ಬಾಳೆಹೊನ್ನೂರು: ಸಾಂದರ್ಭಿಕವಾಗಿ ಒಂದು ಹನಿ ರಕ್ತ ದೊರೆತಲ್ಲಿ ಒಂದು ಜೀವವನ್ನು ಉಳಿಸುತ್ತದೆ. ಈ ನಿಟ್ಟಿನಲ್ಲಿ ಯುವ ಯುವಜನತೆ ರಕ್ತದಾನಮಾಡಿ ಸಮಾಜ ಸೇವೆಯಲ್ಲಿತೊಡಗಿಸಿಕೊಳ್ಳಬೇಕೆಂದು ರೋಟರಿ ಅಧ್ಯಕ್ಷ ಡಾ| ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು.
ಮಂಗಳವಾರ ಬಾಳೆಹೊನ್ನೂರು ರೋಟರಿ ಭವನದಲ್ಲಿ ರೋಟರಿ ಭವನದಲ್ಲಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್, ಪೊಲೀಸ್, ಅರಣ್ಯ ಇಲಾಖೆ,ಶ್ರೀರಾಮ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಐ.ಸಿ.ವೈ.ಎಂ. ವಿಜಯಮಾತೆ ಯೂತ್ ಅಸೋಸಿಯೇಶನ್, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಮತ್ತು ಇತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಮಿಡ್‌ಟೌನ್ ರೋಟರಿ ಫೌಂಡೇಷನ್ ರೋಟರಿ ರಕ್ತನಿಧಿಗಾಗಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತ ತಪಾಸಣೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೆ ರಕ್ತದಾನ ಮಾಡುವುದರಿಂದ ಶರೀರದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲವೆಂದು ತಿಳಿಸಿದರು.
ಬಾಳೆಹೊನ್ನೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ| ಎಲ್ಹೋಸ್ ಮಾತನಾಡಿ, ಹಲವಾರು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ರೋಟರಿ ಸಂಸ್ಥೆಯು ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದರು.
ಶಿಬಿರದಲ್ಲಿ ರೊ| ಬಿ.ಸಿ. ಗೀತಾ, ರೋಟರಿ ಕಾರ್ಯದರ್ಶಿ ವೆಂಕಟೇಶ್ ಭಟ್, ವಿವೇಕ್, ಸಿ.ಪಿ.ರಮೇಶ್, ಮಾಗುಂಡಿ ರವಿ, ಎ.ಸಿ. ಸಂದೇಶ್, ಬಿ.ಎಂ. ಜಯರಾಮ್, ಡಾ| ಎಂ.ಬಿ.ರಮೇಶ್, ಎಂ.ಎಸ್. ಯಶವಂತ್ ಇದ್ದರು.