Advertisement

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

02:19 PM Dec 25, 2024 | Team Udayavani |

ಬೆಂಗಳೂರು: ಸ್ನೇಹಿತೆಯ ಅಶ್ಲೀಲ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂಬುದು ಸಿಸಿಬಿ ಪೊಲೀಸರ ತನಿಖೆ ಯಲ್ಲಿ ಬೆಳಕಿಗೆ ಬಂದಿದೆ.

Advertisement

ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಹೇಮಂತ್‌ (32) ಮತ್ತು ಭದ್ರಾವತಿ ಮೂಲದ ಹರೀಶ್‌(30) ಬಂಧಿತರು. ಆರೋಪಿಗಳಿಂದ 7 ಮೊಬೈಲ್‌ಗ‌ಳು, 1 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರು 8 ವರ್ಷಗಳಿಂದ ಸ್ನೇಹಿತರಾಗಿದ್ದಾರೆ.

ಆರೋಪಿಗಳ ಪೈಕಿ ಹೇಮಂತ್‌ 2017ರಿಂದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಮಾರುವ ಅಂಗಡಿ ನಡೆಸುತ್ತಿದ್ದಾನೆ. ಆಗ ಗ್ರಾಹಕರಾಗಿ ಬಂದಿದ್ದ ಸಂತ್ರಸ್ತೆ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, 4 ವರ್ಷಗಳ ಕಾಲ ಒಂದೇ ಮನೆಯಲ್ಲಿ ಲಿವಿಂಗ್‌ ಟುಗೆದರ್‌ನಲ್ಲಿದ್ದರು.

ಮತ್ತೂಂದೆಡೆ ಹೇಮಂತ್‌, ಸ್ನೇಹಿತೆಯ ಹೆಸರಿನಲ್ಲಿ ಅತ್ತಿಬೆಲೆಯಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ತೆರೆದಿದ್ದು, ಅದನ್ನು ಹರೀಶ್‌ ಮೇಲುಸ್ತುವಾರಿ ನೋಡಿಕೊ ಳ್ಳುತ್ತಿದ್ದ. ಹೀಗಾಗಿ ಸಂತ್ರಸ್ತೆ ಇಬ್ಬರ ಜತೆಯೂ ಆತ್ಮೀಯವಾಗಿದ್ದಳು ಎಂಬುದು ಗೊತ್ತಾಗಿದೆ. ಈ ಮಧ್ಯೆ ಆರೋಪಿಗಳಿಬ್ಬರೂ 2021ರಲ್ಲಿ ಕಪಲ್ಸ್‌ ಪಾರ್ಟಿಗೆ ಸಂತ್ರಸ್ತೆಯನ್ನು ಕರೆದೊಯ್ದು, ಮದ್ಯದ ಅಮಲಿನಲ್ಲಿ ಬೇರೆ ಪುರುಷನ ಜತೆ ಸಹಕರಿಸುವಂತೆ ಆಕೆಗೆ ಪೀಡಿಸಿದ್ದರು. ಅದಕ್ಕೆ ನಿರಾಕರಿಸಿದಾಗ ಆರೋಪಿಗಳಿಬ್ಬರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಸಂತ್ರಸ್ತೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next