Advertisement

Blackmail Case: ಖಾಸಗಿ ದೃಶ್ಯ ಸೆರೆಹಿಡಿದು ಬ್ಲಾಕ್‌ಮೇಲ್‌; ಇಬ್ಬರ ಬಂಧನ

09:49 AM Sep 16, 2023 | Team Udayavani |

ಬೆಂಗಳೂರು: ಹೋಟೆಲ್‌ ರೂಮ್‌ನಲ್ಲಿ ಖಾಸಗಿ ವಿಡಿಯೋ ಸೆರೆಹಿಡಿದು 1 ಲಕ್ಷ ರೂ. ನೀಡುವಂತೆ ಎಂಬಿಎ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಚಂದ್ರಲೇಔಟ್‌ನ ನಿವಾಸಿ ನಯನಾ, ಕಿರಣ್‌ ಬಂಧಿತರು.

ನಯನಾ ಜತೆಗೆ ಕಿರಣ್‌ ಸೇರಿಕೊಂಡು ಹೋಟೆಲ್‌ ಪ್ರಾರಂಭಿಸಿದ್ದರು. ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ವಾಸವಿದ್ದ 22 ವರ್ಷದ ಎಂಬಿಎ ವಿದ್ಯಾರ್ಥಿನಿಯು ತನ್ನ ಪ್ರಿಯಕರನ ಜತೆಗೆ ಆಗಾಗ ಇವರ ಹೋಟೆಲ್‌ಗೆ ಬಂದು ರೂಮ್‌ ಪಡೆಯುತ್ತಿದ್ದಳು. ಯುವತಿಯ ಸ್ನೇಹಿತನ ಜೊತೆಯಿದ್ದ ಖಾಸಗಿ ಫೋಟೊ, ವಿಡಿಯೋಗಳನ್ನು ಆರೋಪಿಗಳು ಸೆರೆಹಿಡಿದು ಇತ್ತೀಚೆಗೆ ಯುವತಿಯ ಮೊಬೈಲ್‌ಗೆ ಕಳಿಸಿದ್ದರು. 1 ಲಕ್ಷ ರೂ. ನೀಡಬೇಕು. ಇಲ್ಲದಿದ್ದರೆ ಈ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್‌ ಮಾಡುವುದಾಗಿ ಆರೋಪಿಗಳು ಬ್ಲ್ಯಾಕ್‌ಮೇಲ್‌ ಮಾಡಿದ್ದರು.

ಆತಂಕಗೊಂಡ ಯುವತಿ ಇ ಬಗ್ಗೆ ಚಂದ್ರಲೇಔಟ್‌ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next