Advertisement
ಐನ್‌ಸ್ಟೀನ್ ಸಿದ್ಧಾಂತ ಮರುಸಾಬೀತು!: ಕಪ್ಪು ರಂಧ್ರಗಳ ಸುತ್ತ ಸುತ್ತುವ ಧೂಳು ಮತ್ತಿತರ ಕಣಗಳ ದ್ರವ್ಯರಾಶಿ (ಮಾಸ್) ಎಷ್ಟರ ಮಟ್ಟಿಗೆ ಬಾಗಿ ಸಾಗುವುದರಿಂದ ಆ ಕಪ್ಪು ರಂಧ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಸೃಷ್ಟಿಯಾ ಗುತ್ತದೆ. ಗುರುತ್ವಾಕರ್ಷಣ ಶಕ್ತಿಯ ಪ್ರಾಬಲ್ಯ ಆ ದ್ರವ್ಯರಾಶಿ ವ್ಯಾಪ್ತಿಗೆ ಅನುಗುಣವಾಗಿರುತ್ತದೆ ಎಂದು ಅಮೆರಿಕದ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿàನ್, ತಮ್ಮ “ಥಿಯರಿ ಆಫ್ ರಿಲೇಟಿವಿಟಿ’ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದರು. ಈಗ, ಕಪ್ಪು ರಂಧ್ರಗಳ ಮೂಲಕ ಬೆಳಕು ಹಾದುಹೋಗಿರುವುದು ಆ ರಂಧ್ರದ ಗುರುತ್ವಾಕರ್ಷಣ ಶಕ್ತಿ ಕ್ಷೀಣವಾಗಿರುವುದನ್ನು ತೋರಿಸಿದೆ. ಈಗ ಅಧ್ಯಯನ ಮಾಡಿರುವ ಕಪ್ಪು ರಂಧ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಕ್ಷೀಣವಾಗಿದ್ದರಿಂದಲೇ ಅಂಥ ಕಪ್ಪು ರಂಧ್ರದಲ್ಲಿ ಬೆಳಕು ಹಾದು ಹೋಗಲು ಸಾಧ್ಯವಾಗಿದೆ.
Related Articles
Advertisement
ಹೊಸದಿಲ್ಲಿ: ಖಗೋಳ ವಿಜ್ಞಾನಿಗಳಿಗೆ ಇಂದಿಗೂ ಸೋಜಿಗದ ಗೂಡೆನಿಸಿರುವ ಕಪ್ಪು ರಂಧ್ರಗಳ ಮೂಲಕ ಬೆಳಕು ಹರಿದು ಹೋಗುವುದನ್ನು ಭೂಮಿಯಿಂದ ಸುಮಾರು 80 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರವಿರುವ ಕಪ್ಪುರಂಧ್ರ ವೊಂದರ ಅಧ್ಯಯನದಲ್ಲಿ ತೊಡಗಿದ್ದ ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡ್ಯಾನ್ ವಿಲ್ಕಿನ್ಸ್ ಪತ್ತೆ ಹಚ್ಚಿದ್ದಾರೆ. ಖಗೋಳ ವಿಜ್ಞಾನದಲ್ಲಿ ಇಂಥ ಮಹತ್ವದ ಸಂಶೋಧನೆಯಾಗಿರುವುದು ಇದೇ ಮೊದಲು.
