Advertisement
ಚಾಮರಾಜನಗರ ಜಿಲ್ಲೆ ಇಡೀ ರಾಜ್ಯದಲ್ಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದೆ. ಆದರೆ ಇಲ್ಲಿನ ಸಮೃದ್ಧ ಅರಣ್ಯ ಹಾಗೂ ಜಾನಪದ ಸಂಪತ್ತು ಇಡೀ ವಿಶ್ವದ ಗಮನ ಸೆಳೆಯುತ್ತದೆ. ಜಗತ್ತಿನ ಕಲೈವಾಲ ಹೊರತು ಪಡಿಸಿದರೆ ವಿಶ್ವದ ಎರಡನೇ ಅತ್ಯಂತ ದೊಡ್ಡ ಜಾನಪದ ಭಂಡಾರ ಮಲೆಮಹದೇಶ್ವರದ್ದು.
Related Articles
Advertisement
ಕುರುಚಲು ಕಾಡುಗಳಿಂದ ಕೂಡಿರುವ ಈ ಗುಡ್ಡದಲ್ಲಿ ಸಾವಿರಾರು ವರ್ಷಗಳಿಂದಲೂ ಕೃಷ್ಣಮೃಗಗಳು ಇವೆಯಂತೆ. ಅಕ್ಕಪಕ್ಕದ ಬಾಗಳಿ, ಉಮ್ಮತ್ತೂರು, ಕಾರ್ಯ ಗ್ರಾಮಗಳಿಗೂ ವ್ಯಾಪಿಸಿದೆ. 1.504.39 ಎಕರೆ ಪ್ರದೇಶದ ಅರಣ್ಯಪ್ರದೇಶದ ಜಮೀನು ಪೂರ್ತಿ ಕೃಷ್ಣಮೃಗಗಳೇ. 2015 ರಲ್ಲಿ ಇಲ್ಲಿನ ಜಿಲ್ಲಾಡಳಿತ ಇದನ್ನು 1972 ಅರಣ್ಯ ಕಾಯ್ದೆ 36-ಎ ಪ್ರಕಾರ ಇದನ್ನು ಸಂರಕ್ಷಿ$ತ ಅರಣ್ಯವನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವನೆಯನ್ನು ಸಲ್ಲಿಸಿತ್ತು. 2016 ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ಕಾರ್ಯದರ್ಶಿಯಾದ ವಿಜಯಭಾಸ್ಕರ್ ನೇತೃತ್ವದ ತಂಡವು ಇಲ್ಲಿಗೆ ಭೇಟಿ ನೀಡಿತು. ಇದನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸುವಂತೆ ವರದಿಯನ್ನು ಸಲ್ಲಿಸಿದೆ. ಸರ್ಕಾರವು ಇದಕ್ಕೆ ಸಮ್ಮತಿ ನೀಡಿದೆ.
ಉಮ್ಮತ್ತೂರು ಗುಡ್ಡದಲ್ಲಿ ಕೃಷ್ಣಮೃಗಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಇಲ್ಲಿನ ಕುರುಚಲು ಕಾಡಿನಲ್ಲಿ ಸಮೃದ್ಧ ಹಸಿರು ಇವಕ್ಕೆ ಲಭ್ಯವಾಗುತ್ತದೆ. ಜೊತೆಗೆ ಕುಡಿಯುವ ನೀರಿಗೂ ತೊಂದರೆ ಇಲ್ಲ. ಆದರೆ ಬೇಸಿಗೆಯಲ್ಲಿ ಮೇವು ಹಾಗೂ ನೀರನ್ನರಸಿ ಇವು ಅಕ್ಕಪಕ್ಕದ ಗ್ರಾಮಗಳಾದ ಉಮ್ಮತ್ತೂರು, ಕುದೇರು, ಬಾಗಳಿ, ಹನುಮನಪುರ, ಜನ್ನೂರು, ಹೊಸೂರು, ಕಾರ್ಯ, ದಾಸನೂರು ಸೇರಿದಂತೆ ಅನೇಕ ಗ್ರಾಮಗಳ ರೈತರ ಜಮೀನುಗಳ ಕಡೆ ಹೋಗುತ್ತವೆ. ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
ಗುಂಪುಗುಂಪಾಗಿ ಇವು ಫಸಲಿನ ಮೇಲೆ ದಾಳಿ ಇಡುವುದರಿಂದ ಬೆಳೆನಷ್ಟವಾಗುತ್ತದೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಲಾಗಿದೆ. ಅರಣ್ಯ ವ್ಯಾಪ್ತಿಯ ಪ್ರದೇಶದ ಸುತ್ತ ಸೋಲಾರ್ ಬೇಲಿಯನ್ನು ಅಳವಡಿಸಬೇಕು. ಜೊತೆಗೆ ಬೇಸಿಗೆಯಲ್ಲಿ ಅರಣ್ಯದೊಳಗೆ ನಿುìಸಿರುವ ಚೆಕ್‌ಡ್ಯಾಂ ಹಾಗೂ ಇರುವ ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಿದರೆ ಕೃಷ್ಣಮೃಗಗಳು ಹೊರಗೆ ಬರುವುದಿಲ್ಲ ಎನ್ನುತ್ತಾರೆ ಗ್ರಾಮದ ಬಸವರಾಜು, ಪ್ರಕಾಶ, ಪುಟ್ಟಣ್ಣ, ಅವಿನಾಶ್.
