ಕೇರಳ: ಬಜೆಟ್ ಅಧಿವೇಶನಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಲು ಹೊರಟಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸುತ್ತುವರಿದು ವಿರೋಧ ಪಕ್ಷದ ನಾಯಕರು(ಯುಡಿಅಫ್ ಪಕ್ಷದ ಸದಸ್ಯರು) ‘ಗೋ ಬ್ಯಾಕ್ ಗವರ್ನರ್ ‘ ಘೋಷಣೆ ಕೂಗಿ ಹೈಡ್ರಾಮ ನಡೆಸಿದ ಘಟನೆ ಕೇರಳ ವಿಧಾನ ಸಭೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕೇರಳ ವಿಧಾನ ಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ರಾಜ್ಯಪಾಲರು ಭಾಷಣ ಮಾಡಲು ಸದನದ ಬಾವಿಗೆ ಆಗಮಿಸುತ್ತಿದ್ದಂತೆಯೇ ಅವರನ್ನು ಸುತ್ತುವರಿದು ಗೋ ಬ್ಯಾಕ್ ಗವರ್ನರ್, ಗೋ ಬ್ಯಾಕ್ ಗವರ್ನರ್ ಎಂಬ ಘೋಷಣೆ ಕೂಗಿದರು. ಆ ಬಳಿಕ ರಾಜ್ಯಪಾಲರು ಮಾರ್ಷಲ್ ಗಳ ನೆರವಿನೊಂದಿಗೆ ಸ್ಪೀಕರ್ ವೇದಿಕೆಯತ್ತ ತೆರಳಿದರು.
ವಿಧಾನಸಭೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಪಿ ಶ್ರೀ ರಾಮಕೃಷ್ಣನ್ , ರಾಜ್ಯಪಾಲರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದರು. ಆದರೇ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದಾಗಿ ಸದನದ ಬಾವಿಯೊಳಗೆಯೇ ರಾಜ್ಯಪಲರು 10 ನಿಮಿಷಗಳ ಕಾಲ ನಿಂತು , ನಂತರ ಮಾರ್ಷಲ್ಸ್ ಗಳ ರಕ್ಷಣೆಯೊಂದಿಗೆ ಭಾಷಣ ಮಾಡಲು ಸ್ಪೀಕರ್ ವೇದಿಕೆಯತ್ತ ತೆರಳಬೇಕಾಯಿತು.
Related Articles
ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಕೇರಳ ವಿಧಾನಸಭೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಇತ್ತೀಚಿಗೆ ಸದನದಲ್ಲಿ ನಿರ್ಣಯ ಹೊರಡಿಸಿದ್ದರು.