Advertisement
ಇಂತಹ ವಾತಾವರಣದಲ್ಲೂ ಯುವ ಸಂಘಟನೆಯೊಂದು ಸಾಮಾಜಿಕ ಕಾಳಜಿಯಿಂದ ರಕ್ತ ಪರೀಕ್ಷಾ ಕೇಂದ್ರ ಆರಂಭಿಸಿದ್ದು, ಬಡವರಿಗೆ ಕೈಗೆಟಕುವ ಕನಿಷ್ಠ ದರದಲ್ಲಿ ಸೇವೆ ದೊರೆಯುವಂತಾಗಿದೆ. ಪ್ರತಿಯೊಂದು ವೈದ್ಯಕೀಯ ಪರೀಕ್ಷೆಗಳಿಗೆ ಇಂತಿಷ್ಟು ದರ ಅಂತ ನಿಗದಿಯಾಗಿದ್ದರೂ ಕೆಲವೆಡೆ ಇದು ಪಾಲನೆಯೂ ಇಲ್ಲ. ಇನ್ನು ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಲೇಬೇಕಾದ ಅನಿವಾರ್ಯತೆ.
Related Articles
Advertisement
ಸಾಮಾಜಿಕ ಕಾಳಜಿ: ಈ ಸೇವೆ ದೇಶಾದ್ಯಂತ ನಡೆಯುತ್ತಿದ್ದು, ನಗರದಲ್ಲಿ ಕಾರ್ಯನಿವಹಿಸುತ್ತಿರುವುದು 51ನೇ ಕೇಂದ್ರವಾಗಿದೆ. ಕೇಂದ್ರ ಸಮಿತಿಯಿಂದ ಕೇಂದ್ರ ಸ್ಥಾಪನೆಗೆ 25ಲಕ್ಷ ರೂ. ಸಹಾಯಧನದೊಂದಿಗೆ ಉಳಿದ ಹಣವನ್ನು ಸ್ಥಳೀಯವಾಗಿ ಸಂಗ್ರಹಿಸಿ ಆರಂಭಿಸಲಾಗಿದೆ. ಈ ಕೇಂದ್ರದ ನಿರ್ವಹಣೆಗೆ 25 ಜನರ ಟ್ರಸ್ಟ್ ರಚಿಸಿಕೊಂಡಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಈ ಟ್ರಸ್ rನ ಸದಸ್ಯರು ಪ್ರತಿಯೊಬ್ಬರು ವಹಿಸಿಕೊಳ್ಳುತ್ತಾರೆ. ಪ್ರತಿ ತಿಂಗಳು ಕಟ್ಟಡ ಬಾಡಿಗೆ, ಸಿಬ್ಬಂದಿ ವೇತನ, ವೈದ್ಯಕೀಯ ಪರೀಕ್ಷಾ ಪರಿಕರಗಳು, ಕೇಂದ್ರ ನಿರ್ವಹಣೆ ಸೇರಿದಂತೆ ಲಕ್ಷಾಂತರ ರೂಪಾಯಿಗಳನ್ನು ಈ ಟ್ರಸ್ಟ್ ಭರಿಸುತ್ತದೆ. ಈ ಸೇವೆ ಪಡೆಯಲು ಯಾವುದೇ ನಿಬಂಧನೆಗಳು ಅಥವಾ ದಾಖಲೆಗಳ ಅಗತ್ಯ ಇರಲ್ಲ.
ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ. ಈ ಕಾರ್ಯದ ಜತೆ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಅಗತ್ಯ ಪರಿಕರ ಒದಗಿಸುವ ಮಹತ್ಕಾರ್ಯ ಈ ಯುವಕ ಪರಿಷತ್ ಮಾಡುತ್ತಿದೆ.
ಸ್ಕ್ಯಾನಿಂಗ್ ಕೇಂದ್ರದ ಚಿಂತನೆ: ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ್ದರು. ಈಗಲೂ ವೈದ್ಯರ ಶಿಫಾರಸ್ಸಿನೊಂದಿಗೆ ದಿನಕ್ಕೆ 100 ರೂ. ಬಾಡಿಗೆ ರೂಪದಲ್ಲಿ ಕೊಡುವ ಕಾರ್ಯ ಮುಂದುವರಿದಿದೆ. ಬಡ ರೋಗಿಗಳಿಗೆ ಸೇವೆ ದೊರಕಲಿ ಎನ್ನುವ ಕಾರಣದಿಂದ ನಗರದ ಆಸ್ಪತ್ರೆಯೊಂದರ ಸಹಕಾರದಿಂದ ಈ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿತ್ತು.
ಆದರೆ ಅವರಿಂದ ಲಾಭದ ನಿರೀಕ್ಷೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಆರಂಭಿಸಿದ್ದಾರೆ. ರೋಗಿಗಳ ಪ್ರಮಾಣದ ಹೆಚ್ಚಿದಂತೆಲ್ಲಾ ಬೇರೆಡೆಗೆ ಕೇಂದ್ರ ಸ್ಥಳಾಂತರಿಸಿ ರಕ್ತ ಪರೀಕ್ಷಾ ಕೇಂದ್ರದೊಂದಿಗೆ ಸ್ಕ್ಯಾನಿಂಗ್ ಹಾಗೂ ಫಿಸಿಯೋಥೆರಪಿ ಸೇವೆ ಆರಂಭಿಸುವ ಗುರಿಯಿದೆ. ಇದರೊಂದಿಗೆ ಅಗತ್ಯ ವೈದ್ಯರ ನೆರವು ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ.
ಬಡವರಿಗೆ ಈ ಸೇವೆ ದೊರೆಯಬೇಕು ಎನ್ನುವ ಕಾರಣದಿಂದ ಕೇಂದ್ರ ಆರಂಭಿಸಲಾಗಿದೆ. ದುಬಾರಿ ದರದಿಂದ ಬಡವರು ಆರೋಗ್ಯ ಕಳೆದುಕೊಳ್ಳಬಾರದು ಎಂಬುದು ಪ್ರಮುಖ ಉದ್ದೇಶವಾಗಿದೆ. ಹೊರಗಿನ ಪ್ರಯೋಗಾಲಯಗಳಿಗೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ದರ ಕಡಿಮೆಯಿದೆ. ಇದರಲ್ಲಿ ಯಾವುದೇ ಲಾಭದ ಉದ್ದೇಶ ಹೊಂದಿಲ್ಲ. ಟ್ರಸ್ಟ್ ಮೂಲಕ ಇದನ್ನು ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ರಕ್ತ ತಪಾಸಣೆ ಕೇಂದ್ರದ ಜತೆಗೆ ಸ್ಕ್ಯಾನಿಂಗ್ ವ್ಯವಸ್ಥೆ ದೊರಕಿಸುವ ಉದ್ದೇಶ ಹೊಂದಿದ್ದೇವೆ. –ವಿಶಾಲ್ ಜೈನ್, ಮ್ಯಾನೇಜಿಂಗ್ ಟ್ರಸ್ಟಿ. ಕಾರ್ಯದರ್ಶಿ, ಆಚಾರ್ಯ ತುಳಸಿ ಡೈಗ್ನಾಸ್ಟಿಕ್ ಕೇಂದ್ರ.
-ಹೇಮರಡ್ಡಿ ಸೈದಾಪುರ