ಕೃಷ್ಣಮೃಗಗಳ ವೈಜಾnನಿಕ ಹೆಸರು ಆಂಟಿಲೋಪ್ ರ್ಸೆಕಾಪ್. ಇದು ಲ್ಯಾಟಿನ್ ಪದದ ಅಂಟಲೋಪಸ್ ಅಂದರೆ ಕೊಂಬುಗಳುಳ್ಳ ಪ್ರಾಣಿ ಎಂಬುದಾಗಿದೆ. ಇದನ್ನು ಇಂಡಿಯನ್ ಆಂಟೆಲೋಪ್, ಕಡಿಯಾಲ್, ಕಾಲಾರನ್, ಕೃಷ್ಣಸಾರ ತೆಲುಗಿನಲ್ಲಿ ಕೃಷ್ಣಜಿಂಕ, ತಮಿಳಿನಲ್ಲಿ ಇರಲೈಮಾನ್ ಎನ್ನುತ್ತಾರೆ. ತುಂಬಾ ಸಂಕೋಚದ ಸ್ವಭಾವ ಹೊಂದಿರುವ ಈ ಪ್ರಾಣಿಗಳು ಹೆಚ್ಚಾಗಿ ಕುರುಚಲು ಕಾಡುಗಳಲ್ಲಿ ವಾಸಮಾಡುತ್ತವೆ.
ಉಮ್ಮತ್ತೂರಿನ ಸುತ್ತಮುತ್ತ ಬರೀ ಕುರುಚಲು ಗಿಡಗಳಿವೆ. ಇದರಿಂದ ಕೃಷ್ಣಮೃಗಗಳು ಬದುಕು ಸುಲಭವಾಗಿದೆ.
ನೀರಿಗಾಗಿ ಮೈಲುಗಟ್ಟಲೆ ದೂರ ಹೋಗುವ ಇವು ಅದು ಸಿಕ್ಕನಂತರ ತಮ್ಮ ಸ್ವಸ್ಥಾನವನ್ನು ಸೇರುತ್ತವೆ. ಹೆಚ್ಚಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ತನ್ನೊಳಗೆ ಎಲ್ಲೆಯನ್ನು ಗುರುತಿಸಿಕೊಂಡಿರುತ್ತದೆ. ಇದರ ಜೀತಾವಧಿ 14 ರಿಂದ 16 ವರ್ಷ. ಗಂಡು ಜಿಂಕೆಗಳಿಗೆ ಸುರುಳಿಯಾಕಾರದ ಕೊಂಬು ಇರುತ್ತದೆ.
ಗುಜರಾತ್‌ನ ಗೀರ್ , ಬಿಹಾರದ ಕೈಮೂರ್ ನಮ್ಮಲ್ಲಿ ಗುಂಡ್ಯ ರಾಷ್ಟ್ರೀಯ ವನ್ಯಜೀವಿಧಾಮ ಹಾಗೂ ತುಮಕೂರಿನ ಜಯಮನಗಲಿ ಹಾಗೂ ರಾಣೆಬೆನ್ನೂರನ್ನು ಕೃಷ್ಣಮೃಗಗಳಧಾಮಗಳಾಗಿ ಘೋಷಣೆ ಮಾಡಲಾಗಿದೆ.
ಇದರೊಂದಿಗೆ ಉಮ್ಮತ್ತೂರು ಅರಣ್ಯ ಪ್ರದೇಶವೂ ಕೃಷ್ಣಮೃಗಧಾಮವಾದಲ್ಲಿ ರಾಜ್ಯದಲ್ಲಿ ಮೂರು ಕೃಷ್ಣಮೃಗಧಾಮಗಳಾಗುತ್ತವೆ. ಐನೂರಕ್ಕೂ ಹೆಚ್ಚು ಕೃಷ್ಣಮೃಗಗಳ ಗುಂಪು ಇಲ್ಲಿ ವಾಸವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ರಕ್ಷಿತ ಅರಣ್ಯ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರ, ಕಾವೇರಿ ವನ್ಯಧಾಮಗಳೊಂದಿಗೆ ಉಮ್ಮತ್ತೂರು ಕೃಷ್ಣಮೃಗದಾಮವೂ ಸೇರ್ಪಡೆ ಗೊಂಡರೆ ಚೆನ್ನ.
ಫೈರೋಜ್ ಖಾನ್