Advertisement

“ಆಶೀರ್ವಾದವೇ ಅತೀ ದೊಡ್ಡ ಸಮ್ಮಾನ’

04:17 PM Feb 22, 2017 | Team Udayavani |

ಕುಂದಾಪುರ:  ಕೊಂಕಣಿ ಖಾರ್ವಿ ಸಮಾಜದ  ಅಭಿವೃದ್ಧಿಗೆ ಅನೇಕ ನೆರವು ನೀಡಲಾಗಿದೆ. ತ್ರಾಸಿಯಲ್ಲಿ ಕೊಂಕಣಿ ಖಾರ್ವಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲು ಪ್ರಾಮಾಣಿಕ   ಪ್ರಯತ್ನ  ನಡೆಸುವುದಾಗಿ  ಬೈಂದೂರು  ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ  ಕೆ. ಗೋಪಾಲ ಪೂಜಾರಿ ಹೇಳಿದರು.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ಕಟ್‌ಬೇಲೂ¤ರಿನ ತಮ್ಮ ಸ್ವಗೃಹದಲ್ಲಿ ರವಿವಾರ  ನಡೆದ ಸಮ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರಾಗಿದೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಸೀಮೆಎಣ್ಣೆ ಬಂಕ್‌ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ ಅವರು ಈ ಸಮ್ಮಾ¾ನಕ್ಕಿಂತ ಕ್ಷೇತ್ರದಲ್ಲಿ ಜನಸೇವಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನರು ಮಾಡುವ ಆಶೀರ್ವಾದವೇ ಅತೀ ದೊಡ್ಡ Óಮ್ಮಾನ ಎಂದರು.

ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ.ಬಿ. ಖಾರ್ವಿ, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಹಿರಿಯ ಉಪಾಧ್ಯಕ್ಷ ಮೋಹನದಾಸ ಬಾನಾವಳಿಕರ್‌, ಖಜಾಂಚಿ ಜಿ. ಪುರುಷೋತ್ತಮ ಆರ್ಕಾಟಿ, ಕೇಂದ್ರ ಕಾರ್ಯದರ್ಶಿ ದಿನಕರ ಖಾರ್ವಿ, ಕೃಷ್ಣ ಖಾರ್ವಿ, ಪ್ರಕಾಶ ಖಾರ್ವಿ, ಲಕ್ಷ್ಮಣ ಖಾರ್ವಿ, ಸತೀಶ ಖಾರ್ವಿ ಜಿ. ಎನ್‌., ಮಾಧವ ಖಾರ್ವಿ, ಎಂ.ಜಿ.ಬಾನಾವಳಿಕರ್‌, ಸೂರ್ಯಕಾಂತ ಖಾರ್ವಿ, ವಿಜಯ ಖಾರ್ವಿ, ದಿನಕರ ಪಟೇಲ್‌, ಅರುಣ ಖಾರ್ವಿ, ನಿತ್ಯಾನಂದ ಜಿ.ಟಿ., ಮಂಜುನಾಥ ಖಾರ್ವಿ, ಲೋಕೇಶ ಖಾರ್ವಿ, ಸುರೇಖಾ ಕಾನೋಜಿ, ಉಮಾ ಖಾರ್ವಿ, ಸರೋಜಿನಿ ಖಾರ್ವಿ, ಕುಂದಾಪುರ  ಹಾಗೂ ಗಂಗೊಳ್ಳಿ ಘಟಕದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next