Advertisement
ವೃಷಭ: ಒಳ್ಳೆಯ ಕೆಲಸಗಳಿಗೆ ದೈವಾನುಗ್ರಹ.ಉದ್ಯೋಗ ರಂಗದಲ್ಲಿ ಖಾತೆ ಬದಲಾವಣೆ. ವ್ಯವಹಾರ ಕ್ಷೇತ್ರದಲ್ಲಿ ತಗ್ಗಿದ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದವುಗಳ ವ್ಯಾಪಾರಿಗಳಿಗೆ ಶುಭ ಸೂಚನೆ.
Related Articles
Advertisement
ಕನ್ಯಾ: ಸತ್ಕಾರ್ಯಕ್ಕೆ ನೆರವಾಗುವ ಅವಕಾಶ. ಪಾಲುದಾರರೊಂದಿಗೆ ಪ್ರಯಾಣ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯ.
ತುಲಾ: ಪಂಚಮ ಶನಿಯ ಬಾಧೆಯಿದ್ದರೂ ಭಯಪಡುವ ಸನ್ನಿವೇಶ ಇಲ್ಲ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆ ಸುಗಮ.ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ಹೊಲಿಗೆ ಕೆಲಸ ಬಲ್ಲವರಿಗೆ ವಿಶೇಷ ಅವಕಾಶ.
ವೃಶ್ಚಿಕ: ಕುಟುಂಬದ ಸಂತೋಷ ಕೂಟದಲ್ಲಿ ಭಾಗಿ. ಸ್ವತಂತ್ರ ವ್ಯವಹಾರಸ್ಥರಿಗೆ ಉತ್ತೇಜನದ ಕ್ರಮ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ.ಕೃಷಿ ಉತ್ಪನ್ನ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವ್ಯವಹಾರದ ಸಂಬಂಧ ಉತ್ತರಕ್ಕೆ ಪ್ರಯಾಣ.
ಧನು: ಉಪಕಾರ ನಿರೀಕ್ಷಿಸುವವರಿಗೆ ಸಹಾಯ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಸಾಕುಪ್ರಾಣಿಗಳಿಂದ ತೊಂದರೆಯ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ. ಮನೆಯಲ್ಲಿ ಆಭರಣ ತಯಾರಿಸುವವರಿಗೆ ಬೇಡಿಕೆ.
ಮಕರ: ಸಾಂಸಾರಿಕ, ಉದ್ಯೋಗ ಕ್ಷೇತ್ರಗಳಲ್ಲಿ ತೃಪ್ತಿ. ಅನುಭವ ಇರುವ ಕೆಲಸವೊಂದನ್ನು ನಿರ್ವಹಿಸಲು ಕರೆ. ವಾಹನ ದುರಸ್ತಿ ಕೆಲಸಗಾರರಿಗೆ, ಔಷಧ ವ್ಯಾಪಾರಿಗಳಿಗೆ ಲಾಭ. ಪ್ರಾಚೀನ ಪದ್ಧತಿ ಯಿಂದ ದೇಹಾರೋಗ್ಯ ವೃದ್ಧಿ.
ಕುಂಭ: ಒಮ್ಮೊಮ್ಮೆ ಏನು ಮಾಡಿದರೂ ಪ್ರತಿಕೂಲ ಪರಿಣಾಮ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಕಮಿಶನ್ ಏಜೆಂಟರಿಗೆ, ಲೈನ್ ಸೇಲ್ಸ್ ಮಾಡುವವರಿಗೆ ಪೈಪೋಟಿ. ದಸ್ತಾವೇಜು ಬರಹಗಾರರ ವ್ಯವಹಾರ ವೃದ್ಧಿ. ಅನಿರೀಕ್ಷಿತ ಅತಿಥಿ ಸತ್ಕಾರ ಯೋಗ.
ಮೀನ: ಉದ್ಯೋಗಸ್ಥರಿಗೆ ಹೊಸ ವಿಭಾಗದ ಹೊಣೆಗಾರಿಕೆ.ಸಾಮಾಜಿಕ ರಂಗದಿಂದ ಒತ್ತಡ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲದ ದಿನ. ಸಂಸಾರದಲ್ಲಿ ಪ್ರೀತಿ, ಅನುರಾಗ, ವಿಶ್ವಾಸ ವೃದ್ಧಿ. ಸರಕಾರಿ ಇಲಾಖೆಗಳಿಂದ ಸಹಾಯ. ದೇವಿ ದೇವಸ್ಥಾನಕ್ಕೆ ಭೇಟಿ.