ಹುಬ್ಬಳ್ಳಿ: ಕೊರೊನಾ ಸೋಂಕು ತಗುಲಿದ ಎಲ್ಲರಲ್ಲೂ ಫಂಗಸ್ (ಶಿಲೀಂಧ್ರ) ಕಾಣಿಸಿಕೊಳ್ಳಲ್ಲ. ಶಿಲೀಂಧ್ರಗಳಲ್ಲಿ ಕಪ್ಪು, ಬಿಳಿ, ಹಳದಿ ಎಂಬ ವರ್ಣಗಳಿರಲ್ಲ. ಇದು ಒಂದು ಹಂತಗಳಲ್ಲಿ ಕಂಡು ಬರುವ ವಿಭಿನ್ನ ಬಗೆಯ ಲಕ್ಷಣಗಳಾಗಿವೆ. ಕಾರಣ ಇದರ ಬಗ್ಗೆ ಯಾರೂ ಭಯ-ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ.
ಮಧುಮೇಹಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದ ನಂತರ ಅವರು ಮನೆಗೆ ಹೋದ ಬಳಿಕ, ನಿಯಮಿತವಾಗಿ ರಕ್ತದಲ್ಲಿ ಸಕ್ಕರೆಮಟ್ಟ ತಪಾಸಣೆ ಮಾಡಿಸಿಕೊಳ್ಳಬೇಕು. ಅದರ ನಿಯಂತ್ರಣ ಸಲುವಾಗಿ ಮೊದಲು ಯಾವ ಮಾತ್ರೆ ತೆಗೆದುಕೊಳ್ಳುತ್ತಿದ್ದರೋ ಅದನ್ನೇ ಪಡೆಯಬೇಕು. ಒಂದು ವೇಳೆ ಡೋಸ್ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ತಮ್ಮ ವೈದ್ಯರನ್ನು ಸಂಪರ್ಕಿಸಿ, ಸಕ್ಕರೆ ಕಾಯಿಲೆ ಹತೋಟಿಯಲ್ಲಿ ಇಟ್ಟುಕೊಂಡರೆ ಕಪ್ಪು, ಬಿಳಿ, ಹಳದಿ ವರ್ಣಗಳ ಶಿಲೀಂಧ್ರ ಕಾಣಿಸಿಕೊಳ್ಳಲ್ಲ.
ನಮ್ಮ ದೇಹದಲ್ಲಿ ಯಾವಾಗ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ ಅಂತಹ ಸಂದರ್ಭದಲ್ಲಿ ಇಂತಹ ಶಿಲೀಂಧ್ರ (ಫಂಗಸ್) ಕಂಡು ಬರುತ್ತದೆ. ಮೂತ್ರಪಿಂಡ ಕಸಿ, ಹೃದಯ ಕಸಿ ಸೇರಿದಂತೆ ಇತರೆ ಕಸಿ ಮಾಡಿಸಿಕೊಂಡವರು ಹಾಗೂ ಹೆಚ್ಚಿನ ಸಕ್ಕರೆ ಪ್ರಮಾಣ ಇದ್ದವರು, ಬಹಳ ದಿನಗಳಿಂದ ಸ್ಟೆರೈಡ್ ಮಾತ್ರೆ ತೆಗೆದುಕೊಳ್ಳುವವರು, ವೈಯಕ್ತಿಕ ಹೈಜಿನ್ ನಿರ್ವಹಣೆ ಮಾಡದವರಲ್ಲಿ ಸಾಮಾನ್ಯವಾಗಿ ಫಂಗಸ್ ಕಾಣಿಸಿ ಕೊಳ್ಳುತ್ತದೆ.
ಸೋಂಕಿತರು ಗುಣಮುಖ ರಾದ ನಂತರ ಸ್ಟೆರೈಡ್ ಅನ್ನು ಸರಿಯಾಗಿ ಟೇಪರ್ ಮಾಡುತ್ತ ಬಂದ್ ಮಾಡಬೇಕು. ಅದರಲ್ಲಿ ಕೆಲವರು ಸ್ಟಾರ್ಟ್ ಮಾಡಲ್ಲ. ಇನ್ನೂ ಕೆಲವರು ಹೆಚ್ಚಿನ ಡೋಸ್ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವೊಬ್ಬರು ಸುಗರ್ ಟೆಸ್ಟ್ ಮಾಡಿಸಲ್ಲ. ಆರಾಮವಾಗಿದ್ದೇನೆಂಬ ಭಾವನೆ ಅವರಲ್ಲಿರುತ್ತದೆ. ಹೀಗಾಗಿ ಕೆಲವರಲ್ಲಿ ಫಂಗಸ್ (ಶಿಲೀಂಧ್ರ) ಕಾಣಿಸಿಕೊಳ್ಳುತ್ತಿದೆ.
ಈಗ ಫಂಗಸ್ ಕಾಣಿಸಿಕೊಂಡವರಲ್ಲಿ ಶುಗರ್ ಲೇವಲ್ 300ರಿಂದ 500ರ ಮೇಲೆ ಇರುತ್ತದೆ. ಕೋವಿಡ್-19 ಸೋಂಕು ಕಾಣಿಸಿಕೊಂಡವರಿಗೆ ಸ್ಟೆರೈಡ್ ಚಿಕಿತ್ಸೆ ಕೊಡಲೇಬೇಕು. ಈ ಚಿಕಿತ್ಸೆ ವಿಧಾನ ಮೂಲಕವೇ ವೈದ್ಯರು ಹೋಗುವ ಜೀವ ಉಳಿಸಿದ್ದಾರೆ. ಚಿಕಿತ್ಸೆ ವೇಳೆ ಸ್ಟೆರೈಡ್ ಬಳಸಿ ನಂತರ ನಿಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಒಂದಿಷ್ಟು ಸಕ್ಕರೆ ಕಾಯಿಲೆ ಲಕ್ಷಣ ಕಂಡು ಬಂದಿರುತ್ತದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಮನೆಗೆ ಹೋದ ಮೇಲೂ ನಿಯಮಿತವಾಗಿ ಸಕ್ಕರೆ ತಪಾಸಣೆ ಮಾಡಿಸಲೇಬೇಕು. ಹೆಚ್ಚಿಗೆ ಇದ್ದರೆ ಅದರ ಅನುಪ್ರಮಾಣವಾಗಿ ಮಾತ್ರೆ, ಇನ್ಸುಲ್ ತೆಗೆದುಕೊಳ್ಳಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು.
ಕಪ್ಪು ಶಿಲೀಂಧ್ರವನ್ನು ಆರಂಭಿಕ ಹಂತದಲ್ಲಿ ಲ್ಯಾಬರೋಟರಿಯಲ್ಲಿ ಬೆಳೆಸಲು ಹೋದಾಗ ನಿಜವಾಗಲು ಅದು ಬಿಳಿ ಆಗಿದೆ. ಫಂಗಸ್‌ನಲ್ಲಿ ವಿವಿಧ ಬಗೆಯ ಲಕ್ಷಣಗಳಿವೆ. ಕಾರಣ ಅದರ ಬಗ್ಗೆ ಜನರು ಆತಂಕ ಪಡುವ ಅವಶ್ಯಕತೆಯಿಲ್ಲ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿರುವುದು ಬಹಳ ಮುಖ್ಯವಾಗಿದೆ.