Advertisement
ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿ, ಧರ್ಮದ ಹೆಸ ರಲ್ಲಿ ರಾಜಕೀಯ, ಕೊಲೆ ನಡೆ ಯುವ ಕಾರಣ ಕರಾವಳಿ ಜಿಲ್ಲೆಗಳ ಹೆಸರು ಹಾಳಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದ ಅವರು, ಅಭಿವೃದ್ಧಿ ಹಾಗೂ ಶಾಂತಿಯ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತರಾಗಿ ಮತದಾನ ಮಾಡಬೇಕು ಎಂದರು.
ಹಿಂದೆ ಕಾಂಗ್ರೆಸ್ ಉಳುವವನೇ ಭೂಮಿಯ ಒಡೆಯ ಕಾನೂನು ತಂದು ಜನರಿಗೆ ಭೂಮಿ ಹಂಚಿತ್ತು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ನರೇಗಾ ಯೋಜನೆ ಜಾರಿಗೆ ತಂದು ಜನರಿಗೆ ಉದ್ಯೋಗ ನೀಡಿತ್ತು. ಕೊರೊನಾದಂಥ ಸಂಕಷ್ಟ ಕಾಲದಲ್ಲಿ ನರೇಗಾ ಜನರ ಕೈ ಹಿಡಿದಿತ್ತು. ಆದರೆ ಬಿಜೆಪಿ ಸರಕಾರ ಈ ಯೋಜನೆಯ ಕತ್ತು ಹಿಸುಕಿದೆ ಎಂದರು. ಆರ್.ವಿ. ದೇಶಪಾಂಡೆ ಮಾತನಾಡಿ, ಪಕ್ಷದ ವಿವಿಧ ಯೋಜನೆಗಳ ಕುರಿತು ಮನೆ ಮನೆಗೆ ಹೋಗಿ ಜನರಿಗೆ ಮಾಹಿತಿ ಕೊಡಬೇಕು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಮಾತನಾಡಿದರು.
Related Articles
Advertisement
ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ ಸ್ವಾಗತಿಸಿ, ಅಬ್ದುಲ್ ಗಫೂರ್ ಕಲ್ಮಡ್ಕ ವಂದಿಸಿದರು. ಅಶೋಕ್ ಚೂಂತಾರು ಹಾಗೂ ಸಚಿನ್ ರಾಜ್ ಶೆಟ್ಟಿ ನಿರೂಪಿಸಿದರು.
ವನವಾಸದಿಂದ ಮುಕ್ತರಾಗಲು ಶ್ರಮಿಸಿ: ದೇಶಪಾಂಡೆಉಪ್ಪಿನಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಗೆಲುವು ನಮ್ಮದಾಗಲಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ನೆಲ್ಯಾಡಿಯಲ್ಲಿ ರವಿವಾರ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಯ ಕ್ಷೇತ್ರದಲ್ಲಿ 35 ವರ್ಷಗಳಿಂದ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ವನವಾಸದಿಂದ ಮುಕ್ತರಾಗಬೇಕು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಬಿಜೆಪಿ ಸರಕಾರದ ದುರಾಡಳಿತವನ್ನು ತಿಳಿಸಿ ಮತದಾರರ ಮನಸ್ಸು ಗೆಲ್ಲಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.