Advertisement

ಶೇರು ಮಾರುಕಟ್ಟೆ Monday Crash ; ಹೂಡಿಕೆದಾರರಿಗೆ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂ. ನಷ್ಟ

09:50 AM Mar 10, 2020 | Hari Prasad |

ಮುಂಬಯಿ: ವಿಶ್ವವ್ಯಾಪಿಯಾಗುತ್ತಿರುವ ಕೊರೊನಾ ಸಂಕಟ, ಸೌದಿ-ರಷ್ಯಾ ದರ ಸಮರದಿಂದ ಭಾರೀ ಕುಸಿತ ಕಂಡಿರುವ ಕಚ್ಛಾ ತೈಲ ಬೆಲೆ ಹಾಗೂ ದೇಶದಲ್ಲಿ ಯೆಸ್ ಬ್ಯಾಂಕ್ ಸಂಕಟ ಇವು ಮೂರು ಪ್ರಮುಖ ಅಂಶಗಳು ಶೇರು ಮಾರುಕಟ್ಟೆಯ ಮೇಲೆ ಘಾತಕವಾಗಿ ಎರಗಿದ್ದು ಹೂಡಿಕೆದಾರರು ಸೋಮವಾರ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

Advertisement

ವ್ಯವಹಾರದ ಮೊದಲನೇ ದಿನದ ಪ್ರಾರಂಭದಲ್ಲೇ ಕುಸಿತಕ್ಕೊಳಗಾದ ಬಿ.ಎಸ್.ಇ. ಸೂಚ್ಯಂಕ ಬಳಿಕ ಮಧ್ಯಾಹ್ನ 1.22ರ ವೇಳೆಗೆ 2,326.35 ಅಂಕಗಳಷ್ಟು ಅಥವಾ 6% ಕುಸಿತ ಕಂಡು  35,250.27 ಅಂಕಗಳಿಗೆ ಸ್ಥಿರವಾಯಿತು. ಇನ್ನು ಎನ್.ಎಸ್.ಇ. ನಿಫ್ಟಿ 646.95 ಅಂಕಗಳಷ್ಟು ಅಂದರೆ 5.89% ಕುಸಿತವನ್ನು ದಾಖಲಿಸಿ 10,342.50 ಅಂಕಗಳಿಗೆ ಕುಸಿದು ನಿಂತಿತು.

ಇದು ಒಂದೇ ದಿನದಲ್ಲಿ ಸೆನ್ಸೆಕ್ಸ್ ನಲ್ಲಿ ದಾಖಲಾಗಿರುವ ಅತೀ ದೊಡ್ಡ ಕುಸಿತವಾಗಿದೆ. 30 ಪ್ಯಾಕ್ ಬೆಂಚ್ ಮಾರ್ಕ್ ಇಂಡೆಕ್ಸ್ ನಲ್ಲಿ ಹೆಚ್ಚಿನ ಎಲ್ಲಾ ಶೇರುಗಳು ಕೆಂಪು ಬಣ್ಣಕ್ಕೆ ತಿರುಗಿದವು. ಇನ್ನು ನಿಫ್ಟಿ ಸಹ 10,500ಕ್ಕೆ ಕುಸಿದಿದ್ದು ಇದು 2018ರ ಡಿಸೆಂಬರ್ ಬಳಿಕದ ಅತೀ ಕನಿಷ್ಟ ಅಂಕವಾಗಿದೆ.

ಐ.ಒ.ಸಿ., ಹೆಚ್.ಪಿ.ಸಿ.ಎಲ್., ಒ.ಎನ್.ಜಿ.ಸಿ., ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳ ಶೇರುಗಳು ಭಾರೀ ನಷ್ಟಕ್ಕೊಳಗಾದವು. ಕಳೆದೆರಡು ವ್ಯವಹಾರದ ಅವಧಿಯಲ್ಲಿ ಹೂಡಿಕೆದಾರರಿಗೆ ಒಟ್ಟಾರೆಯಾಗಿ 10 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next