ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವಕ್ಕೆ ಮೊಟ್ಟ ಮೊದಲ ಬಾರಿಗೆ ಯಶಸ್ವಿಯಾಗಿ ಬಾಹ್ಯಕಾಶ ನೌಕೆಯನ್ನು ಇಳಿಸಿದ ಇಸ್ರೋ, ಹೊಸ ವರ್ಷದ ಜ.1ರಂದು ಹೊಸ ಸಾಹಸಕ್ಕೆ ಅಣಿಯಾಗಿದೆ.
ಕಪ್ಪು ಕುಳಿ(ಬ್ಲ್ಯಾಕ್ ಹೋಲ್) ಅಧ್ಯಯನ ಕ್ಕಾಗಿ ಎಕ್ಸ್-ರೇ ಪೋಲಾರಿಮೀಟರ್ ಉಪ ಗ್ರಹ ವನ್ನು ಜ.1ರಂದು ಇಸ್ರೋ ಉಡಾವಣೆ ಮಾಡುತ್ತಿದೆ. ಇಂಥ ಅಧ್ಯಯನವು ಭಾರತದ ಮೊದಲ ಹಾಗೂ ಜಗತ್ತಿನ ಎರಡನೆಯದ್ದಾಗಿದೆ. 2021ರಲ್ಲಿ ಅಮೆರಿಕದ ನಾಸಾ ಮೊದಲ ಬಾರಿಗೆ ಇಮೇಜಿಂಗ್ ಎಕ್ಸ್-ರೇ ಪೋಲಾರಿಮಿಟ್ರಿ ಎಕ್ಸ್‌ಪ್ಲೋರರ್(ಐಎಕ್ಸ್‌ಪಿ ಇ) ಉಪಗ್ರಹವನ್ನು ಉಡಾವಣೆ ಮಾಡಿತ್ತು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜ.1ರಂದು ಬೆಳಗ್ಗೆ 9.10 ಗಂಟೆಗೆ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ(ಎಕ್ಸ್‌ಪೊಸ್ಯಾಟ್) ಹೊತ್ತ ಪೋಲಾರ್ ಉಪಗ್ರಹ ಉಡಾವಣ ವಾಹಕವು(ಪಿಎಸ್‌ಎಲ್‌ವಿ) ಉಡಾವಣೆ ಆಗಲಿದೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲಾಗಲಿದೆ.
ಉಪಗ್ರಹವನ್ನು 500-700 ಕಿ.ಮೀ. ವೃತಾಕಾರಾದ ಭೂಮಿಯ ಕೆಳಗಿನ ಕಕ್ಷೆಗೆ ಸೇರಿಸಲಾಗುತ್ತದೆ. ಈ ಯೋಜನೆಯ ಜೀವಿತಾವಧಿ 5 ವರ್ಷಗಳಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಯು.ಆರ್.ರಾವ್ ಉಪಗ್ರಹ ಕೇಂದ್ರದ ಸಹಯೋಗದಲ್ಲಿ ರಾಮನ್ ಸಂಶೋಧನ ಸಂಸ್ಥೆಯು ಉಪಗ್ರಹಕ್ಕೆ ಅಳವಡಿಸಿರುವ ಪೋಲಿಕ್ಸ್ (ಪೋಲಾರಿಮೀಟರ್ ಇನ್‌ಸ್ಟ್ರೆ ಮೆಂಟ್ ಇನ್ ಎಕ್ಸ್-ರೇಸ್) ಮತ್ತು ಎಕ್ಸ್ ಸ್ಪೆಕ್ಟ್ (ಎಕ್ಸ್-ರೇ ಸ್ಪೆಟ್ರೋಸ್ಕೋಪಿ ಆ್ಯಂಡ್ ಟೈಮಿಂಗ್) ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಉಡ್ಡಯನದಿಂದ ಏನು ಲಾಭ?: ಬಾಹ್ಯಾಕಾಶ ವ್ಯಾಪ್ತಿಯಲ್ಲಿರುವ ಕ್ಷಕಿರಣಗಳು ಮತ್ತು ಧ್ರುವ ಮಿತಿಯ ಅಧ್ಯಯನವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅದರ ಮೂಲಕ ಜಗತ್ತಿನ 50 ಪ್ರಕಾಶಮಾನ ಮೂಲಗಳ ಹಾಗೂ ಕಪ್ಪು ಕುಳಿ, ಪಲ್ಸರ್‌ಗಳು, ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿ ಯಸ್‌ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್‌ನೊàವಾ ಅವಶೇಷಗಳ ಬಗ್ಗೆ ಅಧ್ಯಯನ ನಡೆಸಲಿದೆ.