ಚಾಮರಾಜನಗರ: ಕಂದಾಯ ದಿನಾಚರಣೆ ಅಂಗವಾಗಿ ಕಂದಾಯನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಸಹಾಯಕರಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯ ರಕ್ತನಿಧಿಕೇಂದ್ರ ಹಾಗೂ ರೋಟರಿ ಸಿಲ್ಕ್ ಸಿಟಿ ಸಂಯುಕ್ತಾಶ್ರಯದಲ್ಲಿ ಹಸಿರೋತ್ಸವಹಾಗೂ ರಕ್ತದಾನ ಶಿಬಿರವನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಎಸ್.ಕಾತ್ಯಾಯಿನಿದೇವಿ ಅವರುಕಂದಾಯ ದಿನದ ಪ್ರಯುಕ್ತ ಗಿಡ ನೆಟ್ಟುನೀರೆರೆಯುವ ಮೂಲಕ ಹಸಿರೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕಮಾತನಾಡಿ, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆಯಾಗಿದ್ದು, ಜನಸಾಮಾನ್ಯರ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.ಕಂದಾಯ ದಿನ ಆಚರಣೆಯನ್ನು ಮೌಲ್ಯಯುತವಾಗಿ ಆಚರಿಸುವನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿ ಹಾಗೂ ನಾಡಕಚೇರಿಗಳಅವರಣದಲ್ಲಿ ಗಿಡ ನೆಡುವ ಮಹತ್ವದ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಮೂಲಕ ಉತ್ತಮ ಪರಿಸರವನ್ನುಕಾಪಾಡಿಕೊಳ್ಳುವುದೇಕಂದಾಯ ದಿನದಉದ್ದೇಶವಾಗಿದೆ ಎಂದರು.
ಬಳಿಕ ನಗರದ ರೋಟರಿಭವನದಲ್ಲಿ ನಡೆದವೇದಿಕೆಕಾರ್ಯಕ್ರಮದಲ್ಲಿಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನುಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿಜಿಲ್ಲಾಧಿಕಾರಿ ,ರಕ್ತದಾನ ಶ್ರೇಷ್ಠದಾನ ಹಾಗೂ ಮಹಾದಾನವಾಗಿದೆ. ಜೀವಕ್ಕೆಮೂಲವಾಗಿರುವ ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದೆ ಬರಬೇಕು. ಕೋವಿಡ್‌ನಂತಹ ಸಂಕಷ್ಟ ಸಮಯದಲ್ಲಿ ಇಲಾಖೆಯಸಿಬ್ಬಂದಿಗಳು ರಕ್ತದಾನದಂತಹ ಮಹತ್ಕಾರ್ಯಕ್ಕೆ ಮುಂದಾಗಿರುವುದುಕಂದಾಯ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಕ್ತದಾನ ಶಿಬಿರದಲ್ಲಿ 52 ಯೂನಿಟ್ ರಕ್ತ ಸಂಗ್ರಹವಾಗಿರುವ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದ ಕಾತ್ಯಾಯಿನಿದೇವಿ ಅವರು ರಕ್ತದಾನದಲ್ಲಿ ಭಾಗಿಯಾದ ಎಲ್ಲರನ್ನು ಅಭಿನಂದಿಸಿದರು. ತಹಶೀಲ್ದಾರ್ ಚಿದನಂದ ಗುರುಸ್ವಾಮಿ, ಗ್ರೇಡ್-2 ತಹಶೀಲ್ದಾರ್ ವೈ.ಎಂ. ನಂಜಯ್ಯ, ವೈದ್ಯಕೀಯವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ದಿವ್ಯಾ,ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಉಲ್ಲಾಸ್ ಇತರರು ಇದ್ದರು.