Advertisement

ಕೇರಳ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

09:25 AM Dec 03, 2018 | Team Udayavani |

ತಿರುವನಂತಪುರ: ಬೂದಿ ಮುಚ್ಚಿದ ಕೆಂಡದಂತಿದ್ದ ಶಬರಿಮಲೆಯಲ್ಲಿ ರವಿವಾರ ಕೇರಳ ಬಿಜೆಪಿ ಘಟಕ ನಿಷೇಧಾಜ್ಞೆ ಉಲ್ಲಂ ಸಿ ಪ್ರತಿಭಟನೆ ನಡೆಸಿದೆ. ಅಲ್ಲದೆ, ಬಿಜೆಪಿ ಯುವ ಘಟಕದ ಕೆಲವರು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ನೀಲಕ್ಕಲ್‌ನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಗೋಪಾಲಕೃಷ್ಣನ್‌ ನೇತೃತ್ವದಲ್ಲಿ ಪಕ್ಷದ ಎಂಟು ಮಂದಿ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂ ಸಿ ಅಯ್ಯಪ್ಪ ದೇಗುಲದತ್ತ ತೆರಳಲು ಯತ್ನಿಸಿದರಾದರೂ, ಅವರನ್ನು ಪೊಲೀಸರು ತಡೆದಿದ್ದಾರೆ. ಮತ್ತೂಂದು ಘಟನೆಯಲ್ಲಿ, ಕಾಯಕ್ರಮವೊಂದರಲ್ಲಿ ಭಾಗವಹಿಸಲೆಂದು ತೆರಳುತ್ತಿದ್ದ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್‌ಗೆ ಚೆಂಗನ್ನೂರ್‌ ಸಮೀಪದ ಮೌಲಕ್ಕುಝದಲ್ಲಿ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಇದೇ ವೇಳೆ ಸಿಎಂ ಭಾಗವಹಿಸಬೇಕಾಗಿದ್ದ ಕಾರ್ಯಕ್ರಮದ ಸ್ಥಳದಲ್ಲಿ “ನಾಮ ಜಪ’ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಮೋರ್ಚಾದ ಐವರು ಕಾರ್ಯ ಕರ್ತರನ್ನೂ ಬಂಧಿಸಲಾಗಿದೆ.

ಜ. 1ರಂದು “ಮಹಿಳಾ ಗೋಡೆ’ ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ, ಸುಪ್ರೀಂಕೋರ್ಟ್‌ ತೀರ್ಪನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಕೇರಳ ಸರಕಾರ, ಬರೋ ಬ್ಬರಿ 600 ಕಿ.ಮೀ. ಉದ್ದದ ಮಹಿಳೆಯರ ತಡೆಗೋಡೆ ರಚಿಸುವ ಘೋಷಣೆ ಮಾಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇರಳ ಸಚಿವ ಥಾಮಸ್‌ ಐಸಾಕ್‌, “ಕೇರಳವನ್ನು ಮಧ್ಯಕಾಲೀನ ಯುಗಕ್ಕೆ ಕರೆದೊಯ್ಯುವ ಪ್ರಯತ್ನವನ್ನು ತಡೆಯಲು ಮತ್ತು ಜಾಗೃತಿ ಮೂಡಿಸಲು ಹೊಸ ವರ್ಷದ ದಿನದಂದು ಮಹಿಳೆಯರ ಮಹಾಗೋಡೆ ನಿರ್ಮಿಸಲಿದ್ದೇವೆ. ಅದಕ್ಕಾಗಿ ಎಲ್ಲರೂ ಜತೆಗೂಡಿರಿ’ ಎಂದು ಟ್ವೀಟ್‌ ಮಾಡಿದ್ದಾರೆ. ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಕೂಡ ಇದೇ ವಿಚಾರವನ್ನು ಘೋಷಿಸಿದ್ದು, ದೇಗುಲಕ್ಕೆ ಮಹಿಳೆಯರ ಪ್ರವೇಶ ಬೆಂಬಲಿಸಿ ಕಾಸರಗೋಡಿನಿಂದ ರಾಜಧಾನಿ ತಿರುವನಂತಪುರದವರೆಗೆ ಮಹಿಳಾ ಗೋಡೆ ನಿರ್ಮಾಣವಾಗಲಿದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next