Advertisement

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

01:13 AM Jun 22, 2024 | Team Udayavani |

ಹಾಸನ: ಎಚ್‌.ಡಿ. ರೇವಣ್ಣ ಕುಟುಂಬದ ಮತ್ತೊಬ್ಬ ಸದಸ್ಯ, ವಿಧಾನ ಪರಿಷತ್‌ ಡಾ| ಸೂರಜ್‌ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಲಾಗಿದೆ. 5 ಕೋಟಿ ರೂ. ವಸೂಲಿಯ ಪ್ರಯತ್ನ ನಡೆದಿದೆ. ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯ ವಿರುದ್ದ ಶುಕ್ರವಾರ ಪ್ರಕರಣ ದಾಖಲಾಗಿದೆ.

Advertisement

ಅರಕಲಗೂಡು ತಾಲೂಕಿನ ಕೆ.ಎಸ್‌. ಚೇತನ್‌, ಆತನ ಭಾವ ಚೇತನ್‌ ವಿರುದ್ಧ ಡಾ| ಸೂರಜ್‌ ರೇವಣ್ಣ ಬ್ರಿಗೇಡ್‌ನ‌ ಖಜಾಂಚಿ ಶಿವಕುಮಾರ್‌ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ
ಹನುಮನಹಳ್ಳಿಯ ಶಿವಕುಮಾರ್‌ ಈ ಹಿಂದೆ ಅರಕಲ ಗೂಡಿನಲ್ಲಿ ಫೈನಾನ್ಸ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಕೊಳ್ಳಂಗಿ ಗ್ರಾಮದ ಕೆ.ಎಸ್‌. ಚೇತನ್‌ ಪರಿಚಯವಾಗಿದ್ದ. ಕೆಲವು ದಿನಗಳ ಕಾಲ ಇಬ್ಬರೂ ಒಟ್ಟಿಗೇ ಕೆಲಸ ಮಾಡಿದ್ದರು. ಶಿವಕುಮಾರ್‌ ಅವರು ಡಾ| ಸೂರಜ್‌ ಬ್ರಿಗೇಡ್‌ ಖಜಾಂಚಿಯಾಗಿ ಅವರ ಒಡನಾಡಿಯಾಗಿದ್ದರಿಂದ ತನಗೂ ಡಾ| ಸೂರಜ್‌ ಪರಿಚಯ ಮಾಡಿಸಿಕೊಡು, ಅವರಿಗೆ ಹೇಳಿ ಯಾವುದಾದರೂ ಕೆಲಸವನ್ನು ನನಗೆ ಕೊಡಿಸಿ ಸಹಾಯ ಮಾಡು ಎಂದು ಶಿವಕುಮಾರ್‌ಗೆ 6 ತಿಂಗಳ ಹಿಂದೆ ಚೇತನ್‌ ದುಂಬಾಲು ಬಿದ್ದಿದ್ದ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಡಾ| ಸೂರಜ್‌ ಅವರಿಗೆ ಚೇತನ್‌ನನ್ನು ಪರಿಚಯವನ್ನೂ ಮಾಡಿಕೊಟ್ಟ ಸಂದರ್ಭದಲ್ಲಿ ಸೂರಜ್‌ ಅವರ ಫೋನ್‌ ನಂಬರನ್ನೂ ಚೇತನ್‌ ಪಡೆದುಕೊಂಡಿದ್ದ ಎಂದು ಶಿವಕುಮಾರ್‌ ಅವರು ದೂರಿನಲ್ಲಿ ವಿವರ ನೀಡಿದ್ದಾರೆ.

ಕೆ.ಎಸ್‌. ಚೇತನ್‌ಗೆ ಸದ್ಯ ಉದ್ಯೋಗವಿಲ್ಲ, ಮುಂದೆ ನೋಡೋಣ ಎಂದು ಸೂರಜ್‌ ಹೇಳಿದ್ದರು. ಇದರಿಂದ ಆತ ಸಿಟ್ಟಿಗೆದ್ದು ಸಹಾಯ ಮಾಡದಿದ್ದರೆ ಸೂರಜ್‌ ರೇವಣ್ಣ ಮತ್ತು ನಿಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುತ್ತೇನೆ. ಕೇಸು ದಾಖಲಿಸಬಾರದು ಎಂದಿದ್ದರೆ 5 ಕೋ. ರೂ. ಕೊಡಬೇಕು ಎಂದು ಫೋನ್‌ ಮೂಲಕ ತಿಳಿಸಿದ್ದ ಎಂದು ಶಿವಕುಮಾರ್‌ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next