ದಂಧೆ’ ರಾಜಧಾನಿಯಲ್ಲೂ ಎಗ್ಗಿಲ್ಲದೆ ಗರಿಗೆದರಿಕೊಂಡಿತು. ಮೂರ್‍ನಾಲ್ಕು ದಿನಗಳ ಬಳಿಕ ಕಪ್ಪುಹಣ ಹೊಂದಿದ ಭಾರೀ
ಕುಳಗಳು ನೇರವಾಗಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣದ ಕಪ್ಪು-ಬಿಳಿ ಆಟ ನಡೆಸಲು ಶುರು
ಮಾಡಿದರು. ಇದ್ದಕ್ಕಿದ್ದಂತೆ ನೂರಾರು ಮಂದಿ ಕಮಿಷನ್ ದಲ್ಲಾಳಿಗಳು ಹುಟ್ಟಿಕೊಂಡರು. ಈ ಕಾಳದಂಧೆಯ
ಜಾಡುಹಿಡಿದು ಸಿಬಿಐ, ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಬೇಟೆ ಆರಂಭಿಸಿ ಆರ್‌ಬಿಐ ಸಿಬ್ಬಂದಿ, ಖಾಸಗಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಹಾಗೂ ದಂಧೆಯಲ್ಲಿ ಭಾಗಿಯಾಗಿದ್ದ ಹಲವು ಮಂದಿಗೆ ಬಲೆ ಬೀಸಿ ಕಾನೂನು ಕ್ರಮಜರುಗಿಸಿದವು.
Advertisement
ಈ ಬೆನ್ನಲ್ಲೇ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದಇದುವರೆಗೂ 233 ಮಂದಿಯನ್ನು ಹೆಡೆಮುರಿಕಟ್ಟಿ, 55 ಪ್ರಕರಣಗಳನ್ನು ದಾಖಲಿಸಿಕೊಂಡು 65 ಕೋಟಿ ರೂ
ಅಮಾನ್ಯಗೊಂಡ ರೂಪದಲ್ಲಿರುವ ಹಣ ಹಾಗೂ ಹೊಸನೋಟುಗಳಲ್ಲಿರುವ 82 ಲಕ್ಷ ರೂ.ಗಳಿಗೂ ಅಧಿಕ
ಮೊತ್ತವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ 1000 ಮತ್ತು 500 ರೂ.ನೋಟುಗಳನ್ನು ಅಮಾನ್ಯಗೊಳಿಸಿ ಹೊರಡಿಸಿದ ನಿರ್ಧಾರಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ನಗರದಲ್ಲಿ ಕಪ್ಪು ಹಣದ ಭೂತ ದಹನ ಮತ್ತು ಸಿಹಿ ಹಂಚಿಕೆ ಮಾಡಲಾಯಿತು. ಮಲ್ಲೇಶ್ವರದ ಕುವೆಂಪು ವೃತ್ತದಲ್ಲಿ ನೋಟು ಅಮಾನ್ಯ ಬೆಂಬಲಿಸಿ ಕಪ್ಪು ಹಣ ವಿರೋಧಿ ದಿನ ಆಚರಿಸಿದರು. ಅಲ್ಲದೆ, ಕಪ್ಪು ಹಣದ ಭೂತದಹನ ಮಾಡಿದರು. ಜತೆಗೆ ನೋಟು ಅಮಾನ್ಯ ಬೆಂಬಲಿಸಿ ಬೃಹತ್ ಫ್ಲೆಕ್ಸ್ ಮೇಲೆ ಸಾರ್ವಜನಿಕ ರಿಂದ ಸಹಿ ಸಂಗ್ರಹ ಮಾಡಿದರು. ಈ ವೇಳೆ ನೋಟು ಅಮಾನ್ಯದ ಅನುಕೂಲಗಳ ಬಗ್ಗೆ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಲಾಯಿತು. ಇನ್ನೊಂದೆಡೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ನೇತೃತ್ವದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮಂತ್ರಿಮಾಲ್ ಮೆಟ್ರೋ ನಿಲ್ದಾಣ ದಿಂದ ಮೆಜೆಸ್ಟಿಕ್ ನಿಲ್ದಾಣದವರೆಗೆ ಪ್ರಯಾಣಿಕರಿಗೆ ಸಿಹಿ ಹಂಚಿದರು. ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಅನುಕೂಲಗಳ ಬಗ್ಗೆ ವಿವರಿಸಿದರು.