ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸ್ವರ್ಣಮಂದಿರದ ಬಳಿ ಶನಿವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಗಾಯಗೊಂಡಿರುವುದು ವರದಿಯಾಗಿದೆ. ಸ್ವರ್ಣಮಂದಿರದ ಕಟ್ಟಡ ಸಮೀ ಪದಲ್ಲೇ ಸ್ಫೋಟ ಸಂಭವಿಸಿದ್ದು, ಈ ವೇಳೆ ಸಿಡಿದ ಗಾಜಿನ ಚೂರುಗಳಿಂದಾಗಿ ಪಕ್ಕದಲ್ಲೇ ರಿಕ್ಷಾವೊಂದರಲ್ಲಿ ತೆರಳುತ್ತಿದ್ದ 6 ಮಹಿಳಾ ಪ್ರಯಾಣಿಕರು ಗಾಯಗೊಂಡಿ ದ್ದಾರೆ. ಘಟನೆ ವೀಡಿಯೋ ಸಿಸಿ ಟಿವಿಯಲ್ಲಿ ಸರೆಯಾಗಿದ್ದು, ಸ್ಥಳೀಯರು ಹಾಗೂ ಭಕ್ತಾದಿ ಭಯಭೀತರಾಗಿದ್ದಾರೆ. ಇನ್ನು ಸ್ಫೋಟದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದು ಭಯೋತ್ಪಾದಕ ಕೃತ್ಯವೆಂದು ಶಂಕೆ ವ್ಯಕ್ತಪಡಿ ಸಿದ್ದಾರೆ. ಆದರೆ ಪೊಲೀಸರು ಈ ಸಾಧ್ಯತೆಗಳನ್ನು ಅಲ್ಲಗೆಳೆದಿದ್ದಾರೆ. ವಿಧಿವಿಜ್ಞಾನ ತಂಡವು ಸ್ಥಳ ತಲುಪಿ, ಸ್ಫೋಟ ಸಂಭವಿಸಿದ ಕಿಟಕಿ ಬಳಿಇದ್ದಂಥ ಸ್ಫೋಟಕದ ಪೌಡರ್ ಅನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕೊಂಡೊಯ್ದಿದೆ. ಈ ಕುರಿತಂತೆ ತನಿಖೆಯನ್ನೂ ನಡೆಸಲಾಗುತ್ತಿದೆ. ತನಿಖಾ ವರದಿಗಳ ಬಳಿಕವಷ್ಟೇ ನಿಜವಾದ ಸಂಗತಿ ತಿಳಿಯಬೇಕಿದೆ. ಅದಕ್ಕೂ ಮುನ್ನ ಘಟನೆ ಬಗ್ಗೆ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಪೊಲೀಸರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.