Advertisement

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

12:31 AM Nov 16, 2024 | Team Udayavani |

ಮೈಸೂರು: ಸಚಿವ ಜಮೀರ್‌ ಅಹ್ಮದ್‌ ಮತ್ತು ಆ ನಾಲ್ವರ ಜತೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಅವನ್ನು ಕೊಚ್ಚೆ ಎಂದು ಈಗ ದೂರ ಇಟ್ಟಿದ್ದೇನೆ. ಕೊಚ್ಚೆಗಳ ಬಗ್ಗೆ ಪದೇ ಪದೆ ಯಾಕೆ ಮಾತನಾಡಿಸುತ್ತೀರಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ಜಮೀರ್‌ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆ ವ್ಯಕ್ತಿ ಬಗ್ಗೆ ನನ್ನ ಬಳಿ ಚರ್ಚೆ ಮಾಡಬೇಡಿ. ಅವರ ಸಹಿತ ಐದಾರು ಜನ ರೊಂದಿಗೆ ಸಂಬಂಧ ಬೆಳೆಸಿದ್ದು ನನ್ನ ಜೀವ ನದ ಕರಾಳ ಅಧ್ಯಾಯ. ಅಂತಹವರಿಂದ ದೂರ ಈಗ ಎಚ್ಚರಿಕೆಯಿಂದ ಇದ್ದೇನೆ ಎಂದರು.

ತಮಗೆ ಮೋಸ ಮಾಡಿದ ದಿನ ನಾನು ಏನಾಗುತ್ತೇನೆ ಎಂದು ನೂರು ಬಾರಿ ಜಮೀರ್‌ ಹೇಳಿದ್ದಾನೆ. ಆ ಪದ ಯಾವುದು ಎಂಬುದನ್ನು ನನ್ನ ಬಾಯಿಯಿಂದ ಹೇಳಿಸಬೇಡಿ. ಅದು ಅತ್ಯಂತ ಕೆಟ್ಟ ಪದ. ನನಗೆ ಅದನ್ನ ಸಾರ್ವಜನಿಕವಾಗಿ ಬಳಸಲು ಆಗುತ್ತಿಲ್ಲ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ಕಥೆಯೇ ಮುಗಿಯಿತು ಅಂದುಕೊಂಡಿದ್ದರು. ಆದರೆ ಈಗ ಮತ್ತೆ ನಮಗೆ ಶಕ್ತಿ ಬಂದಿದೆ. ಅದನ್ನು ತಡೆದುಕೊಳ್ಳಲು ಆಗದೆ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಜನಾಂಗೀಯ ನಿಂದನೆಗೆ ಬೇಸರ
ನನ್ನ ಮತ್ತು ಜಮೀರ್‌ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಅವರನ್ನು ಕುಳ್ಳ ಎಂದು ಕರೆದೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಚಾಮುಂಡಿಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿ ಸಿದ ಬಳಿಕ ಸುದ್ದಿಗಾರರೊಂದಿಗೆ ತಮ್ಮ ಬಗ್ಗೆ ಸಚಿವ ಜಮೀರ್‌ ಅಹ್ಮದ್‌ ವರ್ಣಭೇದ ಹಾಗೂ ಜನಾಂಗೀಯ ನಿಂದನೆ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಸಣ್ಣ ಸಣ್ಣ ವಿಷಯಕ್ಕೂ ಕೇಸು ಜಡಿದು ಜೈಲಿಗೆ ಹಾಕುವ ಸಿದ್ದರಾಮಯ್ಯ ಸರಕಾರ ಅವರು ಈಗೇಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೆಟ್ಟ ಹೇಳಿಕೆ ಕೊಟ್ಟ ಸಚಿವರ ಮಾತುಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ನಾಚಿಕೆಗೇಡು. ಇದನ್ನು ನಾಗರಿಕ ಸರಕಾರ ಎಂದು ಕರೆಯಲು ಸಾಧ್ಯವೇ? ಇಂಥ ಹೇಳಿಕೆಗಳನ್ನು ಕೊಟ್ಟ ಎಷ್ಟು ಜನರ ಮೇಲೆ ಕೇಸ್‌ ಹಾಕಿ ಜೈಲಿಗೆ ಕಳಿಸಿಲ್ಲ. ಸರಕಾರ ಯಾಕೆ ಸುಮ್ಮನೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಂತಹ ಸಂಸ್ಕೃತಿಯಿಂದ ಬಂದಿಲ್ಲ
ಕರಿಯ, ಕುಳ್ಳ ಎಂದು ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಸಂಸ್ಕೃತಿಯಿಂದ ನಾನು ಬಂದಿಲ್ಲ. ಆ ವ್ಯಕ್ತಿಯನ್ನು ನಾನೆಂದೂ ಕುಳ್ಳ ಎಂದು ಕರೆದಿಲ್ಲ. ಹಣದ ಮದದಿಂದ ಖರೀದಿ ಮಾಡುವ ಹೇಳಿಕೆ ನೀಡಿದ್ದಾರೆ. ಆತನ ಜತೆ ಸ್ನೇಹ ಇದ್ದದ್ದು ಕೇವಲ ರಾಜಕೀಯವಾಗಿ ಅಷ್ಟೆ ಎಂದು ಕಿಡಿಕಾರಿದರು.

 

ನಾನು, ಚಲುವರಾಯಸ್ವಾಮಿ, ಪುಟ್ಟಣ್ಣ, ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಜತೆಗೆ ಇದ್ದಾಗ ಪನ್ನೀರಾಗಿದ್ದೆವು. ಇವತ್ತು ನಾವು ಕುಮಾರಸ್ವಾಮಿ ಅವರಿಗೆ ವಿರೋಧಿಗಳಾಗಿದ್ದೇವೆ. ಹಾಗಾಗಿ ಕೊಚ್ಚೆಯಂತೆ ಕಾಣುತ್ತಿದ್ದೇವೆ. ಇಬ್ಬರೂ ತಬ್ಬಿಕೊಂಡ ಮೇಲೆ ಇಬ್ಬರೂ ಕೊಚ್ಚೆಯೇ ತಾನೆ. ನಾವೂ ಕೊಚ್ಚೆ, ಅವರೂ ಕೊಚ್ಚೆ.” – ಎಚ್‌.ಸಿ. ಬಾಲಕೃಷ್ಣ, ಮಾಗಡಿ ಕಾಂಗ್ರೆಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next