Advertisement

ಕಪ್ಪು ಬಾಕ್ಸ್‌ : ತನಿಖೆಗೆ ಆಗ್ರಹ

03:09 AM Apr 15, 2019 | sudhir |

ಹೊಸದಿಲ್ಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚಿತ್ರದುರ್ಗಕ್ಕೆ ರ್ಯಾಲಿಗೆ ಆಗಮಿಸಿದಾಗ ಕಪ್ಪು ಬಣ್ಣದ ಪೆಟ್ಟಿಗೆಯೊಂದನ್ನು ಹೆಲಿಕಾಪ್ಟರ್‌ನಿಂದ ಖಾಸಗಿ ವಾಹನವೊಂದಕ್ಕೆ ಸಾಗಿಸಿದ್ದು ಈಗ ಭಾರೀ ಚರ್ಚೆಗೀಡಾಗಿದೆ.

Advertisement

ಈ ಬಾಕ್ಸ್‌ ಅನ್ನು ಹೆಲಿಕಾಪ್ಟರ್‌ನಿಂದ ಖಾಸಗಿ ಕಾರಿಗೆ ಹಾಕಿ ತೆಗೆದುಕೊಂಡು ಹೋದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದು, ಇದರಲ್ಲಿ ಏನಿತ್ತು ಎಂಬ ಬಗ್ಗೆ ಊಹಾ ಪೋಹಗಳು ಗರಿಗೆದರಿವೆ. ಈ ಕುರಿತು ಕೂಡಲೇ ಚುನಾವಣ ಆಯೋಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ವಕ್ತಾರ ಆನಂದ ಶರ್ಮಾ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

ಪ್ರಧಾನಿ ಕಾಪ್ಟರ್‌ಗೆ ಇನ್ನೂ ಮೂರು ಹೆಲಿಕಾಪ್ಟರ್‌ಗಳು ಬೆಂಗಾವಲಾಗಿ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಈ ಕಾಪ್ಟರ್‌ ಚಿತ್ರದುರ್ಗದಲ್ಲಿ ಲ್ಯಾಂಡ್‌ ಆದ ಬಳಿಕ ಒಂದು ಕಪ್ಪು ಬಣ್ಣದ ಟ್ರಂಕ್‌ ಅನ್ನು ತೆಗೆದು ಖಾಸಗಿ ಕಾರಿನಲ್ಲಿ ತೆಗೆದುಕೊಂಡು ಹೋಗಲಾಗಿದೆ. ಈ ಖಾಸಗಿ ಕಾರು ಎಸ್‌ಪಿಜಿ ಪಡೆಯ ಭಾಗವಾಗಿರಲಿಲ್ಲ ಎಂದು ಆನಂದ್‌ ಶರ್ಮಾ ಆರೋಪಿಸಿದ್ದಾರೆ. ಇದರಲ್ಲಿ ನಗದು ತುಂಬಿಟ್ಟಿರಬಹುದು ಎಂದು ಶರ್ಮಾ ಶಂಕೆ ವ್ಯಕ್ತಪಡಿಸಿದ್ದಾರೆ.

ತನಿಖೆ ನಡೆಸಲಿ
ಆದಾಯ ಇಲಾಖೆ ಅಧಿಕಾರಿಗಳಿಗೆ ತಾಕತ್ತು ಇದ್ದರೆ ಪ್ರಧಾನಿ ಮೋದಿ ವಿಮಾನದಲ್ಲಿ ತಂದಿದ್ದ ಬ್ಲಾಕ್‌ ಬಾಕ್ಸ್‌ ಬಗ್ಗೆ ತನಿಖೆ ನಡೆಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸವಾಲು ಹಾಕಿದ್ದಾರೆ. ವಿಮಾನದಿಂದ ಖಾಸಗಿ ಕಾರಿನಲ್ಲಿ ಅಷ್ಟೊಂದು ತರಾ ತುರಿಯಲ್ಲಿ ಕಪ್ಪು ಬಾಕ್ಸ್‌ ಕಳುಹಿಸಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಐಟಿ ಮತ್ತು ಆಯೋಗ ತನಿಖೆ ನಡೆಸಬೇಕು ಎಂದಿದ್ದಾರೆ.

ಕಪ್ಪು ಪೆಟ್ಟಿಗೆ ವಿಶೇಷ ಭದ್ರತಾ ಪಡೆಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಎಸ್‌ಪಿಜಿಯ ಭದ್ರತಾ ಸಲಕರಣೆಗಳು ಇದ್ದವು.
– ಡಿ.ಕೆ. ಅರುಣ್‌ ಚಿತ್ರದುರ್ಗ ಎಸ್‌ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next