Advertisement
ಅ. 24ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಅಜ್ದೆಪಾಡಾದ ಶ್ರೀ ಅಯ್ಯಪ್ಪ ಮಂದಿರದ ಸುಧಾಮ ಸಭಾಗೃಹದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ವತಿಯಿಂದ ಜರಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭ ಮುಲುಂಡ್, ಥಾಣೆ ಪರಿಸರದಲ್ಲಿ ಹಲವಾರು ರೋಗಿಗಳಿಗೆ ನಿಶುಲ್ಕವಾಗಿ ಸೇವೆ ಮಾಡಿದ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಅದೇ ರೀತಿ ಡೊಂಬಿವಲಿಯಲ್ಲಿ ಡಾ| ವಿಜಯ ಎಂ. ಶೆಟ್ಟಿ ಅವರು ಸಮಾಜ ಸೇವೆ ಮಾಡುವ ಕ್ರಾಂತಿಯ ಕಿಡಿ ಹಚ್ಚಿದ್ದಾರೆ. ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಮಹಿಳಾ ವಿಭಾಗ, ಯುವ ವಿಭಾಗದ ಸಂಪೂರ್ಣ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳು ಜರಗುತ್ತಿದ್ದು, ಪ್ರಾದೇಶಿಕ ಸಮಿತಿಯ ಸಮಾಜ ಸೇವೆಯು ಇದೇ ರೀತಿಯಲ್ಲಿ ಮುಂದುವರಿಯಲಿ. ಇಂದು ರಕ್ತದಾನ ಕಾರ್ಯಕ್ರಮದಲ್ಲಿ ಸಹಭಾಗಿಯಾದ ಸರ್ವ ಸಂಘ ಸಂಸ್ಥೆಗಳಿಗೆ ಬಂಟರ ಸಂಘ ಮುಂಬಯಿ ಆಭಾರಿಯಾಗಿದೆ ಎಂದರು.
Related Articles
Advertisement
ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಶೆಟ್ಟಿ ಅತಿಥಿ- ಗಣ್ಯರನ್ನು ಸ್ವಾಗತಿಸಿದರು. ಕಾರ್ಯ ದರ್ಶಿ ಹೇಮಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಂಟರ ಸಂಘದ ವತಿಯಿಂದ 5ನೇ ರಕ್ತದಾನ ಶಿಬಿರದ ಆಯೋಜನೆ ಇದಾಗಿದೆ. ಈ ವರೆಗೆ 750 ಯುನಿಟ್ ರಕ್ತವನ್ನು ಸಂಗ್ರಹಿಸಿದ್ದೇವೆ. ಈ ಸೇವೆ ಜಾತಿ, ಧರ್ಮಗಳನ್ನು ಮೀರಿ ಉಪಯೋಗಕ್ಕೆ ಬರುತ್ತದೆ. ಇಂದಿನ ಶಿಬಿರದಲ್ಲಿ 18ರಿಂದ 65ರ ಹರೆಯದವರೆಗಿನವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸುತ್ತದೆ. ಗುಜರಾತಿ, ಮಾರ್ವಾಡಿಗಳು ರಕ್ತದಾನ ನೀಡುವುದರಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ರಕ್ತದಾನ ಮಾಡಬೇಕು.-ಡಾ| ಸತ್ಯಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ಹೆಲ್ತ್‌ಕೇರ್ ಸೆಂಟರ್ ಬಂಟರ ಸಂಘ ಮುಂಬಯಿ
ಡೊಂಬಿವಲಿ ಮಹಾನಗರ ಜಾತಿ, ಧರ್ಮಗಳನ್ನು ಮೀರಿದ ನಗರವಾಗಿದೆ. ಇಲ್ಲಿ ಅಜೆªಪಾಡಾ ಅಯ್ಯಪ್ಪ ಮಂದಿರ, ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿ, ಜಗದಂಬಾ ಮಂದಿರ ಜಾತಿ, ಧರ್ಮಗಳನ್ನು ಮೀರಿ ಬೆಳೆದಿದೆ. ನಮ್ಮ ಇಂದಿನ ರಕ್ತದಾನ ಶಿಬಿರಕ್ಕೆ ಎಲ್ಲರೂ ಸಹಕಾರ ನೀಡಿ¨ªಾರೆ. ವಿಶೇಷವಾಗಿ ಮಹಿಳಾ ವಿಭಾಗ, ಯುವ ವಿಭಾಗದ ಸಹಕಾರ ಬಹಳಷ್ಟಿದೆ. ಮುಂದಿನ ದಿನಗಳಲ್ಲಿ ಡೊಂಬಿವಲಿಯ ಸರ್ವ ತುಳು-ಕನ್ನಡಿಗರ ಹಿತದೃಷ್ಟಿಯಿಂದ ಬೃಹತ್ ಆರೋಗ್ಯ ಶಿಬಿರವನ್ನು ಮಾಡುವ ಯೋಜನೆಯಿದೆ. ತಮ್ಮೆಲ್ಲರ ಸಹಕಾರ ಸದಾ ಇರಲಿ.-ಸುಕುಮಾರ್ ಎನ್. ಶೆಟ್ಟಿ , ಕಾರ್ಯಾಧ್ಯಕ್ಷರು, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