Advertisement

ನಿದ್ರಾವಸ್ಥೆಯಲ್ಲಿ ರಾಜ್ಯ ಸರಕಾರ: ಹರಿಪ್ರಸಾದ್‌

01:41 AM Jul 21, 2022 | Team Udayavani |

ಮಂಗಳೂರು: ಕರಾವಳಿಯಲ್ಲಿ ಪ್ರತೀ ವರ್ಷ ನೆರೆ, ಭೂಕುಸಿತ ದಂತಹ ನೈಸರ್ಗಿಕ ವಿಕೋಪ ಸಂಭವಿಸುತ್ತಿದೆ. ಅದು ಗೊತ್ತಿದ್ದರೂ ರಾಜ್ಯ ಸರಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿಲ್ಲ. ಇನ್ನೊಂದೆಡೆ ಸರಿಯಾದ ಪರಿಹಾರವನ್ನೂ ಒದಗಿಸಿಲ್ಲ, ಸರಕಾರವೇ ಸ್ಲೀಪಿಂಗ್ ಮೋಡ್‌ನ‌ಲ್ಲಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

Advertisement

2 ದಿನಗಳಲ್ಲಿ ಜಿಲ್ಲೆಯ ವಿವಿಧ ಅತಿವೃಷ್ಟಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅರಿತಿ ದ್ದೇನೆ. ಉಳ್ಳಾಲ ಬಟ್ಟಪ್ಪಾಡಿ, ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಒಂದೆಡೆ ಎಡಿಬಿ ಕಾಮಗಾರಿಯಲ್ಲೂ ಅವ್ಯವಹಾರ ನಡೆದ ಆರೋಪವಿದೆ. ಕಡಲ್ಕೊರೆತ ತಡೆ ಕಾಮಗಾರಿ ಪೂರ್ತಿಗೊಳಿಸದೆ ಮತ್ತಷ್ಟು ಮನೆಗಳು ಅಪಾಯದ ಅಂಚಿಗೆ ತಲುಪಿವೆ. ತತ್‌ಕ್ಷಣ ಬಾಕಿ ಕಾಮಗಾರಿಗಳನ್ನು ಕೈಗೊಂಡು ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸಬೇಕು. ತೀವ್ರ ಮಳೆಯಿಂದ ತೊಂದರೆಗೊಳಗಾದವರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ತತ್‌ಕ್ಷಣ ಪರಿಹಾರ ವಿತರಿಸಬೇಕು ಎಂದರು.

