲ್ಲಿ ಇದ್ದಲ್ಲಿ ಅದು ಸಾಮಾನ್ಯ ರಕ್ತ ಪರೀಕ್ಷೆಯಿಂದ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯೊಬ್ಬ ಸೋಂಕಿಗೆ ತುತ್ತಾದ ಸಮಯ ಮತ್ತು ಆತನ ರಕ್ತದಲ್ಲಿ ಪ್ರತಿ ಜೀವಾಣುಗಳು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಪತ್ತೆಯಾಗುವಷ್ಟು ಸಂಖ್ಯೆಯಲ್ಲಿ ಉತ್ಪಾದನೆಯಾಗುವ ಸಮಯದ ನಡುವಣ ಅವಧಿಯನ್ನು “ವಿಂಡೋ ಪಿರೇಡ್’ ಎನ್ನಲಾಗುತ್ತದೆ.