Advertisement

Fact Check : ಕರಿಮೆಣಸು, ಶುಂಠಿ, ಜೇನುತುಪ್ಪ ಕೋವಿಡ್ ನಿಯಂತ್ರಣಕ್ಕೆ ಔಷಧವಲ್ಲ…!

01:45 PM Apr 26, 2021 | Team Udayavani |

ನವದೆಹಲಿ : ಸದ್ಯ ದೇಶದಲ್ಲಿ ಜನರು ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ಈ ವೇಳೆ ತಮ್ಮ ಜೀವ ಉಳಿಸಿಕೊಳ್ಳಲು ಏನನ್ನು ಬೇಕಾದರು ಮಾಡಲು ಜನ ಸಿದ್ಧರಿದ್ದಾರೆ. ಆದ್ರೆ ಇಂತಹ ಪರಿಸ್ಥಿತಿಯನ್ನೇ ಬಳಕೆ ಮಾಡಿಕೊಂಡಿರುವ ಕೆಲವರು ಸುಳ್ಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕೋವಿಡ್ ಸೋಂಕು ದೇಶಕ್ಕೆ ಪ್ರವೇಶ ಪಡೆದ ಸಂದರ್ಭದಲ್ಲಿ ಕೆಲವು ಸುಳ್ಳು ಸುದ್ದಿಗಳು ಹರಿದಾಡಿದ್ದು, ಈ ಸೋಂಕನ್ನು ನಿವಾರಣೆ ಮಾಡಲು ಕರಿಮೆಣಸು, ಶುಂಠಿ, ಜೇನು ತುಪ್ಪವನ್ನು ಸೇವನೆ ಮಾಡಬೇಕು ಎಂದು ಹೇಳಲಾಗಿತ್ತು.

Advertisement

ಹೌದು ಈ ಸುದ್ದಿ ಸುಳ್ಳು ಎಂದು ಇದೀಗ WHO ಸ್ಪಷ್ಟ ಪಡಿಸಿದೆ. ಪಾಂಡಿಚರಿಯ ಒಬ್ಬ ವೈದ್ಯಕೀಯ ವಿದ್ಯಾರ್ಥಿ ಈ ಸುದ್ದಿಯನ್ನು ಹರಿಬಿಟ್ಟಿದ್ದ. ಕೋವಿಡ್ ಸೋಂಕನ್ನು ಕಡಿಮೆ ಮಾಡಲು ನೀವು ಶುಂಠಿ, ಕರಿಮೆಣಸು ಮತ್ತು ಜೇನು ತುಪ್ಪವನ್ನು ಸೇವಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ನಂಬಿದ ಅದೆಷ್ಟೋ ಜನ ಈ ಸಂಬಂಧದ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಫಾರ್ವರ್ಡ್ ಕೂಡ ಮಾಡಿದ್ದರು.

ಆದ್ರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು. ಇಂತಹ ಮಾಹಿತಿಗಳನ್ನು ನಂಬಬೇಡಿ. ಅಧಿಕೃತ ಸಂಸ್ಥೆಗಳು ನೀಡುವ ಆರೋಗ್ಯದ ಮಾಹಿತಿಗಳನ್ನು ಮಾತ್ರ ನಂಬಿ. ಅಲ್ಲದೆ ಈ ರೀತಿಯ ಫೇಕ್ ಸುದ್ದಿಗಳು ನಿಮ್ಮ ಗಮನಕ್ಕೆ ಬಂದರೆ ಅವುಗಳನ್ನು ಶೇರ್ ಮಾಡಬೇಡಿ ಎಂದು ತಿಳಿಸಿದೆ.

ಈ ಸುದ್ದಿಯನ್ನು PIB fact check (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಟ್ವಿಟ್ಟರ್ ಖಾತೆ ಶೇರ್ ಮಾಡಿದೆ. ಅದ್ರಲ್ಲಿ ವೈದ್ಯಕೀಯ ವಿದ್ಯಾರ್ಥಿ ಶೇರ್ ಮಾಡಿದ್ದ ಲೇಖನದ ಸ್ಕ್ರೀನ್ ಶಾಟ್ ಹಾಕಿದ್ದು, ಇದು ಫೇಕ್ ಸುದ್ದಿ ಎಂದು ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next