ಬೆಂಗಳೂರು: ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆ.ಎಸ್. ಈಶ್ವರಪ್ಪನವರ ಹೇಳಿಕೆ ಸರಿಯಲ್ಲ, ಇದು ಅಶಾಂತಿ ಸೃಷ್ಟಿಸುವ ಹೇಳಿಕೆ ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟೀಕೆ ಮಾಡಿದರು.
ಡಿ ಕೆ ಶಿವಕುಮಾರ್ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ಹಿಂದೂ ಕಾರ್ಯಕರ್ತನ ಕೊಲೆ ಮಾಡಿದ್ದಾರೆಂಬ ಈಶ್ವರಪ್ಪನವರ ಆರೋಪಕ್ಕೆ ಹರಿಪ್ರಸಾದ್ ತಿರುಗೇಟು ನೀಡಿದರು.
ಇದನ್ನೂ ಓದಿ:ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ಲಾಭ ಪಡೆಯಲು ಬೇರೆಯವರಿಗೆ ಅವಕಾಶ ನೀಡಬಾರದು: ಡಿಕೆಶಿ
ಅಪರಾಧಿಗಳು ಯಾರೆಂದು ಇನ್ನೂ ತನಿಖೆಯೇ ಆಗಿಲ್ಲ. ಆಗಲೇ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ನಾವು ರಾಜೀನಾಮೆ ಕೇಳುತ್ತಿದ್ದೇವೆ, ಅದನ್ನ ಅವರು ಕೊಡಲೇಬೇಕು. ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು ಎಂದು ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.
ಎಸ್ ಪಿ-ಡಿಸಿ ಜೊತೆ ಮಾತನಾಡಿದ್ದೇನೆ: ಘಟನೆಯ ಬಗ್ಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಈ ಬಗ್ಗೆ ಎಸ್ ಪಿ ಮತ್ತು ಡಿಸಿ ಅವರ ಜೊತೆ ಮಾತನಾಡಿದ್ದೇನೆ. ಶ್ರೀಘ್ರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧನ ಮಾಡಲಿದ್ದಾರೆ. ಗೃಹ ಸಚಿವರು ಶಿವಮೊಗ್ಗದಲ್ಲೇ ಇದ್ದಾರೆ. ಸದನ ಮುಗಿಸಿಕೊಂಡು ನಾನು ಶಿವಮೊಗ್ಗಕ್ಕೆ ತೆರಳುತ್ತೇನೆ. 6 ತಿಂಗಳ ಹಿಂದೆ ಜಗಳವಾಗಿತ್ತು ಎಂಬ ಮಾಹಿತಿ ಇದೆ. ಯಾವ ಕಾರಣಕ್ಕೆ ಎನ್ನುವುದು ಗೊತ್ತಿಲ್ಲ. ತನಿಖೆ ನಡೆಯುತ್ತಿದೆ..ಮಧ್ಯಾಹ್ನ ಎಸ್ ಪಿಯವರಿಂದ ಮತ್ತಷ್ಟು ಮಾಹಿತಿ ಪಡೆದು ತಿಳಿಸುತ್ತೇನೆ ಎಂದರು.