Advertisement

ರಕ್ತದಾನ ಮಾಡಿದ ಸಚಿವ ಸುಧಾಕರ್‌-ಸಂಸದ ಜಾಧವ

07:24 AM Jun 15, 2020 | Suhan S |

ಕಲಬುರಗಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ರವಿವಾರ ರಕ್ತದಾನ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಉಮೇಶ ಜಾಧವ ಅವರು, 120 ದಿನಗಳಿಗೊಮ್ಮೆ ರಕ್ತದಾನ ಮಾಡಿದರೆ ರೋಗದಿಂದ ಬಳಲುತ್ತಿರುವ ಹಾಗೂ ರಕ್ತವಿಲ್ಲದೆ ಸಾವನ್ನಪ್ಪುವ ರೋಗಿಗಳಿಗೆ ಬದುಕಿಸುವ ಕೆಲಸ ಮಾಡಿದಂತಾಗುತ್ತದೆ ಎಂದರು. ಜಿಲ್ಲೆಯ ಜನರು ರಕ್ತದಾನ ಮಾಡಿ ಬ್ಲಿಡ್‌ ಡೈರೆಕ್ಟರಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯಿಂದ ರೋಗಿ ಸಾಯಲು ಅವಕಾಶ ಮಾಡಿ ಕೊಡಬಾರದು ಎಂದರು.

ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೆಲ್ಕೂರ್‌, ಡಾ.ಅವಿನಾಶ ಜಾಧವ್‌, ಜಿಮ್ಸ್‌ ವೈದ್ಯಕೀಯ ಕಾಲೇಜಿನ ಅಧಿ ಕಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next