Advertisement

Bengaluru: ನಗ್ನ ದೃಶ್ಯಗಳ ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌

12:30 PM Nov 02, 2024 | Team Udayavani |

ಬೆಂಗಳೂರು: ಸ್ನೇಹಿತೆಗೆ ಅರಿವಿಲ್ಲದಂತೆ ಮೊಬೈಲ್‌ ನಲ್ಲಿ ಥರ್ಡ್‌ಪಾರ್ಟಿ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಆಕೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್ ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ಸಂಜಯ್‌ ಕುಮಾರ್‌ ಆರೋಪಿ. ದೂರು ನೀಡಿರುವ 27 ವರ್ಷದ ಸಂತ್ರಸ್ತೆ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅದೇ ಕಂಪನಿಯಲ್ಲಿ ಹೆಲ್ಪರ್‌ ಆಗಿದ್ದ ವಿಷ್ಣು ಎಂಬಾತನ ಮೂಲಕ 2023ರಲ್ಲಿ ಆರೋಪಿ ಸಂಜಯ್‌ಕುಮಾರ್‌ ಪರಿಚಯವಾಗಿತ್ತು. ಈ ಮೂವರೂ ಹೋಟೆಲ್‌, ಪಾರ್ಕ್‌ಗಳಲ್ಲಿ ಕುಳಿತು ಮಾತನಾಡುತ್ತ ಆತ್ಮೀಯ ರಾಗಿದ್ದರು. ಈ ನಡುವೆ ಸಂತ್ರಸ್ತೆಯ ಮೊಬೈಲ್‌ ಅನ್ನು ಕೆಲ ಕಾಲ ಸಂಜಯ್‌ ಉಪಯೋಗಿಸಿದ್ದ. 2024ನೇ ಫೆಬ್ರವರಿಯಲ್ಲಿ ಸಂಜಯ್‌ ಸಂತ್ರಸ್ತೆ ಮೊಬೈಲ್‌ನಲ್ಲಿ ಥರ್ಡ್‌ ಪಾರ್ಟಿ ಅಪ್ಲಿಕೇಷನ್‌ ಅನ್ನು ಆಕೆಯ ತಿಳಿಯ ದಂತೆ ಡೌನ್ಲೋಡ್‌ ಮಾಡಿ ಅದನ್ನು ಮೊಬೈಲ್‌ ಸ್ಕ್ರೀನ್‌ ನಲ್ಲಿ ಕಾಣದ ಹಾಗೆ ಹೈಡ್‌ ಮಾಡಿದ್ದ. ಸಂತ್ರಸ್ತೆ ಗಂಡ ಮನೆಯಲ್ಲಿದ್ದಾಗ ರೂಮ್‌ನಲ್ಲಿ ತನ್ನ ಮೊಬೈಲ್‌ ಚಾರ್ಜ್‌ ಮಾಡಲು ಇಟ್ಟು ಸ್ನಾನ ಮಾ ಡಲು ಹೋಗುವಾಗ ತುರ್ತಾಗಿ ಫೋನ್‌ ಬರಬ ಹುದೆಂದು ಮೊಬೈಲ್‌ಅನ್ನು ಬಾತ್‌ರೂಮ್‌ಗೆ ತೆಗೆದು ಕೊಂಡು ಹೋಗಿದ್ದರು.

ಇತ್ತ ಸಂಜಯ್‌ ಸಂತ್ರಸ್ತೆಯ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿದ್ದ ಥರ್ಡ್‌ಪಾರ್ಟಿ ಅಪ್ಲಿಕೇಷನ್‌ನನ್ನು ಆನ್‌ ಮಾಡಿ ಕೊಂಡು ಮೊಬೈಲ್‌ ನಲ್ಲಿ ಕ್ಯಾಮೆರಾ, ಆಡಿಯೋಗಳನ್ನು ಆನ್‌ ಮಾಡಿ ಕೊಂಡು ಯುವಕ ತಮ್ಮ ರೂಮ್‌ನಲ್ಲಿ ಸ್ನಾನ ಮಾಡಿ ರುವ ವಿಡಿಯೋ ಸೇವ್‌ ಮಾಡಿಟ್ಟು ಕೊಂಡಿದ್ದ.

