Advertisement

ಕರಾವಳಿಯಲ್ಲಿ ಬ್ಲ್ಯಾಕ್ ಫಂಗಸ್ ಆತಂಕ : 7 ಮಂದಿಗೆ ದೃಢ, ಇಬ್ಬರ ಸಾವು

02:10 AM May 22, 2021 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಏರಿಕೆಯ ನಡುವೆ ನಡುವೆ ಬ್ಲ್ಯಾಕ್‌ ಫಂಗಸ್‌ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಜಿಲ್ಲಾಡಳಿತದ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಈವರೆಗೆ 7 ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ದೃಢವಾಗಿದ್ದು, ಒಬ್ಬರಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ. ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕೊರೊನಾ ರೋಗಿಗಳ ಮೇಲೆ ವಿಶೇಷ ನಿಗಾ ವಹಿಸಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಬ್ಲ್ಯಾಕ್‌ ಫಂಗಸ್‌ ಖಾಯಿಲೆಯನ್ನು ಕೆ.ಪಿ.ಎಂ.ಇ. ಕಾಯ್ದೆಯ ಕಲಂ 7ಬಿ ಅಡಿ ಅಧಿಸೂಚಿತ ರೋಗ ಎಂದು ಪರಿಗಣಿಸಲಾಗಿದೆ. ಇದರ ಚಿಕಿತ್ಸೆಯನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.

“ಈ ರೋಗದ ಬಗ್ಗೆ ಸಾರ್ವಜನಿಕರು ಭಯಪಡದೆ ಕೋವಿಡ್‌ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಮುಖ್ಯವಾಗಿ, ಗೃಹ ನಿಗಾವಣೆಯಲ್ಲಿರುವ ಹಾಗೂ ಗುಣಮುಖರಾದ ಕೋವಿಡ್‌ ಸೋಂಕಿತ ವ್ಯಕ್ತಿಗಳು ಮುಖದ ನೋವು/ಕೆನ್ನೆಯ ನೋವು, ರಕ್ತಸಿಕ್ತ ಮತ್ತು ದುರ್ವಾಸನೆ ಬೀರುವ ಮೂಗಿನ ಸ್ರಾವ, ಮೂಗಿನ ಬಿಗಿತ ಮತ್ತು ಕಣ್ಣಿನ ಲಕ್ಷಣಗಳು (ಕಣ್ಣುಗುಡ್ಡೆಯ ಎಡಿಮಾ, ಕಣ್ಣು ಕೆಂಪಾಗುವಿಕೆ, ಯಾವುದೇ ದೃಷ್ಟಿ ದೋಷವುಂಟಾಗುವಿಕೆ) ಲಕ್ಷಣಗಳು ಕಂಡು ಬಂದಲ್ಲಿ ತತ್‌ಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.

ಭೀತಿಗೆ ಒಳಗಾಗದಿರಿ
“ಕೋವಿಡ್‌ ಆರೈಕೆಯನ್ನು ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಸಾರ್ವಜನಿಕರು ಯಾವುದೇ ರೋಗ ಭೀತಿಗೆ ಒಳಗಾಗದೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದಿದ್ದಾರೆ.

Advertisement

ಔಷಧ ಕೊರತೆ
ಬ್ಲ್ಯಾಕ್‌ ಫಂಗಸ್‌ ರೋಗಕ್ಕೆ ತುತ್ತಾದ ರೋಗಿಗಳಿಗೆ ಇದೀಗ ಔಷಧ ಕೊರತೆ ಎದುರಾಗಿದೆ. ಈ ರೋಗಕ್ಕೆ ಜಿಲ್ಲಾ ವೆನಾÉಕ್‌ ಆಸ್ಪತ್ರೆಯಲ್ಲಿ ಔಷಧ ಲಭ್ಯವಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳಿಂದಲೂ ಈ ಔಷಧಕ್ಕೆ ಬೇಡಿಕೆ ಕೇಳಿಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ: ಇಬ್ಬರಲ್ಲಿ ಸೋಂಕು ಪತ್ತೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಬ್ಬರಿಗೆ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಪತ್ತೆಯಾಗಿದೆ. ಸಂತೆಕಟ್ಟೆಯ 60 ವರ್ಷ ಪ್ರಾಯದ ಮಹಿಳೆ ಹಾಗೂ ಕಾಪು ನಂದಿಕೂರಿನ 45 ವರ್ಷದ ಪುರುಷರೋರ್ವರಿಗೆ ಸೋಂಕು ತಗಲಿದೆ. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮಹಿಳೆ ವೆಂಟಿಲೇಟರ್‌ನಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಂಡುಬಂದ ಮೊದಲ ಎರಡು ಪ್ರಕರಣ ಇದಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅನ್ಯ ಜಿಲ್ಲೆಯಿಂದ ಆಗಮಿಸಿದ 7 ಮಂದಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೋಂಕು ಧೃಢಪಟ್ಟಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next