Advertisement

ಹಳೆ ಪಿಂಚಣಿಗಾಗಿಅ.3 ರಂದು ರಕ್ತದಾನ ಕ್ರಾಂತಿ

11:16 AM Oct 01, 2018 | |

ಅಫಜಲಪುರ: ಎನ್‌ಪಿಎಸ್‌ ನೌಕರರಿಗೆ ಹಳೆಯ ಪಿಂಚಣಿ ರದ್ದುಗೊಳಿಸಿ ನೂತನ ಪಿಂಚಣಿ ಪದ್ಧತಿ ಜಾರಿಗೊಳಿಸಿದ್ದರಿಂದ
ಭಾರಿ ಅನ್ಯಾಯವಾಗುತ್ತಿದೆ. ಹೀಗಾಗಿ ಹಳೆಯ ಪಿಂಚಣಿ ಮುಂದುವರಿಸುವಂತೆ ಒತ್ತಾಯಿಸಿ ಅ. 3ರಂದು ರಕ್ತದಾನ
ಮಾಡಿ ಸಂಬಂಧ ಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಎಂದು ಎನ್‌ಪಿಎಸ್‌ ನೌಕರರ ಸಂಘದ
ತಾಲೂಕು ಅದ್ಯಕ್ಷ ರವಿಕಾಂತ ಬಿರಾದಾರ ಹಾಗೂ ಕಾರ್ಯದರ್ಶಿ ಮಹೇಶ ಅಂಜುಟಗಿ ತಿಳಿಸಿದರು.

Advertisement

ಪಟ್ಟಣದ ಮಳೇಂದ್ರ ಮಠದಲ್ಲಿ ಅ.3ರಂದು ನಡೆಯುವ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲು ಆಹ್ವಾನ ನೀಡಿ ಮಾತನಾಡಿದ ಅವರು, ಹಳೆಯ ಪಿಂಚಣಿ ಯೋಜನೆ ನಮಗೆ ವರದಾನವಾಗಿತ್ತು. ನೂತನ ಪಿಂಚಣಿ ವ್ಯವಸ್ಥೆಯಿಂದ ನಮ್ಮ ಸಂಧ್ಯಾಕಾಲದ ಜೀವನಕ್ಕೆ ಮಾರಕವಾಗಿದೆ. ಹೀಗಾಗಿ ನೂತನ ಪಿಂಚಣಿ ವ್ಯವಸ್ಥೆ ಕೈಬಿಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟವರು ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ರಕ್ತದಾನ ಶಿಬಿರ ಯಶಸ್ವಿಗೆ ಎಲ್ಲ ಎನ್‌ಪಿಎಸ್‌ ನೌಕರರು ಬಂದು ಸಹಕರಿಸಬೇಕು. ಇದು ಕೇವಲ ರಕ್ತದಾನ ಶಿಬಿರವಲ್ಲ,
ನೌಕರರ ಬದುಕಿನ ಹೋರಾಟವಾಗಿದೆ ಎಂದರು. ಹೈದರ್‌ ಚೌಧರಿ, ವಿಜಯ, ಮಹಾಂತೇಶ ನಡುವಿನಮನಿ,
ಶಿವಾನಂದ ಸ್ವಾಮಿ, ಹನುಮೇಶ ಇಳಗೇರ, ಜಗದೀಶ ಭಜಂತ್ರಿ, ಸಿದ್ದಾರಾಮ ಸಂಗೋಳಗಿ, ಜಯಕುಮಾರ ಕೋಣಿನ್‌, ಸೈಬಣ್ಣ ಅಲ್ದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next