Advertisement

ಹಣ ಕೊಟ್ಟರೆ ಸಿಗದ ಸರಕು ರಕ್ತ

03:37 PM Oct 13, 2019 | Naveen |

ಭಾಲ್ಕಿ: ಇತ್ತೀಚೆಗೆ ಎಲ್ಲ ಭಾಗದಲ್ಲಿ ರಕ್ತದ ಅಭಾವ ಕಂಡು ಬರುತ್ತಿದೆ. ಬೇಡಿಕೆಗನುಗುಣವಾಗಿ ರಕ್ತ ಪೂರೈಕೆಯಾಗಬೇಕಾದರೆ ನವಯುವಕರು ರಕ್ತದಾನ ಮಾಡಲು ಉತ್ಸಾಹ ತೋರಬೇಕು ಎಂದು ಮುಖಂಡ ಕಿಶನರಾವ್‌ ಪಾಟೀಲ ಇಂಚೂರಕರ್‌ ಸಲಹೆ ನೀಡಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಾರಾಷ್ಟ್ರದ ನಾಣಿಜಧಾಮ ಪೀಠದ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರ ಜನ್ಮೋತ್ಸವ ಅಂಗವಾಗಿ ಶ್ರೀ ಸಂಪ್ರದಾಯ ಸೇವಾ ಸಮಿತಿ ಮತ್ತು ಕನ್ನಡಪರ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣ ಕೊಟ್ಟರೆ ಬೇರೆಲ್ಲ ಸರಕುಗಳು ತುರ್ತಾಗಿ ಸಿಗಬಹುದು. ಆದರೆ ಬೇರೆ ಬೇರೆ ಗುಂಪಿನ ರಕ್ತ ಲಭ್ಯವಾಗುವುದು ಕಷ್ಟದ ಕೆಲಸ. ಕಾರಣ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಮಹಾತ್ಕಾರ್ಯಕ್ಕೆ ಎಲ್ಲ ಧರ್ಮದವರು ಕೈ ಜೋಡಿಸಬೇಕು ಎಂದು ಹೇಳಿದರು.

ಕನ್ನಡಪರ ಒಕ್ಕೂಟದ ಅಧ್ಯಕ್ಷ ಜೈರಾಜ ಕೊಳ್ಳಾ ಮಾತನಾಡಿ, ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರ 112 ಜನ ಅಭಿಮಾನಿ ಭಕ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ವಿಶೇಷವಾಗಿದೆ. ಪೂಜ್ಯರ ಆಶೀರ್ವಾದ ಅವರಿಗೆ ಲಭಿಸಲಿದೆ ಎಂದರು.

ಶ್ರೀ ಸಂಪ್ರದಾಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಾಲಾಜಿ ಕೋಠಾರೆ ಮಾತನಾಡಿ, ಸ್ವಾಮಿ ನರೇಂದ್ರಾಚಾರ್ಯಜೀ ಅವರ ಜನ್ಮದಿನೋತ್ಸವ ಅ.21ಕ್ಕೆ ನೆರವೇರುತ್ತದೆ. ಆ ನಿಮಿತ್ತ ಅಕ್ಟೋಬರ್‌ 2ರಿಂದ 15ರ ವರೆಗೆ ಜಿಲ್ಲಾದಾದ್ಯಂತ 7 ಕಡೆ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

Advertisement

ನಗರ ಠಾಣೆಯ ಸಿಪಿಐ ಬಿ.ಅಮರೇಶ, ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ, ವೈಜಿನಾಥ ತಗಾರೆ, ವಿಠಲರಾವ್‌ ಮೇತ್ರೆ, ಟಿಎಚ್‌ಒ ಡಾ| ಜ್ಞಾನೇಶ್ವರ ನಿರಗೂಡೆ, ಸಿಎಂಒ ಡಾ|ರವಿ ಕಲಶೆಟ್ಟೆ, ರೋಟರಿ ಅಧ್ಯಕ್ಷ ಡಾ|ನಿತೀನ ಪಾಟೀಲ, ಪ್ರಾಚಾರ್ಯ ಎಸ್‌. ಎಸ್‌.ರಾಮಪೂರೆ, ಸತ್ಯವಾನ ವೈರಾಗೆ, ಬಮಶೆಟ್ಟಿ ಬಿರಾದಾರ, ಶ್ರೀ ಸಂಪ್ರದಾಯ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಶ್ರೀಧರ ಬಗದೂರೆ, ಓಂ ಪಾಟೀಲ, ಸಂಗಮೇಶ ಗುಮ್ಮೆ, ಮಾಳಸಕಾಂತ ವಾಘೆ , ಪ್ರಭು ಡಿಗ್ಗೆ, ಪಾಂಡುರಂಗ ಪಾಟೀಲ, ನಾಗನಾಥ ಪಾಟೀಲ, ದತ್ತಾತ್ರಯ ಧನುರೆ, ಲಕ್ಷ್ಮಣ ಪಾಟೀಲ, ಸಂಜೀವಕುಮಾರ ಬಿರಾದಾರ, ಅಯೋಧ್ಯತಾಯಿ ಸೂರ್ಯವಂಶಿ, ಮಂಗಳಾ ಸೋನಕಾಂಬಳೆ, ವಾಮನರಾವ್‌ ಮಾನೆ ಉಪಸ್ಥಿತರಿದ್ದರು. ತಾನಾಜಿ ಪಾಟೀಲ ಸ್ವಾಗತಿಸಿದರು. ಸಂಪ್ರದಾಯ ಸಮಿತಿ ಜಿಲ್ಲಾ ಸಚಿವ ಸತ್ಯವಾನ ಸೋಮವಂಶಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next