Advertisement

ಸೇವಾ ಭಾರತಿಯಿಂದ ರಕ್ತದಾನ ಶಿಬಿರ

08:55 PM Sep 23, 2019 | sudhir |

ಉಪ್ಪಳ : ಜನಾರ್ದನ ಪ್ರತಾಪನಗರ ಅವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ.ಎಂ.ಸಿ. ಹಾಗೂ ವೆನಾÉಕ್‌ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ನಡೆಯಿತು.

Advertisement

ಕಾರ್ಯಕ್ರಮದ ಉದ್ಘಾಟನೆಯನ್ನು ಆರ್‌.ಎಸ್‌.ಎಸ್‌.ನ ಮಂಗಳೂರು ವಿಭಾ ಗದ ಸಂಘ ಚಾಲಕರಾದ ಗೋಪಾಲ ಚೆಟ್ಟಿಯಾರ್‌ ಅವರು ನಡೆಸಿ ಮಾತನಾಡುತ್ತಾ ಭಾರತ ಅತಿ ಹೆಚ್ಚು ಯುವಕರು ಇರುವ ದೇಶ. ಆದರೂ ಇತ್ತೀಚೆಗೆ ರಕ್ತದ ಆವಶ್ಯಕತೆಯೂ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವಂತಾಗಬೇಕು ಎಂದರು. ರಕ್ತ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ಈ ಬಾರಿ ರಕ್ತ ನೀಡಿದವರು ಮುಂದಿನ ಬಾರಿ ಹೊಸಬರನ್ನು ರಕ್ತ ನೀಡುವಂತೆ ಪ್ರೇರೇಪಣೆ ನೀಡಬೇಕು ಹಾಗೂ ಸೇವಾ ಭಾರತಿ ಮಂಗಲ್ಪಾಡಿ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಇಂತಹ ಕಾರ್ಯಕ್ರಮ ನಡೆಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಎಸ್‌.ಆರ್‌. ಸತೀಶ್ಚಂದ್ರ ಅವರು ಮಾತನಾಡುತ್ತ ಇಂದು ಆಯೋಜಿಸಲ್ಪಟ್ಟ ರಕ್ತದಾನ ಶಿಬಿರವು ಸಮಾಜಕ್ಕೋಸ್ಕರ ಬದುಕಿ ತ್ಯಾಗ ಮಾಡಿದವರ ನೆನೆಪಿನಲ್ಲಿ ನಡೆಯುತ್ತಿದೆ. ಭಾರತ ದೇಶ ಇಂದು ಇಡೀ ವಿಶ್ವದಲ್ಲಿ ಇಷ್ಟೊಂದು ಗೌರವ ಹಾಗೂ ಮಾನ್ಯತೆ ಸಿಗಲು ಶಂಕರಾಳ್ವ ಹಾಗೂ ಜನಾರ್ದನ ರಂತಹ ಸಾವಿರ ಸಾವಿರ ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗ ಕಾರಣ. ಅಂತಹವರ ತ್ಯಾಗದ ಪ್ರೇರಣೆ ನಿರಂತರ ವಾಗಿ ನಮಗೆ ಸಿಗಲು ಇಂತಹ ರಕ್ತದಾ ನದಂತಹ ಕಾರ್ಯಕ್ರಮ ಆವಶ್ಯಕ ಎಂಬುದಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ ಕೋಡಿಬೈಲು ಅವರು ವಹಿಸಿದ್ದರು. ಕೆ.ಎಂ.ಸಿ. ಹಾಗೂ ವೆನಾÉಕ್‌ ಆಸ್ಪತ್ರೆ ಮಂಗಳೂರು ಇದರ ಪ್ರತಿನಿಧಿಯಾಗಿ ಡಾ|ರತ್ನಂ ಉಪಸ್ಥಿತರಿದ್ದರು. ಸೇವಾ ಭಾರತಿ ಮಂಗಲ್ಪಾಡಿಯ ಕಾರ್ಯದರ್ಶಿ ಸತೀಶ ಶೆಟ್ಟಿ ಒಡ್ಡಂಬೆಟ್ಟು ಅವರು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ರಘು ಚೆರುಗೋಳಿ ವಂದಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 102 ಮಂದಿ ಈ ಕಾರ್ಯಕ್ರಮದಲ್ಲಿ ರಕ್ತದಾನವನ್ನು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next