Advertisement

ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನ

09:41 PM Oct 22, 2019 | Lakshmi GovindaRaju |

ಆನೇಕಲ್‌: ರಕ್ತದಾನ ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕೆಂದು ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ಸಲಹೆ ನೀಡಿದರು. ತಾಲೂಕಿನ ಸಮಂದೂರಿನ ಸಗೆಯಲ್ಲಿ ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್‌ ಪೇರ್‌ ಅಸೋಸಿಯೇಶನ್‌ ವತಿಯಿಂದ ಚಿರಂಜೀವಿ ಸಂಘ ಪ್ರಾರಂಭವಾಗಿ 25 ವರ್ಷ ಪೊರೈಸಿದ ಅಂಗವಾಗಿ ಆಯೋಜಿಸಿದ್ದ ಯಶಸ್ವಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

Advertisement

ನಮ್ಮ ಅಭಿಮಾನ ಕೇವಲ ಸಂಘಕ್ಕೆ ಸೀಮಿತವಾಗದೆ ಇತರರಿಗೆ ಮಾದರಿಯಾಗಬೇಕು. 25ವರ್ಷ ಸೇವೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಹಲವಾರು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಅಖೀಲ ಕರ್ನಾಟಕ ಚಿರಂಜೀವಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಸ ಮಾತನಾಡಿ, ಸಿನಿಮಾ ಬಂದಾಗ ಅಭಿಮಾನಿಗಳು ಪ್ರೀತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆನೇಕಲ್‌ ಸಂಘವು 25 ವರ್ಷಗಳ ನಿರಂತರ ಒಗ್ಗಟ್ಟಿನ ಸೇವೆ ಮುಂದುವರೆದಿದೆ. ನಮ್ಮ ಸಹಕಾರವೂ ಸದಾ ಇರುತ್ತದೆ ಎಂದರು.

ಎಲ್ಲಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಗಿಡವೊಂದು ಬೆಳೆದು ಮರವಾದಂತೆ ನಾವು ಬೆಳೆಯಬೇಕು. ಸಂಘದ ಗೌರವ ಅಧ್ಯಕ್ಷ ಮಂಜುನಾಥ್‌ ರೆಡಿ ಮಾತನಾಡಿ ಚಿರಂಜೀವಿಯವರು ಕನ್ನಡದ ಅಭಿಮಾನಿಯಾಗಿದ್ದಾರೆ. ಸತತವಾಗಿ ರಕ್ತ ದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದ್ದು,

ಚಿರಂಜೀವಿ ಹೆಸರಿನ ಸಂಸ್ಥೆ ಇನ್ನಷ್ಟು ಬೆಳೆಯಬೇಕು ಎಂದರು.ಯಾರಿಗೇ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘದವನ್ನು ಬೇಡಿಕೆ ಇಟ್ಟಾಗ ಸಿಗುತ್ತದೆ.ಇನ್ನು ಮುಂದೆ ಯಾರಿಗೇ ಆಗಲಿ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘವನ್ನು ಸಂಪರ್ಕಿಸಿದರೆ ಯಾವುದೇ ಸಮಯದಲ್ಲಿ ಸಿದ್ದರಿರುತ್ತೇವೆ ಎಂದರು.

Advertisement

ತಾಲೂಕು ಅಧ್ಯಕ್ಷ ಮುನಿರಾಜು ಮಾತನಾಡಿ ಚಿರಂಜೀವಿ ಸಂಘಕ್ಕೆ ಚಿರಂಜೀವಿ ಅವರು ಯಾವುದೇ ಹಣ ನೀಡುವುದಿಲ್ಲ, ನಮ್ಮ ರಾಜ್ಯಾಧ್ಯಕ್ಷರು ಕೂಡ ಹಣ ನೀಡುವುದಿಲ್ಲ ನಾವು ಅವರ ಅಭಿಮಾನಿಗಳು ಸೇವೆ ಸಲ್ಲಿಸುತ್ತಿದ್ದೇವೆ. ಆನೇಕಲ್‌ ತಾಲೂಕಿನಲ್ಲಿ ಕಚೇರಿ ತೆರೆದು ಮುಂದಿನ ದಿನಗಳಲ್ಲಿ ಸಮಾಜ ಸೇವೆಗೆ ಮುಂದಾಗಬೇಕು ಎನ್ನುವುದು ನಮ್ಮ ಆಶಯ ಎಂದರು.

ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಜಿ.ನಾಗೇಂದ್ರ, ರಾಮ್‌ ಚರಣ್‌ ಯುವಸೇನೆ ರಾಜ್ಯಾಧ್ಯಕ್ಷ ಮಾರ್ಟಿನ್‌, ಮುರುಗ, ಗೋವಿಂದ ಸ್ವಾಮಿ, ಛಲಪತಿ, ಶ್ರೀನಿವಾಸ್‌, ಲಕ್ಷ್ಮಿ ನರಸಿಂಹ ಚಿತ್ರಮಂದಿರ ಮಾಲೀಕ ಸೀತಣ್ಣ, ಗೌರವಾದ್ಯಕ್ಷ ಟಿ.ಮಂಜುನಾಥ್‌ ರೆಡ್ಡಿ, ಪ್ರಶಾಂತ ನಾಯ್ಡು, ಆರ್‌.ಜಗದೀಶ್‌, ಆನೇಕಲ್‌ ತಾಲೂಕು ಉಪಾಧ್ಯಕ್ಷ ಎಮ್‌.ರಾಮು, ಪ್ರಧಾನ ಕಾರ್ಯದರ್ಶಿ ಎಮ್‌.ವೆಂಕಟೇಶ, ಕುಮಾರ, ನಾರಾಯಣ, ಮಾದೇಶ, ಗುರುಸ್ವಾಮಿ, ವೇಣುಗೋಪಾಲ ಇದ್ದರು.

ತುರ್ತಾಗಿ ರಕ್ತದ ಬೇಡಿಕೆ ಇದ್ದಾಗ ಸಂಪರ್ಕಿಸಬೇಕಾದ ಸಂಖ್ಯೆ-9663776662.

Advertisement

Udayavani is now on Telegram. Click here to join our channel and stay updated with the latest news.

Next