ಮೈಸೂರು: ವಿಶ್ವ ರಕ್ತದಾನ ದಿನದ ಅಂಗವಾಗಿಮೈಸೂರಿನಲ್ಲಿ ಮೆಗಾ ರಕ್ತದಾನ ಶಿಬಿರಆಯೋಜಿಸುವ ಮೂಲಕ 370 ಯೂನಿಟ್ ರಕ್ತಸಂಗ್ರಹ ಮಾಡಲಾಯಿತು. ವಿಶ್ವ ರಕ್ತದಾನಿಗಳ ದಿನವಾದ ಜೂ.14ರ ಹಿಂದಿನದಿನವಾದ ಭಾನುವಾರ ನಗರದ 7 ಸ್ಥಳಗಳಲ್ಲಿ ಮೈಸೂರು ರೋಟರಿ ಸಂಸ್ಥೆ ತೇರಾಪಂಥ್ ಯುವಪರಿಷತ್, ಹ್ಯೂಮನ್ ಟಚ್ ಮತ್ತು ಆರ್‌ಜಿಎಸ್ ಸಂಸ್ಥೆಗಳ ಸಹಯೋಗದಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು.
ಈ ಏಳು ಶಿಬಿರದಲ್ಲಿ400ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ರಕ್ತದಾನಮಾಡಿದರು.ಶಿಬಿರದಲ್ಲಿ ಭಾಗವಹಿಸಿದ್ದ ಜೀವಧಾರ ರಕ್ತಬ್ಯಾಂಕ್, ಜೆಎಸ್‌ಎಸ್ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ,ಅಪೋಲೋ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಚಂದ್ರಕಲಾಆಸ್ಪತ್ರೆ ಮತ್ತು ಸಂತ ಜೋಸೆಫರ ಆಸ್ಪತ್ರೆಗಳು ದಾನಿಗಳಿಂದ ಸಂಗ್ರಹವಾದ ರಕ್ತ ಪಡೆದುಕೊಂಡವು.
ಎಲ್ಲೆಲ್ಲಿ?: ವಿಶ್ವೇಶ್ವರ ನಗರದ ಕೈಗಾರಿಕ ಸಬ್‌ಅರ್ಬನ್‌ನ ಮಾಧವಶೆಣೈ ಕಲ್ಯಾಣ ಮಂಟಪ,ಸಿದ್ಧಾರ್ಥ ನಗರದ ವೆಂಕಟಲಿಂಗಯ್ಯ ಕಲ್ಯಾಣಮಂಟಪ, ಕುವೆಂಪು ನಗರದ ಜಯಮ್ಮಗೋವಿಂದಗೌಡ ಕಲ್ಯಾಣ ಮಂಟಪ, ಶ್ರೀರಾಂಪುರದ ಬ್ರಹ್ಮ ಬ್ರಹ್ಮರಂಬ ಕಲ್ಯಾಣ ಮಂಟಪ,ವಿಜಯ ನಗರದ ಕೊಡವ ಸಮಾಜ, ಅಶೋಕರಸ್ತೆಯಲ್ಲಿರುವ ಕನ್ನಿಕಾ ಮಹಲ…, ಮಹಾತ್ಮ ಗಾಂಧಿರಸ್ತೆಯಲ್ಲಿರುವ ತೇರಾಪಂತ್ ಭವನದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ರಕ್ತದಾನ ಶಿಬಿರನಡೆಯಿತು.ನಗರದ ತೇರಾಪಂಥ್ ಭವನದಲ್ಲಿ ಶಾಸಕ ಎಸ್.ಎ.ರಾಮದಾಸ್, ತೇರಾಪಂತ್ ಅಧ್ಯಕ್ಷ ದೀನೇಶ್‌ಡಕ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಉದ್ಘಾಟನೆ: ಶಾಸಕ ಎಲ್ . ನಾಗೇಂದ್ರ, ಮಾಜಿಶಾಸಕ ವಾಸು ಅಶೋಕ ರಸ್ತೆಯ ಕನ್ನಿಕಾ ಮಹಲ್‌ನಲ್ಲಿ, ಸೇಫ್ ವ್ಹೀಲ್ ಮಾಲೀಕ ಪ್ರಶಾಂತ್‌ಶ್ರೀರಾಂಪುರದ ಬ್ರಹ್ಮರಂಬ ಕಲ್ಯಾಣ ಮಂಟಪದಲ್ಲಿಜಿಎಸ್‌ಎಸ್ ಸಂಸ್ಥಾಪಕ ಶ್ರೀಹರಿ, ಜಯಮ್ಮಗೋವಿಂದಗೌಡ ಕಲ್ಯಾಣ ಮಂಟಪದಲ್ಲಿ, ವಿಜಯವಿಠuಲ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ್‌ಭಟ್ ಸಿದ್ಧಾರ್ಥನಗರದ ವೆಂಕಟಲಿಂಗಯ್ಯಕಲ್ಯಾಣ ಮಂಟಪದಲ್ಲಿ, ಆಯೋಜಿಸಿದ್ದ ಶಿಬಿರಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ಮೈಸೂರು ಅಧ್ಯಕ್ಷ ಅಧ್ಯಕ್ಷಮಂಜೇಶ್ ಕುಮಾರ್, ಉಪಾಧ್ಯಕ್ಷ ರವಿಶಂಕರ,ಕಾರ್ಯದರ್ಶಿ ರೂಪಾ, ನಿರ್ದೇಶಕ ಪ್ರವೀಣ್‌ಕುಮಾರ್, ದಿನೇಶ್, ತೇರಾಪಂಥ್ ಸಂಸ್ಥೆ ಆನಂದಮಾಂಡೊತ್, ಮುಖೇಶ್, ಆರ್‌ಜಿಎಸ್ ಸಂಸ್ಥೆಅಧ್ಯಕ್ಷ ದೇವೇಂದ್ರ, ಚಿರಂಜ್ ಲಾಲ…, ಹ್ಯೂಮನ್‌ಟಚ್‌ನ ವಿಕ್ರಮ್ ಗೌತಮ…, ವಿಕ್ರಮ್ ಜೈನ್,ವಿಕಾಸ ಜೈನ್, ಚಿರಾಗ್, ಅಭಿಜಿತ್, ರೋಟರಿಯಅಯ್ಯಣ್ಣ ಮತ್ತಿತರರಿದ್ದರು.