Advertisement
ಹಾಗಾಗಿ ಇನ್ನು ಮುಂದೆ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಜಗ್ಗೇಶ್. ಬುಧವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಜಗ್ಗೇಶ್ ಅಭಿನಯದ ಹೊಸ ಚಿತ್ರ “ಪ್ರೀಮಿಯರ್ ಪದ್ಮಿನಿ’ ಪ್ರಾರಂಭವಾಯಿತು. ಮುಹೂರ್ತದ ನಂತರ ನಡೆದಪತ್ರಿಕಾಗೋಷ್ಠಿಯಲ್ಲಿ, ಜಗ್ಗೇಶ್ ಚಿತ್ರದ ಬಗ್ಗೆ ಮಾತನಾಡಿದರು. ಆ ನಂತರ ಹಲವು ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
Related Articles
Advertisement
“ಅದೊಂದೇ ಘಟನೆ ಅಲ್ಲ, ಬೇಕಾದಷ್ಟು ಘಟನೆಗಳಿಂದ ಬೇಸರವಾಗಿದೆ’ ಎನ್ನುತ್ತಾರೆ ಜಗ್ಗೇಶ್. “ಅವತ್ತಾದ ಘಟನೆಯನ್ನು ರಾಜಕೀಯವಾಗಿ ಬಳಸಿಕೊಂಡರು. ಬಿಜೆಪಿ ನಾಯಕ ಹೀಗೆ ಮಾಡಿದ ಅಂತ ಸುದ್ದಿ ಮಾಡಿದರು. ಜವಾಬ್ದಾರಿ ಸ್ಥಾನದಲ್ಲಿದ್ದವರು ಪೊಲೀಸ್ ಸ್ಟೇಷನ್‌ಗೆ ಹೋಗಿ ಕೇಸ್ ಆಗಿದೆಯಾ ನೋಡಿದರಾ? ನನ್ನಿಂದ ತಪ್ಪಾಗಿದ್ದರೆ ಬುದ್ಧಿ ಕಲಿಸಿ. ಆದರೆ, ಮಾತಾಡುವ ಸ್ವಾತಂತ್ರ್ಯ ಇದೆ ಅಂತ ಪತಿವ್ರತೆನಾ ವ್ಯಭಿಚಾರಿ ಮಾಡಿ, ವ್ಯಭಿಚಾರಿನಾ ಪತಿವ್ರತೆ ಮಾಡೋದು ತಪ್ಪು.
ಆ ಸಂದರ್ಭದಲ್ಲಿ, ನನ್ನ ಹಲವು ಅಭಿಮಾನಿಗಳು, ಇದೆಲ್ಲಾ ಹೊಲಿಸಿನಿಂದ ಆಚೆ ಬನ್ನಿ ಅಂತ ಕಿವಿ ಮಾತು ಹೇಳಿದರು. ಅವರ ಮಾತು ಕೇಳಿ, ಇನ್ಮುಂದೆ ಸನ್ಯಾಸಿ ತರಹ ಬದುಕುತ್ತೀನಿ ಅಂತ ಹೇಳಿದ್ದೀನಿ. ನನ್ನ ಪಾಡಿಗೆ ನಾನಿದ್ದುಬಿಟ್ಟಿದ್ದೇನೆ. ಬರೀ ಗುಡ್ ಮಾರ್ನಿಂಗ್, ಗುಡ್ ನೈಟ್ ಬಿಟ್ಟರೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮನೆಯಲ್ಲಿದ್ದರೂ ಹೊತ್ತೇ ಹೋಗುವುದಿಲ್ಲ. ಆ ಮಟ್ಟಿಗೆ ಪಾರಿವಾಳ, ನಾಯಿ, ಸಂಗೀತ ಅಂತ ಸಮಯ ಕಳೆಯುತ್ತಿದ್ದೇನೆ. ಇದಕ್ಕಿಂತ ಸೌಭಾಗ್ಯ ಬೇಕಾ? ಹಿಂದೊಮ್ಮೆ ಒಂದು ಆಟೋ ಸಿಕ್ಕರೆ ಸಾಕು, ದಿನಕ್ಕೆ ನೂರು ರೂಪಾಯಿ ದುಡಿಮೆ ಆದರೆ, ಸಾಕು ಅಂತ ಕಾಯುತ್ತಿದ್ದೆ. ರಾಯರ ಕೃಪೆಯಿಂದ ನನ್ನ ಗಣಿತ ಸುಳ್ಳಾಯ್ತು. ಇವತ್ತು ಇಲ್ಲಿಯವರೆಗೂ ಬಂದಿದ್ದೇನೆ’ ಎನ್ನುತ್ತಾರೆ ಜಗ್ಗೇಶ್.
ಕಾಲಭೈರವನ ಸನ್ನಿಧಿಯಲಿಜಗ್ಗೇಶ್ ಕಳೆದ ಕೆಲವು ತಿಂಗಳುಗಳಿಂದ ತಮ್ಮ ತವರೂರು ಜಡೆಮಾಯಸಂದ್ರದಲ್ಲಿ ಕಾಲಭೈರವನ ದೇವಸ್ಥಾನ ಕಟ್ಟಿಸುತ್ತಿದ್ದಾರಂತೆ. ಕಳೆದ ವರ್ಷ ಅಲ್ಲಿಗೆ ಒಮ್ಮೆ ಹೋದಾಗ, ಆ ಗ್ರಾಮದ ಹಿರಿಯಜ್ಜ ರೊಬ್ಬರು ಹಳೆಯ ದೇವಸ್ಥಾನದ ಬಗ್ಗೆ ಗಮನಕ್ಕೆ ತಂದರಂತೆ. ಆ ದೇವಸ್ಥಾನಕ್ಕೆ ಜಗ್ಗೇಶ್ ಅವರು ಹಿರಿಯರು ನಡೆದುಕೊಳ್ಳುತ್ತಿದ್ದರಂತೆ. ಹಾಗಾಗಿ ಆ ದೇವಸ್ಥಾನವನ್ನು ಜಗ್ಗೇಶ್ ಪುನರುಜ್ಜೀವನಗೊಳಿಸುತ್ತಿದ್ದಾರೆ. ಐದೂಮುಕ್ಕಾಲು ಅಡಿಯ ಭೈರವನನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಸದ್ಯಕ್ಕೆ ಕೆಲಸಗಳು ನಡೆಯುತ್ತಿದ್ದು, ಐದಾರು ತಿಂಗಳಲ್ಲಿ ದೇವಸ್ಥಾನದ ಕೆಲಸ ಗಿಯಲಿದೆಯಂತೆ.