Advertisement
ನಗರದ ಹೊರ ಭಾಗದಲ್ಲಿರುವ ಜಿಎಂಐಟಿ ಪಕ್ಕದ 400 ಎಕರೆ ಜಾಗದಲ್ಲಿ 1000/600 ಅಡಿ ಸುತ್ತಳತೆಯ ಬೃಹತ್ ಪೆಂಡಾಲ್, ಪ್ರಮುಖ ವೇದಿಕೆ ಒಳಗೊಂಡಂತೆ ಇನ್ನೆರಡು ಸಮಾನಾಂತರ ವೇದಿಕೆ ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ 100 ಜನರಿಗಾಗಿ ಮುಖ್ಯ ವೇದಿಕೆ, ಇತರೆ ಎರಡು ವೇದಿಕೆಯಲ್ಲಿ ಶಾಸಕರು, ಪದಾಧಿಕಾರಿಗಳು, ಮಾಜಿ ಶಾಸಕರು, 39 ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಿಗೆ ವ್ಯವಸ್ಥೆ ಮಾಡಲಾಗಿದೆ.
Related Articles
ಪ್ರಧಾನಿ ನರೇಂದ್ರ ಮೋದಿ ಸ್ವತಃ ಜನರ ಅತಿ ಸನಿಹಕ್ಕೆ ಬರಲು ಅಪೇಕ್ಷಿಸಿರುವುದರಿಂದ ಇದೇ ಮೊದಲ ಬಾರಿಗೆ ಪೆಂಡಾಲ್ನಲ್ಲೇ ರೋಡ್ ಶೋ ವ್ಯವಸ್ಥೆ ಮಾಡಲಾಗಿದೆ. ಮೂರು ವೇದಿಕೆಗಳ ಮಧ್ಯದಲ್ಲಿ ಮೋದಿ ಜನರ ಅತೀ ಸಮೀಪವೇ ತೆರೆದ ವಾಹನದಲ್ಲಿ ಆಗಮಿಸಲಿದ್ದಾರೆ. 30 ಅಡಿಗೂ ಹೆಚ್ಚು ಅಗಲದ ಸುವ್ಯವಸ್ಥಿತ ತಾತ್ಕಾಲಿಕ ರಸ್ತೆ ನಿರ್ಮಾಣದ ಕಾರ್ಯ ನಡೆದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಪೆಂಡಾಲ್ ಒಳಗಡೆಯೇ ರೋಡ್ ಶೋ ನಡೆಸಲಾಗುತ್ತಿದೆ.
Advertisement
ಸಿದ್ದರಾಮೋತ್ಸವಕ್ಕೆ ಟಕ್ಕರ್ಕಾಂಗ್ರೆಸ್ ನಾಯಕರೆಲ್ಲ ಸೇರಿ ಇದೇ ನೆಲದಲ್ಲಿ ಕಳೆದ ವರ್ಷ ಆ.3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನೋತ್ಸವ ನಿಮಿತ್ತ ಸಿದ್ದರಾಮೋತ್ಸವ ಆಚರಿಸಿದ್ದರು. ಇದು ರಾಜ್ಯದಲ್ಲಿ ತಕ್ಕ ಮಟ್ಟಿಗೆ ಕಾಂಗ್ರೆಸ್ ಅಲೆ ಸೃಷ್ಟಿಗೆ ಕಾರಣವಾಗಿತ್ತು. ಈಗ ಇದೇ ನೆಲದಲ್ಲಿ ನಿಂತು ಮಹಾಸಂಗಮದ ಮೂಲಕ ಪ್ರಧಾನಿ ಮೋದಿ ರಾಜ್ಯದಲ್ಲಿ ಕಮಲ ತರಂಗಗಳನ್ನೆಬ್ಬಿಸಲು ಸಜ್ಜಾಗಿದ್ದಾರೆ. ಇದು ರಾಜಕೀಯವಾಗಿ ಕಾಂಗ್ರೆಸ್ನ ಸಿದ್ದರಾಮೋತ್ಸವಕ್ಕೆ ಬಿಜೆಪಿ ನೀಡುವ ಠಕ್ಕರ್ ಆಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.