ಸಂತ್ರಸ್ತೆಗೆ ಬ್ಲ್ಯಾಕ್‌ ಮೇಲ್‌: 2024ರ ಫೆಬ್ರವರಿಯಲ್ಲಿ ಸಂಜಯ್‌ ಸಂತ್ರಸ್ತೆಗೆ ಕರೆ ಮಾಡಿ, ವಿಷ್ಣು ನಿನ್ನ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದು, ಅದನ್ನು ನನಗೆ ಕಳುಹಿಸಿದ್ದಾನೆ ಎಂದು ಹೇಳಿದ್ದ. ನಂತರ ವಿಷ್ಣುಗೆ ಆ ವಿಡಿಯೋದ ಬಗ್ಗೆ ಕೇಳಿದಾಗ ಆತ ನನಗೇನು ಗೊತ್ತಿಲ್ಲ ಎಂದು ಹೇಳಿದ್ದ. ಇದೇ ವಿಚಾರವಾಗಿ ಸಂಜಯ್‌ ವಿಡಿಯೋಗಳನ್ನೆಲ್ಲ ಡಿಲಿಟ್‌ ಮಾಡಿದ್ದೇನೆ, ನೀನೇನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದ. ನಂತರ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಆಗುತ್ತೇನೆ. ನಿನ್ನ ಗಂಡ ಮದ್ಯಪಾನ ಮಾಡುತ್ತಾನೆ. ಇಬ್ಬರೂ ಮದುವೆಯಾಗಿ ಸುಖವಾಗಿ ರೋಣ ಎಂದು ಹೇಳಿದ್ದ. ಈ ರೀತಿ ಮಾತನಾಡಬೇಡ ನಾವಿ ಬ್ಬರೂ ಸ್ನೇಹಿತರು ಎಂದು ಸಂತ್ರಸ್ತೆ ಹೇಳಿದ್ದರು.

ಆರೋಪಿ ಮೊಬೈಲ್‌ನಲ್ಲಿ ಹಲವು ವಿಡಿಯೋ: ನಂತರ ದಿನಗಳಲ್ಲಿ ಸಂಜಯ್‌ ಆತನ ಬಳಿ ಇಟ್ಟುಕೊಂಡಿದ್ದ ವಿಡಿಯೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಹೆದರಿಸಿ ಹಣಕ್ಕಾಗಿ ಬ್ಲ್ಯಾಕ್‌ವೆುàಲ್‌ ಮಾಡಿ 15 ಸಾವಿರ ರೂ. ಪಡೆದಿದ್ದ. ಸೆ.7ರಂದು ಸಂತ್ರಸ್ತೆಯನ್ನು ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಸಂತ್ರಸ್ತೆಯ ಮೊಬೈಲ್‌ ಕಸಿದುಕೊಂಡು ಒಡೆದು ಹಾಕಿದ್ದ. ಆತನ ರೂಮ್‌ನಲ್ಲಿ ಬಲವಂತವಾಗಿ ದೈಹಿಕ ಸಂಭೋಗ ಮಾಡಿದ್ದ. ಆತನಿಂದ ಬಿಡಿಸಿಕೊಂಡು ಆರೋಪಿಗೆ ಕೊಟ್ಟಿದ್ದ ಮೊಬೈಲ್‌ ಜೊತೆಗೆ ಸಂತ್ರಸ್ತೆ ಅಲ್ಲಿಂದ ಬಂದಿದ್ದರು. ಆರೋಪಿಯು ಇದೇ ಮಾದರಿಯ ಹಲವು ವಿಡಿಯೋ ಇಟ್ಟುಕೊಂಡಿದ್ದನ್ನು ನೋಡಿ ಆಘಾತವಾಗಿತ್ತು. ಆತ ಚಾಟಿಂಗ್‌ ಮಾಡಿ ಬೆತ್ತಲೆ ವಿಡಿಯೋ ಇಟ್ಟು ಕೊಂಡಿದ್ದ ಹುಡುಗಿಯರ ಜೊತೆ ಮಾತನಾಡಿ ಆತನ ಬಗ್ಗೆ ತಿಳಿಸಿ ಈತನ್ನು ನಂಬಬೇಡಿ ಎಂದು ಹೇಳಿದ್ದೆ. ಅ.29ರಂದು ಸಂತ್ರಸ್ತೆ ಹೋಗುತ್ತಿದ್ದಾಗ ಆರೋಪಿಯು ಅಡ್ಡಗಟ್ಟಿ ಹಣ ಕೊಡದಿದ್ದರೆ ವಿಡಿಯೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ ಎಂದು ಸಂತ್ರಸ್ತೆ ಎಫ್ಐಆರ್‌ನಲ್ಲಿ ಉಲ್ಲೇಖೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next