2 ವರ್ಷ ಹಿಂದೆ ಮಳಲಿ ಗ್ರಾಮದಲ್ಲಿ ಗುಡ್ಡ ಕುಸಿದು ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ಇನ್ನೂ 15-20ರಷ್ಟು ಮನೆಯವರಿಗೆ ಪುನರ್ವಸತಿ ಕಲ್ಪಿಸಿಲ್ಲಪಕ್ಕದ ಗ್ರಾಮದಲ್ಲೂ ಬರಲು ಜನರು ಬಿಡುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಂಗಳೂರು ಡಿಸಾಸ್ಟರ್‌ ಸಿಟಿ
ಬೆಂಗಳೂರಿನ ಬಳಿಕ ಟೈರ್‌ 2 ಸಿಟಿ ಎನ್ನಿಸಿಕೊಂಡ ಮಂಗಳೂರು ನಗರ ಹೆಸರಿಗೆ ಮಾತ್ರ ಸ್ಮಾರ್ಟ್‌ ಸಿಟಿ. ಇಲ್ಲಿನ ಸ್ಥಿತಿ ನೋಡಿದರೆ “ಡಿಸಾಸ್ಟರ್‌ ಸಿಟಿ’ ಆಗಿದೆ. ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು. ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಮುದ್ರಣ ಕಾಗದ ಬರದೆ ಪಠ್ಯಪುಸ್ತಕ ವಿತರಿಸ ಲಾಗಿಲ್ಲ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಇದು ಎತ್ತಿಗೆ ಜ್ವರ ಬಂದರ ಎಮ್ಮೆಗೆ ಬರೆ ಹಾಕಿ ದಂತಾಗಿದೆ. ನಮ್ಮ ದೇಶಕ್ಕೆ ಅತಿ ಹೆಚ್ಚು ಪೇಪರ್‌ ಆಮದು ಆಗುತ್ತಿರುವುದು ಕೆನಡಾ ದಿಂದ. ಭಾರತದ ಕಂಪೆನಿಗಳು ತಮ್ಮ ಲಾಭಕ್ಕಾಗಿ ರಫ್ತು ಮಾಡುತ್ತಿವೆ. ಈ ಲಾಭವನ್ನು ಬಿಟ್ಟು ಮೊದಲು ಮಕ್ಕಳ ಪಠ್ಯಪುಸ್ತಕ ವಿತರಣೆಗೆ ಕ್ರಮ
ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ಮುಖಂಡರಾದ ಎಂ. ಶಶಿಧರ ಹೆಗ್ಡೆ, ಅಬ್ದುಲ್‌ ರವೂಫ್, ಶಾಹುಲ್‌ ಹಮೀದ್‌, ನೀರಜ್‌ಪಾಲ್‌, ಅಶ್ರಫ್‌ ಬಜಾಲ್‌, ಶುಭೋದಯ ಆಳ್ವ, ಟಿ.ಕೆ. ಸುಧೀರ್‌, ಅನ್ವಿತ್‌ ಕಟೀಲು ಉಪಸ್ಥಿತರಿದ್ದರು.

Advertisement

ಜಾತಿ ಹೆಸರಲ್ಲಿ ಸಂಘಟನೆ ಕಟ್ಟಬಹುದು ರಾಜಕೀಯ ಅಸಾಧ್ಯ
ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಹರಿಪ್ರಸಾದ್‌ ಟಾಂಗ್‌
ಮಂಗಳೂರು: ಜಾತಿ ಹೆಸರು ಹೇಳಿಕೊಂಡು ಜಾತಿ ಸಂಘಟನೆ ಕಟ್ಟಬಹುದು, ಆದರೆ ರಾಜಕೀಯ ಮಾಡಲಾಗದು. ಅವರಿಗೆ ಅಷ್ಟೊಂದು ಶಕ್ತಿ ಇದ್ದರೆ ಅವರದ್ದೇ ಜಾತಿ ಹೆಸರಿನಲ್ಲಿ ಸಂಘಟನೆ, ಪಕ್ಷ ಕಟ್ಟಿ ಸಿಎಂ ಆಗಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕು ಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರಿಗೂ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋ ಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದು ಹಾಗೂ ಡಿಕೆಶಿ ಅವರ ಮೇಲಾಟದ ಬಗ್ಗೆ ಪ್ರತಿಕ್ರಿಯಿಸಿದರು.

ಎಲ್ಲ ಜಾತಿ ಧರ್ಮದವರು ಎಲ್ಲ ಭಾಷೆ, ಪ್ರಾಂತದವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಆಯ್ಕೆಯಾಗುವ ಶಾಸಕರ ಅಭಿಪ್ರಾಯ ತಿಳಿದು ಹೈಕಮಾಂಡ್‌ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ. ಇದು ಕಾಂಗ್ರೆಸ್‌ನ ಸಂಪ್ರದಾಯ. ಅಂತಿಮವಾಗಿ ಕಾರ್ಯ ಕರ್ತರದ್ದೇ ತೀರ್ಮಾನ ಎಂದರು.

ಸಿದ್ದರಾಮೋತ್ಸವ ಎನ್ನುವುದು ಪಕ್ಷದ ಕಾರ್ಯಕ್ರಮ ಅಲ್ಲ, ಅಭಿಮಾನಿಗಳ ಕಾರ್ಯಕ್ರಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next