ಹಳೆಯಂಗಡಿ: ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆಯನ್ನು ತಾನು ವೈಯಕ್ತಿಕವಾಗಿ ಸಮರ್ಥಿಸುವುದಿಲ್ಲ, ಗಲಭೆಗೆ ಪ್ರಚೋದನೆ ನೀಡಿದ ಬಿಜೆಪಿಯ ಷಡ್ಯಂತ್ರ ಖಂಡನೀಯ ಎಂದು ಮಾಜಿ ಶಾಸಕ ಐವನ್ ಡಿಸೋಜ ಹೇಳಿದರು.
ಅವರು ಹಳೆಯಂಗಡಿಯಲ್ಲಿ ಇಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸಭೆಯನ್ನು ಕರೆದಿದ್ದ ಸಭಾಪತಿಯನ್ನು ದಿಗ್ಭಂದನ ವಿಧಿಸಲು ಪ್ರಯತ್ನ ನಡೆಸಿದ್ದು, ಉಪ ಸಭಾಪತಿಯನ್ನು ನಿಯಮ ಮೀರಿ ಕುಳ್ಳಿರಿಸಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯ. ಇದಕ್ಕೆ ನೇರ ಹೊಣೆ ಬಿಜೆಪಿಯಾಗಿದೆ. ಅಧಿಕಾರದ ಮದದಲ್ಲಿ ಮೂರ್ಖತನದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವೇ ಇಲ್ಲದಿರುವುದರಿಂದ ಈ ಘಟನೆ ನಡೆದಿದೆ ಎಂದರು.
ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇದ್ದಲ್ಲಿ, ಗಟ್ಟಿತನ ಇದ್ದಲ್ಲಿ ಅಂದು ಸಭೆಯನ್ನು ನಡೆಸಲು ಮುಕ್ತ ಅವಕಾಶ ನೀಡಬೇಕಾಗಿತ್ತು. ಅದು ಬಿಟ್ಟು ‘ಹೊಯ್ ಕೈ’ ನಡೆಸಲು ಪ್ರೇರಣೆ ನೀಡಿದ್ದು ಆ ಪಕ್ಷದ ಸಿದ್ಧಾಂತವನ್ನು ತೋರಿಸುತ್ತದೆ ಎಂದು ಹೇಳಿದರು.
ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ ಆರ್ಡಿನೇಟರ್ ಎಚ್.ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸೆಸ್ ಹೆಚ್ಚಳ ವಿರೋಧಿಸಿ ಡಿ. 21ರಂದು ರಾಜ್ಯಾದ್ಯಾಂತ ಎಪಿಎಂಸಿ ಬಂದ್