Advertisement
ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಬ್ಲ್ಯಾಕ್ ಫಂಗಸ್ ಪೀಡಿತರನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಪಡೆಯುವವರ ಮಾಹಿತಿ ಯನ್ನು ಕಡ್ಡಾಯವಾಗಿ ಆರೋಗ್ಯ ಇಲಾ ಖೆಗೆ ನೀಡಬೇಕು. ಅಗತ್ಯ ಔಷಧ ವನ್ನು ಆಸ್ಪತ್ರೆಗಳಿಗೆ ಕಳುಹಿಸ ಲಾಗುತ್ತದೆ ಎಂದು ಸರಕಾರ ಸೂಚಿಸಿದೆ.
Related Articles
ಕಪ್ಪು ಶಿಲೀಂಧ್ರ ಸೋಂಕಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ರಾಜ್ಯ ಮಟ್ಟದ ಚಿಕಿತ್ಸಾ ಕೇಂದ್ರ. ಕೆಎಂಸಿ ಮಣಿಪಾಲ, ವೆನಾÉಕ್ ಆಸ್ಪತ್ರೆ ಮಂಗಳೂರು, ಎಂಎಂಸಿ ಮೈಸೂರು, ಸಿಮ್ಸ್ ಶಿವ ಮೊಗ್ಗ, ಜಿಮ್ಸ್ ಕಲಬುರಗಿ, ಕಿಮ್ಸ್ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರಗಳಾಗಿರುತ್ತವೆ.
Advertisement
ಆರೋಗ್ಯವಂತರಿಗೆ ಹಾನಿ ಮಾಡುವುದಿಲ್ಲಕಪ್ಪು ಶಿಲೀಂಧ್ರವು ಒಂದು ಸೋಂಕು. ಎಲ್ಲ ಕಡೆ, ಎಲ್ಲರ ಮೈ ಮೇಲೆಯೂ ಇರುತ್ತದೆ. ಆದರೆ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಲ್ಲಿ ಪ್ರತಾಪ ತೋರುತ್ತದೆ ಎಂದು ನೇತ್ರ ತಜ್ಞ ಡಾ| ಭುಜಂಗ ಶೆಟ್ಟಿ ಹೇಳಿದ್ದಾರೆ. ಸಾಮಾನ್ಯ ಸಂದರ್ಭದಲ್ಲಿ ವರ್ಷಕ್ಕೆ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಕೊರೊನಾ ಸೋಂಕಿನಂತೆ ಆರೋಗ್ಯವಂತ ಸಾಮಾನ್ಯ ಜನರಿಗೆ ತಗಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬ್ಲ್ಯಾಕ್ ಫಂಗಸ್‌ನಿಂದ ಇಬ್ಬರು ಸಾವು
ವಿಜಯಪುರ/ಹುಮನಾಬಾದ : ವಿಜಯಪುರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಹುಮ್ನಾಬಾದ್ ತಾಲೂಕಿನ ಹಣಕುಣಿ ಗ್ರಾಮದ ಮಹಿಳೆ ಮತ್ತು ಆಳಂದ ತಾಲೂಕಿನ ರೈತರೊಬ್ಬರು ಕಪ್ಪು ಶಿಲೀಂಧ್ರ ರೋಗಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯ 26 ಮಂದಿಯಲ್ಲಿ ಇದು ಕಾಣಿಸಿಕೊಂಡಿದೆ. ಇದೇ ಗ್ರಾಮದ ಪಕ್ಕದ ಸಿಂಧನಕೇರಾ ಗ್ರಾಮದ ವ್ಯಕ್ತಿಯೊಬ್ಬರಿಗೂ ಬ್ಲ್ಯಾಕ್ ಫಂಗಸ್ ಸೋಂಕು ತಗಲಿದ್ದು, ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 26 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲಿದೆ. ಬಿಎಲ್‌ಡಿಇ ಬಿ.ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯಲ್ಲಿ 15, ಆಯುಷ್ ಆಸ್ಪತ್ರೆಯಲ್ಲಿ 5, ಅಶ್ವಿನಿ ಆಸ್ಪತ್ರೆಯಲ್ಲಿ 1, ಚೌಧರಿ ಆಸ್ಪತ್ರೆಯಲ್ಲಿ 2, ಯಶೋದಾ ಆಸ್ಪತ್ರೆಯಲ್ಲಿ 2 ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 1 ಪ್ರಕರಣ ಪತ್ತೆಯಾಗಿವೆ. ಕಪ್ಪು ಶಿಲೀಂಧ್ರ ಸೋಂಕು ಲಕ್ಷಣ?
ಕಪ್ಪು ಶಿಲೀಂಧ್ರ ಮೂಗಿನ ಮೂಲಕ ದೇಹ ಸೇರುತ್ತದೆ. ಮೂಗಿನಲ್ಲಿ ಕಪ್ಪು ದ್ರವ, ರಕ್ತ ಬರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋದರೆ ದವಡೆ ನೋವು, ಹಲ್ಲುಗಳು ಸಡಿಲ ವಾಗುವುದು, ದವಡೆ ನಿಷ್ಕ್ರಿಯವಾಗುತ್ತದೆ. ಕಣ್ಣಿಗೆ ಹೋದರೆ ಕಣ್ಣಿನ ಪಕ್ಕದಲ್ಲಿ ಕಪ್ಪು ಕಲೆ, ಕಣ್ಣಿಗೆ ಹಾನಿಯಾಗುತ್ತದೆ. ಕೊನೆಯದಾಗಿ ಮೆದುಳಿಗೆ ತಲುಪಿದಾಗ ವ್ಯಕ್ತಿ ಸಾವಿಗೀಡಾಗುತ್ತಾನೆ. ಈ ಯಾವುದೇ ಲಕ್ಷಣ ಕೊರೊನಾ ಪೀಡಿತರು, ಗುಣಮುಖರಲ್ಲಿ ಕಂಡುಬಂದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಬೇಕು. ಮುಂಜಾಗ್ರತೆ ಕ್ರಮ?
– ಕೊರೊನಾ ಪೀಡಿತರು ಮಧುಮೇಹ ನಿಯಂತ್ರಿಸಬೇಕು.
– ಆಸ್ಪತ್ರೆಗಳಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಮಿತವಾಗಿ ಸ್ಟಿರಾಯ್ಡ ಬಳಸಬೇಕು.
– ಮನೆ ಆರೈಕೆಯಲ್ಲಿರುವವರು ಸ್ಟಿರಾಯ್ಡ ಬಳಸಬಾರದು.
– ಗುಣವಾದ ಬಳಿಕ ಓಡಾಟ ಬೇಡ.
– ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.
– ಒಂದು ತಿಂಗಳು ಎಚ್ಚರ ವಹಿಸಬೇಕು.