ಜಕಾರ್ತಾ: ಶನಿವಾರ ಜಾವಾ ಸಮುದ್ರದಲ್ಲಿ ಪತನಗೊಂಡ ಇಂಡೋನೇಷ್ಯಾದ ವಿಮಾನದ ಎರಡು ಬ್ಲ್ಯಾಕ್‌ಬಾಕ್ಸ್‌ಗಳು ಭಾನುವಾರ ಪತ್ತೆಯಾಗಿದೆ.
ನೌಕಾಪಡೆಯ ಹಡಗಿನ ಸೋನಾರ್ ವ್ಯವಸ್ಥೆಯು ಈ ವಿಮಾನದ ದತ್ತಾಂಶ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ ರೆಕಾರ್ಡರ್‌ಗಳ ತುರ್ತು ಸಂಕೇತಗಳನ್ನು ಪತ್ತೆಹಚ್ಚಿದೆ. ಕೂಡಲೇ ಆ ಪ್ರದೇಶಕ್ಕೆ ತೆರಳಿ ಹುಡುಕಾಟ ನಡೆಸಿದಾಗ ಎರಡೂ ಬ್ಲ್ಯಾಕ್‌ಬಾಕ್ಸ್‌ಗಳು ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ವಿಮಾನದ ಕೆಲವು ಅವಶೇಷಗಳು, ಮಾನವ ಶರೀರದ ಭಾಗಗಳು, ಮಕ್ಕಳ ಬಟ್ಟೆಗಳನ್ನು ಕೂಡ ರಕ್ಷಣಾ ಸಿಬ್ಬಂದಿ ಸಮುದ್ರದಿಂದ ಹೊರತೆಗೆದಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಶನಿವಾರ ಜಕಾರ್ತಾದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವು ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡು, ಸಮುದ್ರದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿ 62 ಮಂದಿ ಇದ್ದರು.
ಇದನ್ನೂ ಓದಿ:ಸಸಿಹಿತ್ಲು ಬೀಚ್‌ನಲ್ಲಿ ನೀರಿಗಿಳಿದ 7 ಮಂದಿ ರಕ್ಷಣೆ: ಓರ್ವ ಸಾವು, ಮತ್ತೋರ್ವ ನೀರು ಪಾಲು