ಐನ್‌ಸ್ಟೀನ್ ಸಿದ್ಧಾಂತ ಮರುಸಾಬೀತು!: ಕಪ್ಪು ರಂಧ್ರಗಳ ಸುತ್ತ ಸುತ್ತುವ ಧೂಳು ಮತ್ತಿತರ ಕಣಗಳ ದ್ರವ್ಯರಾಶಿ (ಮಾಸ್) ಎಷ್ಟರ ಮಟ್ಟಿಗೆ ಬಾಗಿ ಸಾಗುವುದರಿಂದ ಆ ಕಪ್ಪು ರಂಧ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಸೃಷ್ಟಿಯಾ ಗುತ್ತದೆ. ಗುರುತ್ವಾಕರ್ಷಣ ಶಕ್ತಿಯ ಪ್ರಾಬಲ್ಯ ಆ ದ್ರವ್ಯರಾಶಿ ವ್ಯಾಪ್ತಿಗೆ ಅನುಗುಣವಾಗಿರುತ್ತದೆ ಎಂದು ಅಮೆರಿಕದ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿàನ್, ತಮ್ಮ “ಥಿಯರಿ ಆಫ್ ರಿಲೇಟಿವಿಟಿ’ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದರು. ಈಗ, ಕಪ್ಪು ರಂಧ್ರಗಳ ಮೂಲಕ ಬೆಳಕು ಹಾದುಹೋಗಿರುವುದು ಆ ರಂಧ್ರದ ಗುರುತ್ವಾಕರ್ಷಣ ಶಕ್ತಿ ಕ್ಷೀಣವಾಗಿರುವುದನ್ನು ತೋರಿಸಿದೆ. ಈಗ ಅಧ್ಯಯನ ಮಾಡಿರುವ ಕಪ್ಪು ರಂಧ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಕ್ಷೀಣವಾಗಿದ್ದರಿಂದಲೇ ಅಂಥ ಕಪ್ಪು ರಂಧ್ರದಲ್ಲಿ ಬೆಳಕು ಹಾದು ಹೋಗಲು ಸಾಧ್ಯವಾಗಿದೆ.
ಅಂದರೆ ಆ ಕಪ್ಪುರಂಧ್ರದ ದ್ರವ್ಯರಾಶಿ ಹಾಗೂ ಅದರ ಬಾಗುವಿಕೆ ಎರಡೂ ಕ್ಷೀಣಿಸಿವೆ ಎಂದರ್ಥ. ಈ ಆವಿಷ್ಕಾರ ಮುಂದೆ ವಿವಿಧ ಕ್ಷೀರಪಥಗಳ, ವಿವಿಧ ಗ್ರಹಗಳ ಗುರುತ್ವಾಕರ್ಷಣ ಅಧ್ಯಯನಕ್ಕೂ ಸಹಾಯವಾಗಲಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಐಐಎಸ್ಸಿ ವಿಜ್ಞಾನಿಯ ಮಹತ್ವದ ಸಾಧನೆ:
ಹೊಸದಿಲ್ಲಿ: ಸೂರ್ಯನಲ್ಲಿ ಅಗಾಧ ಪ್ರಮಾಣದ ಬೆಳಕು ಮತ್ತು ಶಾಖವನ್ನು ಉತ್ಪತ್ತಿ ಮಾಡುವ ಸೂರ್ಯನ ಒಳಪದರದ ಪರಿಭ್ರಮಣ ಪದರವನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಾಧ್ಯಾಪಕರಾದ ಅರ್ನಾಬ್ ರೈ ಚೌಧರಿ ಹಾಗೂ ಆರ್ಯಭಟ ಸಂಶೋಧನ ಸಂಸ್ಥೆಯ (ಎಆರ್‌ಐಇಎಸ್) ವಿಭೂತಿ ಕುಮಾರ್ ಝಾ ಯಶಸ್ವಿಯಾಗಿದ್ದಾರೆ. ಸೂರ್ಯನ ಮೇಲ್ಮೆ„ನ ಒಳಭಾಗದಲ್ಲಿ ಮೇಲ್ಮೆ„ಗೆ ತೀರಾ ಹತ್ತಿರವಿರುವ ನಿಯರ್ ಸಫೇìಸ್ ಶಿಯರ್ ಲೇಯರ್ (ಎನ್‌ಎಸ್‌ಎಲ್) ಎಂಬ ಹೆಸರಿನ ಈ ಪದರದಿಂದಾಗಿ ಸೂರ್ಯನಲ್ಲಿ ಅಗಾಧ ಪ್ರಮಾಣದ ಶಾಖ ಮತ್ತು ಬೆಳಕು ಉತ್ಪತ್ತಿಯಾಗುತ್ತದಲ್ಲದೆ, ಸೂರ್ಯದ ಧ್ರುವಗಳು, ಭೂಮಿಯ ಧ್ರುವಗಳಿಗಿಂತಲೂ ಅತ್ಯಂತ ವೇಗವಾಗಿ ಬದಲಾವಣೆಗೊಳ್ಳಲು ಮೂಲ ಕಾರಣವಾಗಿದೆ ಎಂದು ಈ ವಿಜ್ಞಾನಿಗಳು ತಿಳಿಸಿದ್ದಾರೆ.