Advertisement

ಬ್ಲ್ಯಾಕ್ ಮ್ಯಾಜಿಕ್ ನಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

07:41 PM Aug 10, 2022 | Team Udayavani |

ಪಾಣಿಪತ್: ಬೆಲೆ ಏರಿಕೆ ವಿರೋಧಿಸಿ ಆಗಸ್ಟ್ 5 ರಂದು ಕಪ್ಪು ಬಟ್ಟೆ ಧರಿಸಿರುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಾಗ್ದಾಳಿ ನಡೆಸಿದ್ದು, “ಬ್ಲ್ಯಾಕ್ ಮ್ಯಾಜಿಕ್” ಅನ್ನು ನಂಬುವವರು ಮತ್ತೆ ಎಂದಿಗೂ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

900 ಕೋಟಿ ಮೌಲ್ಯದ ಎಥೆನಾಲ್ ಸ್ಥಾವರವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ, ಕೆಲವು ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿವೆ ಎಂದು ವಾಗ್ದಾಳಿ ನಡೆಸಿ, ಇಂತಹ ವಿಷಯಗಳು ಹೊಸ ತಂತ್ರಜ್ಞಾನದ ಹೂಡಿಕೆಗೆ ಅಡ್ಡಿಯಾಗುವುದರಿಂದ ರಾಷ್ಟ್ರಕ್ಕೆ ಅಪಚಾರ ಮಾಡುತ್ತವೆ ಎಂದರು.

“ಆಗಸ್ಟ್ 5 ರಂದು, ಕೆಲವರು ‘ಬ್ಲಾಕ್ ಮ್ಯಾಜಿಕ್’ ಅನ್ನು ಹೇಗೆ ಹರಡಲು ಪ್ರಯತ್ನಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ತಮ್ಮ ಹತಾಶೆಯನ್ನು ಕೊನೆಗೊಳಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಮಾಚಾರ, ಮಾಟಮಂತ್ರ, ಮೂಢನಂಬಿಕೆಗಳಲ್ಲಿ ತೊಡಗುವುದರಿಂದ ಮತ್ತೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ ಎಂದರು.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಆಗಸ್ಟ್ 5 ರಂದು ಸಂಸತ್ತಿನಲ್ಲಿ ಮತ್ತು ಹೊರಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next