ಶಿರಸಿ: ರಕ್ತ, ಇಸಿಜಿ ತಪಾಸಣಾ ವರದಿಗಳು ಇನ್ನು ಮನೆ ಬಾಗಿಲಿನಲ್ಲೇ ಕೊಡುವ ಅಪರೂಪದ ಯೋಜನೆಯನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿಗೆ ತರಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಿಂದ ರೋಗಿಗಳಿಗೆ ಡಯಗ್ನೊàಸ್ಟಿಕ್ ಸೆಂಟರ್ ಗಳಿಗೆ ಅಲೆದಾಟ ತಪ್ಪಲಿದೆ. ರಕ್ತ ಹಾಗೂ ಇಸಿಜಿ ತಪಾಸಣಾ ವರದಿಗಳು ಮನೆ ಬಾಗಿಲಿಗೆ ಕೊಡಲಾಗುತ್ತದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಜನರಿಗೆ ಸರ್ಕಾರದ ಆರೋಗ್ಯ ಸೇವೆ ತಲುಪಬೇಕು ಎಂಬುದಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗ
ಬರುವ ಮೊದಲೇ ಮುಂಜಾಗ್ರತೆ ಪಡೆದುಕೊಳ್ಳುವ ವೆಲ್‌ನೆಸ್ ಕೇಂದ್ರ ಆರಂಭಿಸಲಾಗುತ್ತದೆ ಎಂದರು.