ಉಳ್ಳಾಲ: ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಯುವಕ ಸಂಘಟನೆಯ ಮನೋಭಾವ, ಉದ್ದೇಶ ಸಮಾಜಕ್ಕೆ ಪೂರಕವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಜರಗಿದ ಮೇಲಂಗಡಿ ಕ್ರಿಕೆಟ್ ಕ್ಲಬ್, ಆಝಾದ್ ಫ್ರೆಂಡ್ಸ್ ಸರ್ಕಲ್ ಹಾಗೂ ಉಳ್ಳಾಲ ವಲಯದ ಬ್ಲಿಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ದ್ವಿತೀಯ ಸಂಭ್ರಮ ಮತ್ತು ಸಾರ್ವಜನಿಕವಾಗಿ ರಕ್ತದಾನ ಶಿಬಿರ, ಸಮ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲೇ ಉಳ್ಳಾಲ ನಗರಸಭೆ ಅತ್ಯುತ್ತಮ ನಗರಸಭೆ ಎಂಬ ಪುರಸ್ಕಾರ ಪಡೆದಿದ್ದು, ಅದಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿದೆ. ಉಳ್ಳಾಲದಾದ್ಯಂತ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ಬಹುತೇಕ ಕಾಮಗಾರಿಯೂ ಪೂರ್ಣಗೊಂಡಿದೆ ಎಂದರು. ಉಳ್ಳಾಲದ ಹಿಂದಿನ ಖಾಝಿ ತಾಜುಲ್ ಉಲೆಮಾ ತಂಙಳ್ ಅವರ ಹೆಸರಿನಲ್ಲಿ ಉದ್ಯಮಿ ಸುಧಾಕರ್ ಪೂಂಜಾ ಅವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಖಾದರ್ ಉದ್ಘಾಟಿಸಿದರು. ಇದೇ ವೇಳೆ 100ಕ್ಕಿಂತಲೂ ಅಧಿಕ ಮಂದಿ ರಕ್ತದಾನ ಮಾಡಿದರು.
ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೆಪಿಸಿಸಿ ಅಲ್ಪಸಂಖ್ಯಾಕ ವಿಭಾಗದ ಕರಾವಳಿ ಅಧ್ಯಕ್ಷ ಯು.ಬಿ. ಸಲೀಂ, ಉಳ್ಳಾಲ ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ, ಎಸ್ ವೈಎಸ್ ಜಿಲ್ಲಾ ಕೋಶಾಧಿಕಾರಿ ಹನೀಫ್ ಬಿ.ಜಿ., ಮೇಲಂಗಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಯಹ್ಯಾ ಬಿಲಾಲ್, ಸಚಿವರ ಆಪ್ತ ಕಾರ್ಯದರ್ಶಿ ಮಹಮ್ಮದ್ ಲಿಬ್ಝತ್, ಉಪಾಧ್ಯಕ್ಷ ಹನೀಫ್, ಸಲಹೆಗಾರ ಅಶ್ರಫ್, ಆಝಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಮುಝಾಫರ್, ಫಿಶ್‌ಮಿಲ್ ಮತ್ತು ಆಯಿಲ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ. ಖಾದರ್, ಬ್ಲಿಡ್ ಹೆಲ್ಪ್ ಲೈನ್ ಕರ್ನಾಟಕ ಎಡ್ಮಿನ್ ಸಾದಿಕ್ ಪಾವೂರು, ಕೃಷ್ಣಾಪುರ ವಲಯ ಅಡ್ಮಿನ್ ಇಫ್ತಿಕಾರ್ ಕೃಷ್ಣಾಪುರ, ಕಲಾಯಿ ವಲಯ ಅಡ್ಮಿನ್ ಸಫ್ವಾನ್ ಕಲಾಯಿ, ಕ್ಯಾಂಪಸ್ ವಿಭಾಗದ ಅಡ್ಮಿನ್ ಅಲ್ಮಾಝ್ ಉಳ್ಳಾಲ್, ಉಳ್ಳಾಲ ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಇಂಜಿನಿಯರ್ ನವೀನ್ ಮಾಸ್ತಿಕಟ್ಟೆ, ಉದ್ಯಮಿ ಯು. ಎಚ್. ಸಲೀಂ ಮುಕ್ಕಚ್ಚೇರಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಉಪಸ್ಥಿತರಿದ್ದರು. ಬ್ಲಿಡ್‌ಲೈನ್ ಹೆಲ್ಪ್ಲೈನ್ ಉಳ್ಳಾಲ ವಲಯ ಅಡ್ಮಿನ್ ನವಾಝ್ ಉಳ್ಳಾಲ ಸ್ವಾಗತಿಸಿ, ಬ್ಯಾರಿ ಝುಲ್ಪೀ ನಿರೂಪಿಸಿದರು.